ಬೆಂಗಳೂರು: ವೈಟ್‌ಫೀಲ್ಡ್- ಕೆ.ಆರ್.ಪುರ ಮಧ್ಯೆ ‘ನಮ್ಮ ಮೆಟ್ರೋ’ ರೈಲಿನ ವಾಣಿಜ್ಯ ಸಂಚಾರವು ಭಾನುವಾರ ಆರಂಭವಾಗಿದ್ದು, ಈ ಭಾಗದ ಜನರು ಮೆಟ್ರೊದಲ್ಲಿ ಪ್ರಯಾಣಿಸಿ ಸಂಭ್ರಮಿಸಿದರು.
ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆಯವರೆಗೆ ಮೆಟ್ರೋ ಸಂಚರಿಸಿತು. ಸಂಜೆ 6 ಗಂಟೆಯವರೆಗೆ ಈ ಮಾರ್ಗದಲ್ಲಿ 16,319 ಜನರು ಪ್ರಯಾಣ ಮಾಡಿದ್ದಾರೆ. ಈ ಮಾರ್ಗದಲ್ಲಿಒಟ್ಟು 12 ನಿಲ್ದಾಣಗಳಿದ್ದು, 35 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ.
ಈ ಮೆಟ್ರೊ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದರು. ಸೋಮವಾರದಿಂದ ಮುಂಜಾನೆ 5 ಗಂಟೆಯಿಂದ ರಾತ್ರಿ 11 ರವೆರೆಗೂ ಮೆಟ್ರೊ ರೈಲು ಸೇವೆ ದೊರೆಯಲಿದೆ. ಪ್ರಯಾಣಿಕರು ಟೋಕನ್, ಮೊಬೈಲ್ ಕ್ಯೂ ಆರ್ ಟಿಕೆಟ್, ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಮಾರತ್‌ಹಳ್ಳಿ, ಕೆ.ಆರ್.ಪುರ, ಐಟಿಪಿಎಲ್ ಸುತ್ತಮುತ್ತಲ ಐಟಿ-ಬಿಟಿ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಮೆಟ್ರೊ ರೈಲು ಸೇವೆಯಿಂದ ತುಂಬಾ ಉಪಯೋಗವಾಗಲಿದೆ. ಮೆಟ್ರೊ ಸೇವೆಯಿಂದಾಗಿ ಸಂಚಾರ ದಟ್ಟಣೆ ತಗ್ಗಲಿದೆ.
ನಿತ್ಯ 1.5 ಲಕ್ಷ ಪ್ರಯಾಣಿಕರ ನಿರೀಕ್ಷೆ : 13.71 ಕಿ.ಮೀ ಉದ್ದದ ಈ ಮಾರ್ಗ ನಿರ್ಮಾಣಕ್ಕೆ 4500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೆಟ್ರೊದಲ್ಲಿ ವೈಟ್‌ಫೀಲ್ಡ್‌ನಿಂದ ಕೆ.ಆರ್.ಪುರ ತಲುಪಲು ಕೇವಲ 25 ನಿಮಿಷ ಸಾಕು. ಈ ಮಾರ್ಗದಲ್ಲಿ ನಿತ್ಯ 1.50 ಲಕ್ಷ ಮಂದಿ ಪ್ರಯಾಣಿಸುವ ನಿರೀಕ್ಷೆ ಇದೆ. ಪ್ರತಿ 12 ನಿಮಿಷಕ್ಕೊಂದು ರೈಲನ್ನು ಕಾರ್ಯಾಚರಣೆಗೊಳಿಸಲು ಬಿಎಂಆರ್‌ಸಿಎಲ್ ಸಜ್ಜಾಗಿದೆ. ಬಿಎಂಟಿಸಿಯು ಈ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 195 ಫೀಡರ್ ಬಸ್‌ಗಳನ್ನು ಓಡಿಸುತ್ತಿದೆ.
30 ರಿಂದ ಮೊಬಿಲಿಟಿ ಕಾರ್ಡ್ ಬಳಕೆ ಸಾಧ್ಯ : ನಮ್ಮ ಮೆಟ್ರೊದಲ್ಲಿ ಮಾ.30ರಿಂದ ಆರ್‌ಬಿಎಲ್ ಬ್ಯಾಂಕ್ ರುಪೇ ಎನ್‌ಸಿಎಂಸಿ (ನ್ಯಾಶನಲ್ ಕಾಮನ್ ಮೊಬಿಲಿಟಿ ಕಾರ್ಡ್) ಬಳಕೆ ಸಾಧ್ಯವಾಗಲಿದೆ. ಮೆಟ್ರೊ ನಿಲ್ದಾಣ, ಆರ್‌ಬಿಎಲ್ ಬ್ಯಾಂಕ್ ಶಾಖೆಗಳಲ್ಲಿಈ ಕಾರ್ಡ್ ಲಭ್ಯವಿರಲಿವೆ.
ಮೈಸೂರು: ಭಾರತೀಯ ರೈಲ್ವೆ ಇಲಾಖೆಯೂ ಹೊಸ ವರ್ಷದ ಆರಂಭದ ಬೆನ್ನಲ್ಲೇ, ತನ್ನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಮೈಸೂರಿನಿಂದ ಇತರ ನಿಲ್ದಾಣಗಳಿಗೆ…
ಮೈಸೂರು: ಸಾಂಸಕೃತಿಕ ನಗರಿ ಮೈಸೂರು ನಗರದಾದ್ಯಂತ ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿ…
ಬೆಂಗಳೂರು: ಕಲಬುರ್ಗಿಯ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಗಾಂಧಿ ಪರವಾಗಿ ಬೆನ್ನಿಗೆ ನಿಂತಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್…
ಮೈಸೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಧ್ಯೆ ಜಟಾಪಟಿ ಇದೀಗ ರಾಜ್ಯಪಾಲರ ಭವನಕ್ಕೆ ತಲುಪಿದ್ದು,…
ಮೈಸೂರು: ಕನ್ನಡದ ಅಸ್ಮಿತೆ ಎಂದು ಹೇಳಿಕೊಳ್ಳುವವ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಬೇಜವಾಬ್ದಾರಿತನದಿಂದಾಗಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಗೊಂದಲಕ್ಕೊಳಗಾಗುತ್ತಿರುವುದು ವಿಷಾದನೀಯ…
ಬೆಂಗಳೂರು: ಸ್ಯಾಂಡಲ್ವುಡ್ ಡಾಲಿ ಧನಂಜಯ್ ದಾಂಪತ್ಯ ಜೀವನಕ್ಕೆ ಕಾಲೀಡುತ್ತಿದ್ದು, ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ…