ಮಂಡ್ಯ

ಮಂಡ್ಯ | ಮೇ.2ರಿಂದ ಪಂಚಾಯ್ತಿ ಮಟ್ಟದಲ್ಲಿ ಬೇಸಿಗೆ ಶಿಬಿರ ; ಇಲ್ಲಿವೆ ವಿಶೇಷತೆಗಳು

ಮಂಡ್ಯ : ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಶ್ರಾಯದಲ್ಲಿ ಮೇ.2 ರಿಂದ 26 ರವರೆಗೆ 3 ರಿಂದ 8ನೇ ತರಗತಿ ಮಕ್ಕಳಿಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ 21 ದಿನಗಳ ಬೇಸಿಗೆ ಶಿಬಿರವನ್ನು‌ ಅರಿವು‌ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳು ತಮ್ಮ ಬೇಸಿಗೆ ರಜೆಯನ್ನು ಮನರಂಜನೀಯವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಈ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ಶಿಬಿರದಲ್ಲಿ ಓದುವ, ಬರೆಯುವ, ಅಂಕಿ ಸಂಖ್ಯೆ ವಿಜ್ಞಾನ ವಿಷಯಗಳು, ನಾಯಕತ್ವ ಮತ್ತು ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ. ಪರಿಸರ ಕಾಳಜಿ, ಸಾಮಾಜಿಕ ಕಾಳಜಿ ಬೆಳೆಸುವುದು ಮತ್ತು ಸ್ಥಳೀಯ ಸಂಸ್ಕೃತಿ, ಜೀವನ ಶೈಲಿ, ಇತಿಹಾಸ ಅಂಶಗಳನ್ನು ತಿಳಿಯುವಂತೆ ಮಾಡುವುದು ಹಾಗೂ ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಬೇಸಿಗೆ ಶಿಬಿರದ ಆಶಯವಾಗಿರುತ್ತದೆ.

ಮೇ 2 ರಂದು ಸ್ಥಳೀಯ ನಾಯಕರಿಂದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ, ಆಯ್ಕೆಯಾದ ಮಕ್ಕಳಿಗೆ ಶಿಬಿರದ ನಿಯಮವನ್ನು ತಿಳಿಸಿ ಕೊಡುವುದು ಹಾಗೂ ಮಕ್ಕಳ ಪರಸ್ಪರ ಪರಿಚಯ ಮಾಡಿಕೊಳ್ಳುವುದು, ಆಣೆ ಕಲ್ಲು, ಹುಲಿ ಕುರಿ ಆಟ ಆಡಿಸುವುದು.

ಮೇ 3 ರಂದು ಮಕ್ಕಳ ಕುಟುಂಬಗಳ ಪರಿಚಯ ಹಾಗೂ “ನನ್ನ ಕನಸಿನ ಊರು” ವಿಷಯದ ಕುರಿತು ಪ್ರತಿಯೊಬ್ಬರು ಮಾತನಾಡಲು ಅವಕಾಶ ಕಲ್ಪಿಸಲಾಗುವುದು, ನಂತರ ಪಾಸಿಂಗ್ ದ ಬಾಲ್ ಆಟವನ್ನು ಆಡಿಸಲಾಗುವುದು,

ಮೇ 5 ರಂದು ಸ್ಥಳೀಯ ಯೋಗಪಟುಗಳನ್ನು ಬಳಸಿಕೊಂಡು ಮಕ್ಕಳಿಗೆ ಯೋಗಭ್ಯಾಸ ಮಾಡಿಸುವುದು, ಮೂರರಿಂದ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಬಣ್ಣಗಳ ಪರಿಚಯದ ಆಟವಾಡಿಸುವುದು, 6 ರಿಂದ 8 ನೇ ತರಗತಿ ಮಕ್ಕಳಿಗೆ ಪದಗಳ ಸರಣಿ ಬೆಳೆಸುವ ಆಟವಾಡಿಸುವುದು, ಮೂರರಿಂದ ಐದನೇ ತರಗತಿ ಹಾಗೂ ಆರರಿಂದ ಎಂಟನೇ ತರಗತಿಯ ಮಕ್ಕಳನ್ನು ವಿವಿಧ ಗುಂಪುಗಳಾಗಿ ರಚಿಸಿ ಕಬಡ್ಡಿ ಆಟ ಆಡಿಸಲಾಗುವುದು,

