ಮಂಡ್ಯ: ಯಾರು ಏನೇ ಹೋರಾಟ ಮಾಡಲಿ, ಕೆಆರ್‌ಎಸ್ ನಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆ ಮಾಡೇ ಮಾಡುತ್ತೇವೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್‌ನಲ್ಲಿ ಅಮ್ಯೂಸ್ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆ ಅನುಷ್ಠಾನಗೊಂಡರೆ ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಇದರ ಅನುಕೂಲ ರೈತರು ಹಾಗೂ ರೈತರ ಮಕ್ಕಳಿಗೆ ಆಗುತ್ತದೆ. ವಿರೋಧ ಮಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ದೊಡ್ಡ ಹಳ್ಳಿ ಮಂಡ್ಯ ಅಭಿವೃದ್ಧಿ ಆಗಬೇಕು: ಮಂಡ್ಯ ದೊಡ್ಡ ಹಳ್ಳಿ ರೀತಿ ಇದೆ. ಅಭಿವೃದ್ಧಿ ಆಗಬೇಕು ಎಂದರೆ ಮಂಡ್ಯಕ್ಕೆ ಜನರು ಬರಬೇಕು. ಈ ಎರಡು ಯೋಜನೆಗಳಿಂದ ಕೆಆರ್‌ಎಸ್‌ಗೆ ಯಾವುದೇ ಧಕ್ಕೆ ಆಗದು. ಜನರು ಬಂದರೆ ಡ್ಯಾಂ ಕಲ್ಲಿಗೆ ಗುದಿಯುತ್ತಾರಾ? ಕಾವೇರಿ ಆರತಿಯನ್ನು ನಮ್ಮ ಸರ್ಕಾರ ಮಾಡೇ ಮಾಡುತ್ತೆ. ರೈತರ ವಿರೋಧದ ಹಿಂದೆ ಯಾವ ಷಡ್ಯಂತ್ರ ಇದೆಯೋ ಗೊತ್ತಿಲ್ಲ. 20 ರೂಪಾಯಿ ಕರ್ಪೂರ ಹಚ್ಚೋಕೆ ಯಾಕೆ 100 ಕೋಟಿ ರೂ.ಎಂಬ ರೈತ ಸಂಘದ ಮುಖಂಡರಿಗೆ ಶಾಸಕರು ಟಾಂಗ್ ನೀಡಿದರು.
ಯೋಜನೆ ಜಾರಿಯಾಗುವ ಮುನ್ನ ಅದ್ಯಾಕೆ,ಇದ್ಯಾಕೆ ಅನ್ನೊದ್ಯಾಕೆ?
ಕರ್ಪೂರ ಹಚ್ಚೋಕೆ 20 ರೂ. ಸಾಕು, ಆದರೆ ಆರತಿ ಮಾಡಲು ಇನ್ಫಸ್ಟ್ರಕ್ಚರ್ ಬೇಕಲ್ಲ. 20 ಸಾವಿರ ಜನರು ಕುಳಿತು ನೋಡಲು ಬೇಕಲ್ಲ, ಯೋಜನೆಗೆ ಡಿಪಿಆರ್ ಆಗಲಿದೆ, ನೂರು ಕೋಟಿ ರೂ.ಡ್ರಾ ಮಾಡ್ಕೊಂಡು ಬರೋಕೆ ಆಗಲ್ಲ. ವಿರೋಧ ಮಾಡುವವರು ಡಿಪಿಆರ್ ತರಿಸಿಕೊಂಡು ನೋಡಿ. ಯಾವುದಕ್ಕೆ ಎಷ್ಟೆಷ್ಟು ಖರ್ಚು ಆಗುತ್ತೆ ಎಂದು ಪರಿಶೀಲಿಸಿ. ಭ್ರಷ್ಟಾಚಾರ ಕಂಡರೆ ಕೇಸ್ ಹಾಕಿ ಜೈಲಿಗೆ ಕಳುಹಿಸಿ. ಅದು ಬಿಟ್ಟು ಮಾಡುವ ಮುನ್ನವೇ ಅದ್ಯಾಕೆ, ಇದ್ಯಾಕೆ ಅನ್ನೋದು ಸರಿಯಲ್ಲ ಎಂದರು.
100 ಕೋಟಿ ರೂ.ಕೊಡ್ತಿರೋದು 100ರಷ್ಟು ಸತ್ಯ ;
ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾವೇರಿ ಆರತಿ ಮಾಡೇ ಮಾಡ್ತೀವಿ. ಅವರ ರೀತಿ 8 ಸಾವಿರ ಕೋಟಿ ರೂ.ಅಲ್ಲ, ಮುಖ್ಯಮಂತ್ರಿ ಆಗಿದ್ದಾಗ 8 ಸಾವಿರ ಕೋಟಿ ರೂ.ಕೊಟ್ಟೆ. ಇಳಿದಮೇಲೆ ಹೊರಟೋಯ್ತೂ ಅನ್ನೋದಲ್ಲ. 100 ಕೋಟಿ ರೂ.ಕೊಡ್ತಿರೋದು 100ಕ್ಕೆ 100 ಸತ್ಯ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಟಾಂಗ್ ನೀಡಿದರು.
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…