ಜಿಲ್ಲೆಗಳು

ಮೇಯರ್ : ಜಾ. ದಳದ ಆಕಾಂಕ್ಷಿಗಳ ನಡುವೆ ಪೈಪೋಟಿ

ಸಾ.ರಾ.ಮಹೇಶ್ ಮನವೊಲಿಕೆಗೆ ಕಸರತ್ತು ನಡೆಸುತ್ತಿರುವ ಆಕಾಂಕ್ಷಿತರು

ಕೆ.ಬಿ.ರಮೇಶನಾಯಕ

ಮೈಸೂರು: ಕೊಡು-ಕೊಳ್ಳುವಿಕೆಯ ಸೂತ್ರದಡಿ ಈ ಬಾರಿಯ ಚುನಾವಣೆಯಲ್ಲಿ ಮಹಾಪೌರ ಸ್ಥಾನವನ್ನು ಪಡೆಯುವ ನಿರೀಕ್ಷೆಯಲ್ಲಿರುವ ಜಾ.ದಳದಲ್ಲಿ ಮಹಾಪೌರ ಸ್ಥಾನಕ್ಕಾಗಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಉಂಟಾಗಿದ್ದು, ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ನಾಯಕರಿಗೆ ಹೊಸದೊಂದು ತಲೆನೋವು ಶುರುವಾಗಿದೆ.

ಮಹಾಪೌರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆ.ವಿ.ಶ್ರೀಧರ್, ಎಸ್‌ಬಿಎಂ ಮಂಜು, ಎಂ.ಡಿ.ನಾಗರಾಜು, ಪ್ರೇಮಾ ಶಂಕರೇಗೌಡ, ಅಶ್ವಿನಿ ಅನಂತು, ರಮಣಿ, ಭಾಗ್ಯ ಮಾದೇಶ್, ಲಕ್ಷ್ಮೀ ಶಿವಣ್ಣ, ನಮ್ರತಾ ರಮೇಶ್ ಶಾಸಕ ಸಾ.ರಾ.ಮಹೇಶ್ ಮನವೊಲಿಕೆಗೆ ತೀವ್ರ ಪ್ರಯತ್ನ ನಡೆಸುತ್ತಿರುವುದು ಅಭ್ಯರ್ಥಿ ಆಯ್ಕೆ ಕಗ್ಗಂಟಾಗುವ ಸಾಧ್ಯತೆ ಇದೆ.

ಜಾ.ದಳ ಹಾಗೂ ಬಿಜೆಪಿ ಮೈತ್ರಿ ಮಾತುಕತೆ ಸಫಲವಾದರೆ ಪೈಪೋಟಿ ಹೆಚ್ಚಾಗುವ ಸಾಧ್ಯತೆ ಇದ್ದು, ಹಲವು ಮಾನದಂಡಗಳನ್ನು ಅನುಸರಿಸಿ ಮಹಾಪೌರ ಸ್ಥಾನದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವರಿಷ್ಠರು ಮುಂದಾಗಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಕಾಂಕ್ಷಿಗಳು ಹಾಗೂ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿದ್ದು, ಮೈತ್ರಿ ವಿಚಾರ, ಮಹಾಪೌರ ಸ್ಥಾನದ ಅಭ್ಯರ್ಥಿ ಆಯ್ಕೆ ನಿರ್ಧಾರವನ್ನು ಹೈಕಮಾಂಡ್ ವಿವೇಚನೆಗೆ ಬಿಡಲಾಗಿದೆ.

