ಹೇಮಂತ್‌ಕುಮಾರ್
ಮಂಡ್ಯ: ನಗರದ ಹಲವಾರು ಬಡಾವಣೆಗಳಲ್ಲಿನ ರಸ್ತೆಗಳು ಸಾರ್ವಜನಿಕ ಮೂತ್ರಾಲಯವಾಗಿ ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಎಲ್ಲೆಂದರಲ್ಲಿ ಕಸ ಎರಚಾಡುತ್ತ ಬೀದಿನಾಯಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಈ ಸನ್ನಿವೇಷವನ್ನೇ ಬದಲಾಯಿಸಿ ಆರೋಗ್ಯಕರ ಸುಂದರ ಪರಿಸರಕ್ಕೆ ಕೈಜೋಡಿಸಿರುವ ಡಾ.ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನ ಸದ್ದಿಲ್ಲದೆ ಕಾರ್ಯನಿರತವಾಗಿದೆ.
ದಸಂಸ ನಾಯಕರಾಗಿದ್ದ ಡಾ.ಎಂ.ಬಿ.ಶ್ರೀನಿವಾಸ್ ಅವರು ಬದುಕಿದ್ದಾಗ ಹತ್ತು ಹಲವು ಹೋರಾಟಗಳ ಮೂಲಕ ಜನಮನ ಸೆಳೆದಿದ್ದರು. ಅವರ ನಿಧನ ನಂತರ ಅವರ ಪುತ್ರ ರಾಹುಲ್ ಪಿ.ಶ್ರೀನಿವಾಸ್ ಹಾಗೂ ಗೆಳೆಯರ ಬಳಗ ಒಂದು ತಂಡ ಕಟ್ಟಿಕೊಂಡು ಡಾ.ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನ ರಚಿಸಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.
ಕೋವಿಡ್ ಸಮಯದಲ್ಲಿ ಜಿಲ್ಲೆಯ ವಿವಿಧೆಡೆ ಸಾಕಷ್ಟು ಕುಟುಂಬಗಳಿಗೆ ಆಹಾರದ ಕಿಟ್ ಒದಗಿಸಿದ್ದು, ಗಣೇಶ ಉತ್ಸವಗಳಲ್ಲಿ ರಕ್ತದಾನ ಶಿಬಿರ, ನೇತ್ರ ತಪಾಸಣೆ, ಕನ್ನಡಕ ವಿತರಣೆ, ಮುಸ್ಲಿಂ ಯುವಕರೂ ಕೂಡ ಗಣೇಶ ಉತ್ಸವದಲ್ಲಿ ಪಾಲ್ಗೊಂಡು ಅನ್ನಸಂತರ್ಪಣೆ ನಡೆಸುವ ಸೌಹಾರ್ಧತೆ ಸಾರಿದ್ದು, ಹೀಗೆ ಅನೇಕ ಸೇವಾ ಕಾರ್ಯ ನಡೆಸಿದ್ದ ಈ ಬಳಗವು ಯಾವುದೇ ಪ್ರಚಾರಕ್ಕೆ ಬಾರದೆ, ಸದ್ದುಗದ್ದಲವಿಲ್ಲದೆ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ.
ಇದೀಗ ಮಂಡ್ಯದ ಅಶೋಕನಗರದಲ್ಲಿನ ಕೆಲ ರಸ್ತೆಗಳ ಇಕ್ಕೆಲಗಳನ್ನೂ ಸ್ವಚ್ಛಗೊಳಿಸಿ, ಜನರು ಮಲಮೂತ್ರ ಮಾಡದಂತೆ ಗೋಡೆ ಬರಹದ ಮೂಲಕ ಜಾಗೃತಿ ಮೂಡಿಸಿ, ಸಸಿಗಳನ್ನು ನೆಟ್ಟು ಟ್ರೀಗಾರ್ಡ್ ಹಾಕಿಸಿ ನಗರಸಭೆಯ ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದೆ ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನ.
ಪ್ರತಿಷ್ಠಾನದ ಅಧ್ಯಕ್ಷ ರಾಹುಲ್ ಅವರು ತಮ್ಮ ತಂಡದ ರಕ್ಷಿತ್, ಚಂದನ್, ಪ್ರಮೋದ್, ಅಭಿ, ಮಿಥಿಲ್, ಸೂರ್ಯ, ಅಲ್ತಾಫ್, ಸಚಿನ್, ಮನೋಜ್ಞ, ಲಿಖಿತ್ ಮುಂತಾದವರೊಂದಿಗೆ ನಡೆಸುತ್ತಿರುವ ಈ ಸ್ವಚ್ಛತಾ ಸೇವೆಗೆ ಸ್ಥಳೀಯ ನಿವಾಸಿಗಳು ಶ್ಲಾಘಿಸಿದ್ದಾರೆ. ಇದು ಇತರೆ ಸಂಘ ಸಂಸ್ಥೆಗಳಿಗೂ ಮಾದರಿಯಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
” ನಮ್ಮ ಡಾ.ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನದ ವತಿಯಿಂದ ಸರ್ಕಾರಿ ಶಾಲೆಯ ಸುಮಾರು ಮುನ್ನೂರು ಮಕ್ಕಳಿಗೆ ಬ್ಯಾಗ್ ವಿತರಣೆ, ನಾಲ್ಕು ರಕ್ತದಾನ ಶಿಬಿರಗಳು, ಹತ್ತು ಮಂದಿ ವಿಶೇಷಚೇತನರಿಗೆ ವ್ಹೀಲ್‌ಚೇರ್ ವಿತರಣೆ ಮುಂತಾದ ಸೇವಾ ಕಾರ್ಯ ಮಾಡಿದ್ದೇವೆ. ಇದೀಗ ಸ್ವಚ್ಛತೆಯೆಡೆಗೆ ಹೆಚ್ಚು ಗಮನ ನೀಡಿದ್ದೇವೆ.”
