ಮಂಡ್ಯ : ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಯಡವಟ್ಟು ಮಾಡಿದೆ. ಕುರ್ಚಿಯನ್ನು ಉಳಿಸಿಕೊಳ್ಳಲು ರೈತರನ್ನು ಬಲಿ ಕೊಡ್ತಾ ಇದ್ದೀರಾ. ನಿಮ್ಮ ಬಲಿಯಾಗಬೇಕು ಹೊರತು, ರೈತರನ್ನು ಅಲ್ಲ ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ವತಿಯಿಂದ ನಡೆಯುತ್ತಿರುವ ಚಡ್ಡಿ ಚಳವಳಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ರೈತರ ಪರವಾಗಿ ಹೋರಾಟ ಮಾಡುತ್ತಿದೆ. ಇಂದು ಮಂಡ್ಯ ರೈತರ ಟ್ರೇಡ್ ಮಾರ್ಕ್ ಆಗಿರೋ ಪಟಾಪಟಿ ಚಡ್ಡಿ ಧರಿಸಿ ಪ್ರತಿಭಟನೆ ಮಾಡುತ್ತಿದ್ದೇವೆ, ತಮಿಳುನಾಡಿಗೆ ಬಿಡುತ್ತಿರೋ ನೀರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ನೀರನ್ನು ಬಿಡಲ್ಲ ಎಂದು ಹೇಳಿದವರು ಅಧಿಕಾರ ಹೊರಟು ಹೋಗುತ್ತೆ ಎಂದು ನೀರು ಬಿಡುತ್ತಿದ್ದಾರೆ. ತಮಿಳುನಾಡಿನವರಿಗೆ ಎರಡನೇ ಬೆಳೆಗೆ ನೀರು ಕೊಡುತ್ತಿದ್ದಾರೆ. ನಮ‌್ಮ ಒಂದು ಬೆಳಗೆ ನೀರಿಲ್ಲ. ತಮಿಳುನಾಡಿನವರು ಮೂರು ಬೆಳೆ ಬೆಳೆಯಬಹುದು. ನಾವು ಒಂದು ಬೆಳೆ ಬೆಳೆಯಬಾರದಾ ಎಂದು ಪ್ರಶ್ನಿಸಿದರು.
ಪೆನ್ನು ಪೇಪರ್ ಕೊಡಿ ಎಂದು ಕೇಳಿದ್ರು. ಪೆನ್ನು ಪೇಪರ್ ಕೊಟ್ಟರೆ ಇವರಿಗೆ ಏನು ಬೇಕು ಅದನ್ನು ಬರೆದುಕೊಳ್ಳುತ್ತಿದ್ದಾರೆ. ಕಾವೇರಿ ನೀರು ಕುಡಿಯಲು ಕೊಡಿ ಅಂದ್ರೆ ವಿಸ್ಕಿ, ಬ್ರಾಂದಿ ಕೊಡ್ತೀವಿ ಎನ್ನುತ್ತಾರೆ. ಜನರನ್ನು ಕುಡಿಸಿ ಕುಡಿಸಿ ಹಾಳು ಮಾಡ್ತಾರೆ. ಈ ಸರ್ಕಾರ ವಿಸ್ಕಿ, ಬ್ರಾಂದಿ, ರಮ್ ಕೊಡೋ ಸರ್ಕಾರ. ನೀರು ಕೊಡೋ ಸರ್ಕಾರ ಬಿಜೆಪಿ ಎಂದರು.
ಸೆಟೆಲ್ ಮೆಂಟ್ ಮಾಡಿದೀವಿ ಅಂತಾ ಹೇಳ್ತಾರೆ. ಏನ್ ಸೆಟೆಲ್‌ಮೆಂಟ್ ಮಾಡಿದ್ದಾರೆ ಇವರು. ಕೇವಲ ವಿಸ್ಕಿ, ಬ್ರಾಂದಿ, ರಮ್ ಕುಡಿಸುತ್ತಿದ್ದಾರೆ ಇವರು ಅಷ್ಟೇ. ಇವರ ಚಡ್ಡಿ ಇಳಿಸಿ, ಅಧಿಕಾರದಿಂದ ಇಳಿಸುವ ಶಕ್ತಿ ಮಂಡ್ಯಗೆ ಇದೆ. ಇದಕ್ಕೆ ಇಂದಿನ ಚಡ್ಡಿ ಮೆರವಣಿಗೆಯೇ ಸಾಕ್ಷಿ ಎಂದು ಹೇಳಿದರು.
ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…
ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…
ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…
ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…
ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…