ಪತ್ನಿ ಪರ ಅಖಾಡಕ್ಕಿಳಿದ ಮಾಜಿ ಸದಸ್ಯ: ಚಾಮರಾಜ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಯಕೆ ಹೊಂದಿರುವ ನಗರಪಾಲಿಕೆ ಮಾಜಿ ಸದಸ್ಯ ಕೆ.ಮಾದೇಶ್ ಪತ್ನಿ ಭಾಗ್ಯರನ್ನು ಮಹಾಪೌರ ಸ್ಥಾನದಲ್ಲಿ ಕೂರಿಸಲು ಅಖಾಡಕ್ಕೆ ಇಳಿದಿದ್ದಾರೆ. ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಅವರ ಆಪ್ತರಾಗಿರುವ ಕೆ.ಮಾದೇಶ್ ಈ ಬಾರಿ ಅವಕಾಶ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಿರಿತನ ಹಾಗೂ ಪಕ್ಷನಿಷ್ಠೆಯ ಆಧಾರದ ಮೇಲೆ ಎರಡನೇ ಬಾರಿಗೆ ಗೆದ್ದಿರುವ ಎಸ್‌ಬಿಎಂ ಮಂಜು ಮೇಲೆ ಕೆಲವು ಸದಸ್ಯರ ಒಲವು ಇದೆ. ಸಾ.ರಾ.ಮಹೇಶ್ ಅವರು ಉಪ ಚುನಾವಣೆಯಲ್ಲಿ ಎಸ್‌ಬಿಎಂ ಮಂಜುಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡಿದ್ದರು. ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿರುವ ಜತೆಗೆ ಹಿರಿಯ ನಾಯಕರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವುದರಿಂದ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದಿದ್ದರಿಂದ ಸ್ವತಂತ್ರವಾಗಿ ಗೆದ್ದು ಈಗ ಸಾ.ರಾ.ಮಹೇಶ್ ಅವರ ಮೂಲಕ ಜಾ.ದಳದೊಂದಿಗೆ ಗುರುತಿಸಿಕೊಂಡಿರುವ ಕೆ.ವಿ.ಶ್ರೀಧರ್ ಅವರು ಎಸ್‌ಬಿಎಂ ಮಂಜು ಆಯ್ಕೆಗೆ ತೊಡರಾಗುವ ಸಾಧ್ಯತೆ ಇದೆ. ಮತ್ತೊಬ್ಬ ಸದಸ್ಯ ರಮಣಿ ಹೈಕಮಾಂಡ್ ಎದುರು ಬೇಡಿಕೆ ಇಟ್ಟರೂ ಪರಿಗಣಿಸುವುದು ಅನುಮಾನವಾಗಿದೆ.

ಮಹಿಳಾಮಣಿಗಳಿಂದಲೂ ಬಿರುಸಿನ ಪೈಪೋಟಿ: ಪುರುಷರ ಬದಲಿಗೆ ಮಹಿಳೆಯರಿಗೆ ಮಹಾಪೌರ ಸ್ಥಾನ ಕೊಡುವಂತೆ ಐವರು ಮಹಿಳಾ ಸದಸ್ಯರು ಬಿರುಸಿನ ಪೈಪೋಟಿ ನೀಡುತ್ತಿದ್ದಾರೆ. ಕಳೆದ ಬಾರಿ ಪ್ರೇಮಾ ಶಂಕರೇಗೌಡ ಹಾಗೂ ಅಶ್ವಿನಿ ಅನಂತು ನಡುವೆ ತುರುಸಿನ ಸ್ಪರ್ಧೆ ನಡೆದು ಅಂತಿಮವಾಗಿ ಅಶ್ವಿನಿ ಅನಂತು ಅವರನ್ನು ಆಯ್ಕೆ ಮಾಡಿತ್ತಾದರೂ ಕಾಂಗ್ರೆಸ್, ಜಾ.ದಳ ಹಾಗೂ ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದಾಗಿ ಜಾ.ದಳ, ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಯಿತು. ಹಾಗಾಗಿ, ಈ ಬಾರಿ ಅಶ್ವಿನಿ ಅನಂತು, ಪ್ರೇಮಾ ಶಂಕರೇಗೌಡ ನಡುವೆ ಮತ್ತೆ ಪಕ್ಷದೊಳಗೆ ಪೈಪೋಟಿ ನಡೆಯುತ್ತಿದ್ದರೆ, ಲಕ್ಷ್ಮೀ ಶಿವಣ್ಣ, ನಮ್ರತಾ ರಮೇಶ್ ಕೂಡ ತಾವೇನೂ ಕಡಿಮೆ ಇಲ್ಲವೆನ್ನುವಂತೆ ನಾಯಕರ ಮೇಲೆ ಒತ್ತಡ ತಂದಿದ್ದಾರೆ.