-ರಾಹುಲ್ ಪಿ.ಶ್ರೀನಿವಾಸ್, ಪ್ರತಿಷ್ಠಾನದ ಅಧ್ಯಕ್ಷರು.
” ಮಂಡ್ಯ ನಗರದಲ್ಲಿ ಹಲವು ಕಡೆಗಳಲ್ಲಿ ಡಾ.ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನದ ವತಿಯಿಂದ ಕ್ಲೀನ್ ಟುಡೆ-ಗ್ರೀನ್ ಟುಮಾರೋ ಎನ್ನುವ ಆಡಿಬರಹದೊಂದಿಗೆ ಸ್ವಚ್ಛತಾ ಡ್ರೆöÊವ್ ಹಮ್ಮಿಕೊಂಡು ಸ್ವಚ್ಛತೆ ಜೊತೆಗೆ ಪ್ಲಾಂಟೇಷನ್ ಕೂಡ ಮಾಡಿಕೊಂಡು ಪರಿಸರ ಜಾಗೃತಿ ಮೂಡಿಸುತ್ತಿದ್ದು, ಈ ಸಂದರ್ಭದಲ್ಲಿ ನಗರಸಭೆ ವತಿಯಿಂದ ಸ್ವಚ್ಛ ಸರ್ವೇಕ್ಷಣ ಅಭಿಯಾನ ಹಮ್ಮಿಕೊಂಡಿರುವುದಕ್ಕೆ ಪೂರಕವಾಗಿದೆ. ಈ ಒಂದು ತಂಡದ ಸ್ವಚ್ಛ ಮನಸ್ಸುಗಳಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತಿದ್ದೇನೆ. ಹಾಗೂ ಈ ಒಂದು ಶ್ಲಾಘನೀಯ ಕಾರ್ಯದಲ್ಲಿ ಎಲ್ಲಾ ಸಾರ್ವಜನಿಕರು ಭಾಗವಹಿಸಬೇಕೆಂದು ಕೋರುತ್ತೇನೆ.”
-ಪಂಪಾಶ್ರೀ, ಆಯುಕ್ತರು, ನಗರಸಭೆ, ಮಂಡ್ಯ.
” ಯುವಜನತೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಒಂದು ತಂಡ ಕಟ್ಟಿ ಸೇವಾ ಕಾರ್ಯಕ್ಕೆ ನಿಂತಿರುವ ರಾಹುಲ್ ಪಿ.ಶ್ರೀನಿವಾಸ್ ಅವರು ತಮ್ಮ ತಂದೆಯAತೆ ಸಾಮಾಜಿಕ ಸೇವಾ ಕಾರ್ಯಕ್ಕೆ ನಿಂತಿರುವುದು ಮಾದರಿಯಾಗಿದೆ. ಅವರ ಪ್ರತಿಷ್ಠಾನದ ವತಿಯಿಂದ ಸಮಾಜಕ್ಕೆ ಒಳಿತಾಗಲೆಂಬ ಆಶಯ ನಮ್ಮದು.”
-ಎಂ.ಬಿ.ರಮೇಶ್, ಅಧ್ಯಕ್ಷರು, ವಿಶ್ವಕರ್ಮ ಸೇವಾ ಟ್ರಸ್ಟ್, ಮಂಡ್ಯ
ಹುಬ್ಬಳ್ಳಿ: ಹನ್ನೊಂದು ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರುವ ಕರ್ನಾಟಕದ ಕನಸು ನನಸಾಗಲಿಲ್ಲ. ಇದೇ ಮೊದಲ ಬಾರಿಗೆ ಫೈನಲ್‌ಗೆ ಬಂದು, ಜಮ್ಮು-ಕಾಶ್ಮೀರ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹನೂರು ತಾಲೂಕು ಕೇಂದ್ರದಲ್ಲಿ ವಿಭಾಗಿಯ ಮಟ್ಟದ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು…
ಬೆಂಗಳೂರು: ಹಣೆ ಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ. ಈ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್ ವಿರುದ್ಧ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂಬ…
ಟೆಹರಾನ್: ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಕಾರ್ಮೋದ ಹೆಚ್ಚಿದ್ದು, ಇರಾನ್‌ನ ಸರ್ವೋಚ್ಛ ನಾಯಕ ಅಲಿ ಖಮೇನಿ ಹಾಗೂ ಅಧ್ಯಕ್ಷ…
ದಕ್ಷಿಣ ಕನ್ನಡ: ನಾಳೆ(ಮಾರ್ಚ್.1) ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಭೇಟಿ ನೀಡಲಿದ್ದಾರೆ.…