ತಿರುಪತಿಯಿಂದ ವಾಪಸ್ಸಾಗುತ್ತಿದ್ದ ಚಿಕ್ಕಾಡೆಯ ನತದೃಷ್ಟರು
ಪಾಂಡವಪುರ: ತಿರುಪತಿಗೆ ಹೋಗಿ ವಾಪಸ್ ಬರುವಾಗ ಚನ್ನಪಟ್ಟಣದ ಬಳಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿಕ್ಕಾಡೆ ಗ್ರಾಮದ ಕೃಷ್ಣೇಗೌಡ (48), ಪುತ್ರ ಶ್ರೀನಿವಾಸ್(14), ಮಹೇಶ್(48) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೃಷ್ಣೇಗೌಡರ ಎರಡನೇ ಪುತ್ರ ಪುರುಷೋತ್ತಮ್ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಶಕುಂತಲ, ಕೃಷ್ಣೇಗೌಡರ ಪತ್ನಿ ಶೈಲಜಾ ಅವರು ಗಾಯಗೊಂಡಿದ್ದಾರೆ.
ಚಿಕ್ಕಾಡೆ ಗ್ರಾಮದಿಂದ ತಿರುಪತಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ವಾಪಸ್ಸಾಗುವ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಳಿಯ ಮುದುಗೆರೆ ಗೇಟ್ ಬಳಿ ಶನಿವಾರ ಮುಂಜಾನೆ 5 ಗಂಟೆಯ ಸುಮಾರಿನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಟೆಂಪೋ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕೃಷ್ಣೇಗೌಡ, ಅವರ ಪುತ್ರ ಶ್ರೀನಿವಾಸ್ ಹಾಗೂ ಮಹೇಶ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕೃಷ್ಣೇಗೌಡರ ಎರಡನೇ ಪುತ್ರ ಪುರುಷೋತ್ತಮ್ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶಕುಂತಲ, ಮೃತ ಕೃಷ್ಣೇಗೌಡ ಪತ್ನಿ ಶೈಲಜಾ ಅವರಿಗೆ ಗಾಯವಾಗಿದೆ.
ವಿಷಯ ತಿಳಿದ ಶಾಸಕ ಸಿ.ಎಸ್.ಪುಟ್ಟರಾಜು ಅವರು ಶನಿವಾರ ಬೆಳಿಗ್ಗೆ ಚಿಕ್ಕಾಡೆ ಗ್ರಾಮಕ್ಕೆ ತೆರಳಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಬಳಿಕ ಪಂಚರತ್ನ ರಥಯಾತ್ರೆ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಪುತ್ರ ನಿಖಿಲ್‌ಕುಮಾರ್‌ಸ್ವಾಮಿ ಅವರನ್ನು ಶಾಸಕ ಸಿ.ಎಸ್.ಪುಟ್ಟರಾಜು ಅವರು ಮೃತರ ಮನೆಗೆ ಕರೆದುಕೊಂಡು ಹೋಗಿ ಸಾಂತ್ವಾನ ಹೇಳಿ ಧೈರ್ಯತುಂಬಿದರು. ಮಾಜಿ ಸಿಎಂ ಎಚ್‌ಡಿಕೆ ಆಗಮಿಸುತ್ತಿದ್ದಂತೆಯೇ ಮೃತರ ಕುಟುಂಬಸ್ಥರು ಎಚ್‌ಡಿಕೆ ಮುಂದೆ ಅಳಲು ತೋಡಿಕೊಂಡರು.
ಮೃತರ ಕುಟುಂಬಸ್ಥರನ್ನು ಕಂಡು ಮಾಜಿ ಸಿಎಂ ಎಚ್‌ಡಿಕೆ ಸಂತೈಸಿದರು. ಶಾಸಕ ಸಿ.ಎಸ್.ಪುಟ್ಟರಾಜು ಪಂಚರತ್ನ ಯಾತ್ರೆ ಮುಗಿದ ಬಳಿಕ ಕುಟುಂಬಕ್ಕೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ಶಾಸಕ ಸಿ.ಎಸ್.ಪುಟ್ಟರಾಜು ಅವರ ಪುತ್ರ ಸಿ.ಪಿ.ಶಿವರಾಜು ಅವರು ಅಪಘಾತದಲ್ಲಿ ಗಾಯಗೊಂಡ ಮೃತ ಕೃಷ್ಣೇಗೌಡರ ಪುತ್ರ ಪುರುಷೋತ್ತಮ್ ಚಿಕಿತ್ಸೆಗೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ಆ ಬಳಿಕ ಅನಾರೋಗ್ಯದಿಂದ ಮೃತಪಟ್ಟ ಲೀಲಾವತಿ ಅವರ ಮನೆಗೂ ಭೇಟಿ ನೀಡಿದ ಎಚ್‌ಡಿಕೆ, ನಿಖಿಲ್, ಸಿ.ಎಸ್.ಪುಟ್ಟರಾಜು ಅವರು ಸಾಂತ್ವಾನ ಹೇಳಿದರು.
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…
ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…
ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ನೀಡಿ…
ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…
ಬೆಳಗಾವಿ: ಎಂಎಲ್‌ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್ ಎನ್‌ಕೌಂಟರ್ ಹೇಳಿಕೆ…