ಮಂಡ್ಯ: ಮಹಿಳೆಯರು ತಮ್ಮ ವಿರುದ್ಧ ಅನ್ಯಾಯ ನಡೆದ ಸಂದರ್ಭದಲ್ಲಿ ಯಾವ ಭಯವು ಇಲ್ಲದೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವ ಧೈರ್ಯ ಬೆಳಸಿಕೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಹೇಳಿದರು.
ಕೆ.ಆರ್.ಪೇಟೆ ತಾಲ್ಲೂಕು ಗುರುಭವನದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಕರ್ನಾಟಕ ಪೊಲೀಸ್ ಜನ ಸ್ನೇಹಿ ಕರ್ನಾಟಕ ಪೊಲೀಸ್ ಜನ ಸ್ನೇಹಿ ಎಂದೇ ಹೆಸರುವಾಸಿಯಾಗಿದ್ದು, ಮಹಿಳೆಯರು ತಮ್ಮ ಬಳಿ ಸದಾ ಸ್ಥಳೀಯ ಪೊಲೀಸ್ ಠಾಣೆ ಅಥವಾ ಪೊಲೀಸ್ ಅಧಿಕಾರಿಗಳ ಸಂಖ್ಯೆಯನ್ನು ಇಟ್ಟುಕೊಳ್ಳಬೇಕು. ಅನ್ಯಾಯ ಅಥವಾ ದೌರ್ಜನ್ಯ ನಡೆದ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಇಲ್ಲೂ ಸರಿಯಾದ ಸ್ಪಂದನೆ ಸಿಗದಿದ್ದರೆ ನಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿ ಎಂದು ಕಿವಿ ಮಾತು ಹೇಳಿದರು.
ಮಹಿಳೆಯರು ಸ್ವಾವಲಂಬಿಗಳಾಗಿ ಮನೆಯಿಂದ ಹೊರ ಹೋಗುವ ಮುನ್ನ ಅವರ ಪಸ್೯ ನಲ್ಲಿ ಹಣ ವಿರಬೇಕು. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಅತ್ಯವಶ್ಯಕ ವಾಗಿದ್ದು, ಮಹಿಳೆಯರು ಸ್ವಾವಲಂಬಿಗಳಾಗಲು ಹಲವಾರು ತರಬೇತಿ ಹಾಗೂ ಯೋಜನೆಗಳನ್ನು ರೂಪಿಸಿದೆ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಬಾಲ್ಯವಿವಾಹದಂತಹ ಅನಿಷ್ಠವನ್ನು ತೊಡೆದು ಹಾಕಲು ಮಹಿಳೆಯರಿಂದಲೇ ಸಾಧ್ಯ. ತಾಯಿ ತನ್ನ ಮಗಳಿಗೆ ವಿದ್ಯಾಭ್ಯಾಸ ನೀಡುತ್ತೇನೆ, ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಪಣ ತೊಡಬೇಕು ಎಂದು ಕರೆ ನೀಡಿದರು.
ಹೆಣ್ಣು ಮಕ್ಕಳು ಜೀವನದಲ್ಲಿ ಸಾಧನೆ ಮಾಡಲು ಕನಸು ಕಾಣಬೇಕು ಹಾಗೂ ಗುರಿ ನಿಗದಿ ಮಾಡಿಕೊಳ್ಳಬೇಕು. ಗುರಿ ಸಾಧನೆಗೆ ಜೀವನದಲ್ಲಿ ಹಲವಾರು ತೊಡಕುಗಳು ಬರುತ್ತವೆ ಅವುಗಳನ್ನು ಮೆಟ್ಟಿ ನಿಲ್ಲಬೇಕು. ನಿರಂತರ ಪರಿಶ್ರಮ ಹಾಗೂ ಶ್ರದ್ಧೆಯಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದರು.
ಶಾಲಾ ಮಕ್ಕಳು ಭಾರವಾದ ಪುಸ್ತಕಗಳ ಬ್ಯಾಗ್ ಹೊರಲಾರದೆ ತ್ರಾಸದಿಂದಲೇ ಹೊತ್ತುಕೊಂಡು ನಡೆಯುವ ದೃಶ್ಯ ಈಗ ಎಲ್ಲೆಡೆ ಕಂಡುಬರುತ್ತದೆ. ಬ್ಯಾಗ್‌ನಲ್ಲಿ ಪಠ್ಯ…
ಸರ್ಕಾರ ಅಧಿಸೂಚನೆ ಹೊರಡಿಸುವುದು ಯಾವಾಗ? ಉದ್ಯೋಗ ನೇಮಕಾತಿ ಯಾವಾಗ? ಇದು ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಪ್ರಶ್ನೆ. ಇದು ಕಳೆದ ಹಲವು…
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ನೌಕರಿ ಪಡೆಯಲು ಇದ್ದ ವಯೋಮಿತಿಯನ್ನು ಐದು ವರ್ಷ ಹೆಚ್ಚಳ ಮಾಡಿ…
ಕಾಂಗೀರ ಬೋಪಣ್ಣ ಕೊಡಗು-ಕೇರಳದ ಜನರು ಒಟ್ಟಾಗಿ ಆಚರಿಸುವ ವಿಭಿನ್ನ ಆಚರಣೆ; ವಿಶಿಷ್ಟ ಹಬ್ಬಕ್ಕೆ ಅಗತ್ಯ ಸಿದ್ಧತೆ ವಿರಾಜಪೇಟೆ: ಕೇರಳ ಹಾಗೂ…
ಮಹೇಂದ್ರ ಹಸಗೂಲಿ ಪಾದಚಾರಿಗಳು ಓಡಾಡದಂತೆ ವಿರೂಪ; ಒತ್ತುವರಿ ತೆರವಿಗೆ ಸಾರ್ವಜನಿಕರ ಆಗ್ರಹ ಗುಂಡ್ಲುಪೇಟೆ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್‌ಗಳನ್ನು…
‘ವಿದ್ಯಾವಿಕಾಸ’ ಯೋಜನೆಯಡಿ ಅಗತ್ಯವಿದ್ದರೆ ಚಪ್ಪಲಿ ನೀಡಲು ಸಿದ್ಧತೆ ಮೈಸೂರು: ‘ವಿದ್ಯಾವಿಕಾಸ’ ಯೋಜನೆಯಡಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ೧ನೇ ತರಗತಿಯಿಂದ ೧೦ನೇ…