ಮೇ 6 ರಂದು ದಿನಪತ್ರಿಕೆಗಳಲ್ಲಿ ಬರುವ ಚಿತ್ರಗಳನ್ನು ಕೊಠಡಿಯಲ್ಲಿ ಹಾಕುವುದು, ಮಕ್ಕಳು ತಮಗಿಷ್ಟದ ಚಿತ್ರವನ್ನು ಆಯ್ದು ಅದಕ್ಕೆ ತಮ್ಮದೇ ಆದ ಕಥೆಯನ್ನು ಕಟ್ಟಿ ಹೇಳಲು ಸಮಯಾವಕಾಶ ನೀಡುವುದು, ನಂತರ ಕಣ್ ಕಟ್ಟಿ ಮಡಿಕೆ ಹೊಡೆಯುವ ಆಟ ಆಡಿಸಲಾಗುವುದು.

ಮೇ 7 ರಂದು ಭಾಷಾ ಆಟಗಳಾದ ಪದಕಟ್ಟು, ಪದ ಅಂತ್ಯಾಕ್ಷರಿ ಗಳನ್ನು ಆಡಿಸಲಾಗುವುದು, ನಂತರ ಲಗೋರಿ ಆಟ, ಹುಲಿ ಹಸು ಆಟ ಆಡಿಸಲಾಗುವುದು.

ಮೇ 8 ರಂದು ಗ್ರಾಮ ಪಂಚಾಯಿತಿ ಮತ್ತು ಶಾಲಾ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಬಳಸಿಕೊಂಡು ಗಟ್ಟಿ ಧ್ವನಿಯಲ್ಲಿ ಸ್ವರಭಾರದೊಂದಿಗೆ ಮಕ್ಕಳು ಪುಸ್ತಕ ಓದುವ ಹವ್ಯಾಸ ನಡೆಸಲಾಗುವುದು, ನಂತರ ಟ್ರಷರ್ ಹಂಟ್ ( ನಿಧಿ ಶೋಧ) ಆಟವನ್ನು ಆಡಿಸಲಾಗುವುದು.

ಮೇ 9 ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳ ಚಿತ್ರವನ್ನು ಪ್ರದರ್ಶನ ಮಾಡಿ ಅವರ ವ್ಯಕ್ತಿ ಪರೀಕ್ಷೆಯೊಂದಿಗೆ ಪ್ರಯಾಣಾತ್ಮಕ ಚರ್ಚೆ ಏರ್ಪಡಿಸಲಾಗುವುದು, ಅದೇ ದಿನ ಮಕ್ಕಳಿಗೆ ಗುಡ್ ಟಚ್ ಅಂಡ್ ಬ್ಯಾಡ್ ಟಚ್ ಬಗ್ಗೆ ವಿಡಿಯೋ ಪ್ರದರ್ಶನ ಏರ್ಪಡಿಸಿ ಅರಿವು ಮೂಡಿಸಲಾಗುವುದು, ನಂತರ ಟೋಪಿ ಬೇಕಾ ಟೋಪಿ ಆಟ ಆಡಿಸಲಾಗುವುದು.

ಮೇ 10 ರಂದು ಹಳೆ ದಿನಪತ್ರಿಕೆಗಳನ್ನು ಬಳಸಿ ವಿವಿಧ ಆಕೃತಿಗಳ ರಚನೆ ಮತ್ತು ವಿವಿಧ ವಸ್ತುಗಳನ್ನು ರಚಿಸುವುದು, ಆತ್ಮರಕ್ಷಣೆ ಕೌಶಲ್ಯಗಳನ್ನು ವೃದ್ಧಿಸಿಕೊಳುವ ಕುರಿತು ಮಾಹಿತಿ ನೀಡಲಾಗುವುದು, ನಂತರ ಕೇರಂ ಕೋಲು ಕುಟಿಸಿ ಆಟ ಆಡಿಸಲಾಗುವುದು.

