ಮಂಡ್ಯ

ಕಾವೇರಿ ಆರತಿಗೆ ವಿರೋಧ ಏಕೆ : ಶಾಸಕ ರವಿಕುಮಾರ್‌

ಮಂಡ್ಯ: ಯಾರು ಏನೇ ಹೋರಾಟ ಮಾಡಲಿ, ಕೆಆರ್‌ಎಸ್ ನಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆ ಮಾಡೇ ಮಾಡುತ್ತೇವೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್‌ನಲ್ಲಿ ಅಮ್ಯೂಸ್ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆ ಅನುಷ್ಠಾನಗೊಂಡರೆ ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಇದರ ಅನುಕೂಲ ರೈತರು ಹಾಗೂ ರೈತರ ಮಕ್ಕಳಿಗೆ ಆಗುತ್ತದೆ. ವಿರೋಧ ಮಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ದೊಡ್ಡ ಹಳ್ಳಿ ಮಂಡ್ಯ ಅಭಿವೃದ್ಧಿ ಆಗಬೇಕು: ಮಂಡ್ಯ ದೊಡ್ಡ ಹಳ್ಳಿ ರೀತಿ ಇದೆ. ಅಭಿವೃದ್ಧಿ ಆಗಬೇಕು ಎಂದರೆ ಮಂಡ್ಯಕ್ಕೆ ಜನರು ಬರಬೇಕು. ಈ ಎರಡು ಯೋಜನೆಗಳಿಂದ ಕೆಆರ್‌ಎಸ್‌ಗೆ ಯಾವುದೇ ಧಕ್ಕೆ ಆಗದು. ಜನರು ಬಂದರೆ ಡ್ಯಾಂ ಕಲ್ಲಿಗೆ ಗುದಿಯುತ್ತಾರಾ? ಕಾವೇರಿ ಆರತಿಯನ್ನು ನಮ್ಮ ಸರ್ಕಾರ ಮಾಡೇ ಮಾಡುತ್ತೆ. ರೈತರ ವಿರೋಧದ ಹಿಂದೆ ಯಾವ ಷಡ್ಯಂತ್ರ ಇದೆಯೋ ಗೊತ್ತಿಲ್ಲ. 20 ರೂಪಾಯಿ ಕರ್ಪೂರ ಹಚ್ಚೋಕೆ ಯಾಕೆ 100 ಕೋಟಿ ರೂ.ಎಂಬ ರೈತ ಸಂಘದ ಮುಖಂಡರಿಗೆ ಶಾಸಕರು ಟಾಂಗ್ ನೀಡಿದರು.

ಯೋಜನೆ ಜಾರಿಯಾಗುವ ಮುನ್ನ ಅದ್ಯಾಕೆ,ಇದ್ಯಾಕೆ ಅನ್ನೊದ್ಯಾಕೆ?
ಕರ್ಪೂರ ಹಚ್ಚೋಕೆ 20 ರೂ. ಸಾಕು, ಆದರೆ ಆರತಿ ಮಾಡಲು ಇನ್ಫಸ್ಟ್ರಕ್ಚರ್ ಬೇಕಲ್ಲ. 20 ಸಾವಿರ ಜನರು ಕುಳಿತು ನೋಡಲು ಬೇಕಲ್ಲ, ಯೋಜನೆಗೆ ಡಿಪಿಆರ್ ಆಗಲಿದೆ, ನೂರು ಕೋಟಿ ರೂ.ಡ್ರಾ ಮಾಡ್ಕೊಂಡು ಬರೋಕೆ ಆಗಲ್ಲ. ವಿರೋಧ ಮಾಡುವವರು ಡಿಪಿಆರ್ ತರಿಸಿಕೊಂಡು ನೋಡಿ. ಯಾವುದಕ್ಕೆ ಎಷ್ಟೆಷ್ಟು ಖರ್ಚು ಆಗುತ್ತೆ ಎಂದು ಪರಿಶೀಲಿಸಿ. ಭ್ರಷ್ಟಾಚಾರ ಕಂಡರೆ ಕೇಸ್ ಹಾಕಿ ಜೈಲಿಗೆ ಕಳುಹಿಸಿ. ಅದು ಬಿಟ್ಟು ಮಾಡುವ ಮುನ್ನವೇ ಅದ್ಯಾಕೆ, ಇದ್ಯಾಕೆ ಅನ್ನೋದು ಸರಿಯಲ್ಲ ಎಂದರು.

100 ಕೋಟಿ ರೂ.ಕೊಡ್ತಿರೋದು 100ರಷ್ಟು ಸತ್ಯ ;
ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾವೇರಿ ಆರತಿ ಮಾಡೇ ಮಾಡ್ತೀವಿ. ಅವರ ರೀತಿ 8 ಸಾವಿರ ಕೋಟಿ ರೂ.ಅಲ್ಲ, ಮುಖ್ಯಮಂತ್ರಿ ಆಗಿದ್ದಾಗ 8 ಸಾವಿರ ಕೋಟಿ ರೂ.ಕೊಟ್ಟೆ. ಇಳಿದಮೇಲೆ ಹೊರಟೋಯ್ತೂ ಅನ್ನೋದಲ್ಲ. 100 ಕೋಟಿ ರೂ.ಕೊಡ್ತಿರೋದು 100ಕ್ಕೆ 100 ಸತ್ಯ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಆಂದೋಲನ ಡೆಸ್ಕ್

Recent Posts

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…

18 mins ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ನಾಳೆ ಅಧಿಕೃತ ಚಾಲನೆ

ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…

1 hour ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

2 hours ago

ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ

ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…

3 hours ago

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

6 hours ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

6 hours ago