ಮಂಡ್ಯ: ಯುವಕನೋರ್ವ ಪ್ರಿಯತಮೆಯನ್ನು ಕೊಂದು ತನ್ನ ಜಮೀನಿನಲ್ಲೇ ಶವ ಬಚ್ಚಿಟ್ಟ ಘಟನೆ ಮಂಡ್ಯದ ಕರೋಟಿ ಗ್ರಾಮದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ ಎಂಬುವವರೇ ಹತ್ಯೆಯಾದ ಮಹಿಳೆಯಾಗಿದ್ದಾರೆ. ಪುನೀತ್ ಎಂಬಾತನೇ ಕೊಲೆಮಾಡಿದ ಆರೋಪಿಯಾಗಿದ್ದಾನೆ.
ಪ್ರೀತಿಗೆ ಮದುವೆಯಾಗಿ ಮಕ್ಕಳಿದ್ದರೂ ಪುನೀತ್ ಹಿಂದೆ ಬಿದ್ದಿದ್ದಳು. ಕಳೆದ ಭಾನುವಾರ ಮೈಸೂರು, ಮಂಡ್ಯ ಎಂದು ಟ್ರಿಪ್ ಹೋಗಿದ್ದ ಇಬ್ಬರು ಜಾಲಿಯಾಗಿ ಸಮಯ ಕಳೆದಿದ್ದರು.
ನಂತರ ಏನಾಯ್ತೋ ಗೊತ್ತಿಲ್ಲ. ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ನಂತರ ಈತ ಆಕೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿ ತನ್ನದೇ ಜಮೀನಿನಲ್ಲಿ ಶವ ಬಚ್ಚಿಟ್ಟು ಪರಾರಿಯಾಗಿದ್ದಾನೆ.
ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪುನೀತ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಆರೋಪಿ ಪುನೀತ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದು, ಪ್ರೀತಿ ಮದುವೆಯಾಗಿ ಮಕ್ಕಳಿದ್ದರೂ ಪುನೀತ್ ಹಿಂದೆ ಬಿದ್ದು ದುರಂತ ಅಂತ್ಯ ಕಂಡಿದ್ದಾಳೆ.
ಹುಣಸೂರು: ಕೂಲಿ ಕಾರ್ಮಿಕನ ಮೇಲೆ ಚಿರತೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಹನಗೋಡು ಹೋಬಳಿಯ ಕಣಗಾಲು ಗ್ರಾಮದ…
ಸರಗೂರು ತಾಲ್ಲೂಕಿನ ಕಾಳಿಹುಂಡಿ ಗ್ರಾಮದ ರಸ್ತೆ ಡಾಂಬರು ಕಾಣದೆ ಹಲವು ವರ್ಷಗಳೇ ಆಗಿವೆ. ಈ ರಸ್ತೆಯು ಹಳ್ಳಕೊಳ್ಳಗಳಿಂದ ಕೂಡಿದೆ. ಈ…
ಬೇಸಿಗೆ ಶುರುವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸುಮಾರು ೩೪ ಸೆಲ್ಸಿಯಸ್‌ಗೂ ಹೆಚ್ಚು ಪ್ರಮಾಣದಲ್ಲಿ ಬಿಸಿಲಿನ ತಾಪ ಮಾನ ಏರಿಕೆಯಾಗಿರುವ…
ಮಂಜು ಕೋಟೆ ಕೋಟೆ: ರಾಜೇಂದ್ರ, ಸಿ.ವಿ.ನಾಗರಾಜು, ಯೋಗಾನರಸಿಂಹೇಗೌಡ, ಗುಂಡತ್ತೂರು ಪ್ರಕಾಶ್ ಪ್ರಬಲ ಆಕಾಂಕ್ಷಿಗಳು ಎಚ್.ಡಿ.ಕೋಟೆ: ಜಾ.ದಳ ತಾಲ್ಲೂಕು ಅಧ್ಯಕ್ಷರನ್ನು ನೇಮಕ…
ಪುರಸಭೆಯಿಂದ ಹಲವು ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ; ಸ್ವಚ್ಛ ಪಟ್ಟಣಕ್ಕೆ ಸಹಕರಿಸಲು ಮನವಿ ಗುಂಡ್ಲುಪೇಟೆ: ಪಟ್ಟಣದ ಕೆಲವೆಡೆ ಕಸ ಸುರಿಯದಂತೆ ಎಚ್ಚರಿಕೆ…
ಕೆ.ಬಿ.ರಮೇಶನಾಯಕ ಮೈಸೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಭಾರತದ ಮೇಲೆ ದಿನದಿಂದ ದಿನಕ್ಕೆ ಅನಿಲ ಬಿಕ್ಕಟ್ಟು ಬಿಗಡಾಯಿಸುತ್ತಿದ್ದು, ವಾಣಿಜ್ಯ ಬಳಕೆಯ…