ಮೇ 12 ರಂದು ಗಣಿತಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಿಸಲಾಗುವುದು, ನಂತರ ಸಂಖ್ಯಾ ಚಪ್ಪಾಳೆ ಆಟವನ್ನು ಆಡಿಸಲಾಗುವುದು.

ಮೇ 13ರಂದು ವಿಜ್ಞಾನದೊಂದಿಗೆ ಮೋಜು ಸರಳ ಪ್ರಯೋಗ ಕಾರ್ಯಕ್ರಮದ ಅಡಿ ಸ್ಥಳೀಯವಾಗಿ ಲಭ್ಯ ಇರುವ ವಸ್ತುಗಳನ್ನು ಬಳಸಿಕೊಂಡು ತೇಲುವ ಮುಳುಗುವ ಕರಗುವ ಕರಗಲಾಗದ ವಸ್ತುಗಳನ್ನು ತಿಳಿಸುವ ಪ್ರಯೋಗ ಮಾಡುವುದು, ಗಾಳಿಯಲ್ಲಿ ತೂಕವಿದೆ ಎಂಬುದನ್ನು ಬಲೂನ್ ಬೆಳೆಸಿ ಚಟುವಟಿಕೆ ಮಾಡಿ ತೋರಿಸುವುದು, ಆಮ್ಲಜನಕವಿದ್ದಾಗ ದೀಪ ಉರಿಯುತ್ತದೆ ಎಂಬುದನ್ನು ಗಾಜಿನ ಬಾಟಲಿನೊಳಗೆ ಉರಿಯುವ ಮೇಣದ ಬತ್ತಿ ಇಟ್ಟು ಮುಚ್ಚಿದಾಗ ಆಗುವ ಬದಲಾವಣೆ ತೋರಿಸುತ್ತಾ ವಿವರಿಸುವುದು, ಬೆಂಕಿ ಅವಗಡಗಳು ತಡೆಗಟ್ಟುವ ಬಗ್ಗೆ ಅಗ್ನಿಶಾಮಕ ದಳದ ವತಿಯಿಂದ ಅನುಕು ಪ್ರದರ್ಶನ ಏರ್ಪಡಿಸಲಾಗುವುದು, ನಂತರ ನಾಯಿ ಮೂಳೆ ಆಟ ಆಡಿಸಲಾಗುವುದು.

ಮೇ 14 ರಂದು ಶಿಬಿರದ ಮಕ್ಕಳನ್ನು ಒಳಗೊಂಡಂತೆ ಗ್ರಾಮ ಪಂಚಾಯಿತಿಯ ವತಿಯಿಂದ ಎಲ್ಲಾ ಸದಸ್ಯರು ಅಧಿಕಾರಿಗಳು ಸೇರಿ ಮಕ್ಕಳ ಗ್ರಾಮ ಸಭೆ ನಡೆಸುವುದು, ನಂತರ ಚೌಕ ಬಾರ, ಫಾಲೋ ದಿ ಲೀಡರ್ ಆಟ ಆಡಿಸಲಾಗುವುದು,

ಮೇ 15 ರಂದು ಪ್ರತಿ ಮಗುವಿಗೂ ಅವರಿಗಿಷ್ಟದ ಒಂದು ವಿಷಯ ಮತ್ತು ವಸ್ತುವಿನ ಕುರಿತು ತಮ್ಮದೇ ಆದ ಪದಗಳಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗುವುದು, ನಂತರ ಹಗ್ಗ ಜಗ್ಗಾಟ ಆಟವನ್ನು ಆಡಿಸಲಾಗುವುದು.

ಮೇ 16ರಂದು ಪ್ರತಿಯೊಂದು ಮಗುವಿಗೂ ಬಿಳಿ ಹಳೆ ಪೆನ್ಸಿಲ್ ಕ್ರೈಂ ಇತ್ಯಾದಿಗಳನ್ನು ಒದಗಿಸಿ ತಮಗಿಷ್ಟದ ಚಿತ್ರ ರಚಿಸಿ ಬಣ್ಣ ಹಾಕಲು ಅವಕಾಶ ಕಲ್ಪಿಸಿ ಸ್ಥಳದಲ್ಲಿ ಮಕ್ಕಳಿಗೆ ಚಿತ್ರಗಳನ್ನು ಪ್ರದರ್ಶನಕ್ಕಿಡುವುದು, ನಂತರ ಸೆಟ್ ಆಟವನ್ನು ಆಡಿಸಲಾಗುವುದು.