ಮಹಾಪೌರ ಸ್ಥಾನದ ಆಕಾಂಕ್ಷಿಗಳ ಅಭಿಪ್ರಾಯ ಕೇಳಿದ್ದೇವೆ. ಯಾರನ್ನು ಮಾಡಬೇಕೆಂಬುದು ನಿರ್ಧಾರವಾಗಿಲ್ಲ. ಬಿಜೆಪಿ ನಮಗೆ ಮಹಾಪೌರ ಸ್ಥಾನ ಬಿಟ್ಟುಕೊಡುವ ವಿಶ್ವಾಸ ಖಚಿತವಾದ ಮೇಲೆ ಕುಳಿತು ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಸಾ.ರಾ.ಮಹೇಶ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ ಬಳಿಕ ಮತ್ತೊಂದು ಸಭೆ ಕರೆದು ತೀರ್ಮಾನ ಕೈಗೊಳ್ಳುತ್ತೇವೆ.

-ಕೆ.ಟಿ.ಚೆಲುವೇಗೌಡ, ಜಾ.ದಳ ಅಧ್ಯಕ್ಷರು.

 

 

 

 

andolanait

Recent Posts

ಸದನದ ಗೌರವವನ್ನು ಎತ್ತಿಹಿಡಿಯಬೇಕು: ಸಿಎಂ ಸಿದ್ದರಾಮಯ್ಯ ಕಿವಿಮಾತು

ಬೆಳಗಾವಿ : ವಿರೋಧ ಪಕ್ಷದವರು ಅಸತ್ಯವನ್ನು ಹೇಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ ವಾಸ್ತವದ ತಳಹದಿಯ ಮೇಲೆ ಟೀಕೆಗಳನ್ನು ಮಾಡಬೇಕು. ಉತ್ತರಗಳನ್ನು ಕೊಡುವಾಗ…

26 seconds ago

ಸರ್ಕಾರದ ವಿರುದ್ಧ ಬಿಜೆಪಿ ಬೃಹತ್‌ ಪ್ರತಿಭಟನೆ : ಸುವರ್ಣಸೌಧ ಮುತ್ತಿಗೆ ಯತ್ನ ; ಹಲವರು ಪೊಲೀಸ್‌ ವಶಕ್ಕೆ

ಬೆಳಗಾವಿ : ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸುವರ್ಣ…

6 mins ago

ಆಂದೋಲನ ವರದಿ ಫಲಶ್ರುತಿ : ಪಚ್ಚೆದೊಡ್ಡಿ ಗ್ರಾಮದ ಶಾಲೆ ಮಕ್ಕಳಿಗೆ ವಾಹನ ಸೌಲಭ್ಯ

ಡಿಸಿ ಶಿಲ್ಪಾನಾಗ್‌ ಸೂಚನೆ ಮೇರೆಗೆ ಅರಣ್ಯ ಇಲಾಖೆಯ ಸಫಾರಿ ವಾಹನದಲ್ಲಿ ಮಕ್ಕಳನ್ನು ಕರೆತರಲು ಕ್ರಮ ಹನೂರು : ಅಂತೂ ಇಂತೂ…

37 mins ago

ನಾನೇ ವಿಪಕ್ಷ ನಾಯಕ ಎಂದ ಯತ್ನಾಳ್

ಬೆಳಗಾವಿ : ನಾನು ಅಡ್ಜಸ್ಟ್ ಮೆಂಟ್ ರಾಜಕಾರಣಿ ಅಲ್ಲ, ನಿಜವಾದ ವಿರೋಧ ಪಕ್ಷದ ನಾಯಕ ನಾನೇ ಎಂದು ವಿಧಾನಸಭೆ ಕಲಾಪದ…

44 mins ago

ಬಿಳಿಗಿರಿ ರಂಗನಬೆಟ್ಟ ಅಭಿವೃದ್ಧಿ ಕಾರ್ಯ ಪರಿಶೀಲನೆಯಲ್ಲಿದೆ : ಸಚಿವ .ಎಚ್.ಕೆ.ಪಾಟೀಲ್‌

ಬೆಳಗಾವಿ : ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪುರಾಣ ಪ್ರಸಿದ್ಧ ಕ್ಷೇತ್ರವಾಗಿರುವ ಬಿಳಿಗಿರಿ ರಂಗನಬೆಟ್ಟ ಪ್ರದೇಶವನ್ನು 5.75…

58 mins ago

ರೈತರಿಗೆ ಗುಂಡು ಹೊಡೆಸಿದ್ದ ಬಿಜೆಪಿಗರಿಂದ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲ : ಸಚಿವೆ ಹೆಬ್ಬಾಳಕರ್‌

ಬೆಳಗಾವಿ : ಬಿಜೆಪಿ ನಾಯಕರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ‌.‌ ಅವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ, ಯಾರು…

2 hours ago