ಮೇ 17ರಂದು ಸ್ಥಳೀಯವಾಗಿ ಭೇಟಿ ನೀಡಲು ಸೂಕ್ತ ಇರುವ ಜಾಗಗಳಾದ ಅಂಚೆ ಕಚೇರಿ, ಗ್ರಾಮ ಪಂಚಾಯಿತಿ, ಹಾಲಿನ ಡೈರಿ, ಬ್ಯಾಂಕ್ ಇತ್ಯಾದಿಗಳ ಕಚೇರಿಗೆ ಕ್ಷೇತ್ರ ಭೇಟಿ ನೀಡಿಸತಕ್ಕದ್ದು.

ಮೇ 19 ರಂದು ಮಕ್ಕಳಿಗೆ ಗೊತ್ತಿರುವ ಹಾಡು ನೃತ್ಯ ಅಭಿನಯ ಗೀತೆಗಳನ್ನು ಆಡಿಸುವುದು, ಗೀತೆಗಳು ನೃತ್ಯ ಮಾಡಿಸುವುದು, ನಂತರ ಕ್ರಿಕೆಟ್ ಆಡಿಸಲಾಗುವುದು.

ಮೇ 20 ರಂದು ಪಾತ್ರ ಅಭಿನಯ, ಪೋಕ್ಸೋ ಮಕ್ಕಳಿಗೆ ಗುಡ್ ಟಚ್ ಬ್ಯಾಡ್ ಟಚ್ ಗಳ ಅರಿವು ಮೂಡಿಸುವುದು, ಬಾಲ್ಯ ವಿವಾಹ, ಮಕ್ಕಳ ಹಕ್ಕುಗಳ ಕುರಿತು ಅರಿವು ಮೂಡಿಸಲಾಗುವುದು, ನಂತರ ಹಿಡಿ ಗೆಲ್ಲು ಆಟ ಆಡಿಸಲಾಗುವುದು.

ಮೇ 21ರಂದು ಆಹಾರ ಮತ್ತು ಆರೋಗ್ಯದ ಕುರಿತು ಮಕ್ಕಳಿಗೆ ವಿಟಮಿನ್ ಗಳ ಪರಿಚಯ ಉತ್ತಮ ಆಹಾರ ಸೇವೆ ಕುರಿತು ಮಾಹಿತಿ ನೀಡುವುದು. ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯರನ್ನು ಆಹ್ವಾನಿಸಿ ಮಕ್ಕಳಿಗೆ ಆರೋಗ್ಯ ಮತ್ತು ಶುಚಿತ್ವದ ಕುರಿತು ಮಾಹಿತಿ ಒದಗಿಸಲಾಗುವುದು.

ಮೇ 22ರಂದು ಸುಗಮಕಾರರೇ ಒಂದು ಮೌಲ್ಯವನ್ನು ಸಾರುವ ಕಥೆಯನ್ನು ಸಿದ್ಧಪಡಿಸಿಕೊಂಡು ಸೂಕ್ತ ಸ್ವಭಾವದೊಂದಿಗೆ ಹೇಳುವುದು, ನಂತರ ಚರ್ಚೆಯ ಮೂಲಕ ಮೌಲ್ಯವನ್ನು ಅರ್ಥೈಸುವುದು ಪ್ರೇರಣದಾಯಕ ನುಡಿಗಳ ಮೂಲಕ ಮಕ್ಕಳಿಗೆ ಧನಾತ್ಮಕ ಭಾವನೆಗಳನ್ನು ಮೂಡಿಸಲಾಗುವುದು, ನಂತರ ಕುಂಟೆ ಬಿಲ್ಲೆ ಆಟ ಆಡಿಸಲಾಗುವುದು,

ಮೇ 23 ರಂದು ತಲಾ 4 ರಿಂದ 5 ಮಕ್ಕಳನ್ನು ಗುಂಪುಗಳಾಗಿ ಮಾಡಿ ಪ್ರತಿ ಗುಂಪಿಗೂ ಪರಿಸರದಲ್ಲಿ ಲಭ್ಯವಿರುವ ಗಮನಿಸಲು ಸಾಧ್ಯವಾಗುವ ಯಾವುದಾದರೂ ಒಂದು ವಿಷಯದ ಬಗ್ಗೆ ಪ್ರಾಜೆಕ್ಟ್ ಮಾಡಿಸುವುದು, ಅನಂತರ ಪ್ರದರ್ಶನಕ್ಕೆ ಇಡುವುದು, ನಂತರ ಕೆರೆ ದಡ, ಮ್ಯೂಸಿಕಲ್ ಚೇರ್ ಆಟ ಆಡಿಸಲಾಗುವುದು.

ಮೇ 24 ರಂದು ಸಮಾರೋಪ ಸಮಾರಂಭಕ್ಕೆ ಪೂರ್ವಸಿದ್ಧತೆ ಮತ್ತು ಹಾಡು ನೃತ್ಯ ಇತ್ಯಾದಿಗಳನ್ನು ಸಿದ್ದಪಡಿಸುವುದು ನಂತರ ಮೆಮೊರಿ ಗೇಮ್ ಆಟ ಆಡಿಸಲಾಗುವುದು.

ಮೇ 26ರಂದು ಮಕ್ಕಳ ಕಲಿಕಾ ಪ್ರದರ್ಶನ ಸಮಾರೋಪ ಸಮಾರಂಭ ಮಕ್ಕಳಿಂದಲೇ ಕಾರ್ಯಕ್ರಮ ನಿರ್ವಹಣೆ ಮಾಡಿಸಲಾಗುವುದು.

ಆಟದೊಂದಿಗೆ ಪಾಠ, ತನ್ನ ಸ್ವಂತ ಊರಿನ ಪರಿಚಯ, ಕ್ರಾಪ್ಟ್, ಸಂಗೀತ, ನಾಟಕ, ಹೊರಸಂಚಾರ, ಸಾಮಾನ್ಯ ಜ್ಞಾನ ಹೆಚ್ಚಿಸುವ ಚಟುವಟಿಕೆಗಳು, ಮಂಡ್ಯದ ಹಿರಿಮೆ ಸಾರುವ ಚಟುವಟಿಕೆಗಳು, ಓರೇಗಾಮಿ, ಗ್ರಾಮೀಣ ಕ್ರೀಡೆಗಳ ಪರಿಚಯ ಇತ್ಯಾದಿ ಮಕ್ಕಳ ಮಾನಸಿಕ , ದೈಹಿಕ ಸಾಮರ್ಥ್ಯ ವೃದ್ಧಿಸುವ ಚಟುವಟಿಕೆಗಳನ್ನು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗುತ್ತಿದೆ. ಎಲ್ಲಾ ನಮ್ಮೂರಿನ ಪುಟ್ಟ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಆಶಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಜಾತೀಯತೆ ತೊಲಗಲಿ : ಡಾ.ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…

3 hours ago

ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ

ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…

3 hours ago

ಭೀಕರ ಸರಣಿ ಅಪಘಾತ : ಇಬ್ಬರು ಸಾವು, 20ಕ್ಕೂ ಹೆಚ್ಚು ವಾಹನ ಹಾನಿ

ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…

3 hours ago

ವಿದ್ಯಾವಂತರಲ್ಲಿ ಹೆಚ್ಚುತ್ತಿರುವ ಮೌಢ್ಯತೆ, ಕಂದಾಚಾರ : ಸಿಎಂ ವಿಷಾದ

ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…

3 hours ago

ವಸ್ತುಪ್ರದರ್ಶನದಲ್ಲಿ ಜನಾಕರ್ಷಿಸಿದ ಚಿತ್ರ ಸಂತೆ

ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…

3 hours ago

ಬಂಧನದ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕನಿಗೆ ಲುಕ್‌ಔಟ್‌ ನೋಟಿಸ್‌ ಜಾರಿ

ಬೆಂಗಳೂರು : ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…

3 hours ago