ಮಂಡ್ಯ

ಮಂಡ್ಯ ಜಿಲ್ಲಾ ಕಸಾಪಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಮಂಡ್ಯ: ಜಿಲ್ಲೆಯಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದ್ದು, ಇದರ ಬೆನ್ನಲ್ಲೇ ಜಿಲ್ಲೆಯ ಪರಿಷತ್ತಿನ ಎಲ್ಲಾ ಆಡಳಿತ ಮಂಡಳಿಯನ್ನು ವಿಸರ್ಜಿಸಿದ್ದು, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತಿನ ನೂತನ ಅಧ್ಯಕ್ಷ ಎಚ್.ಎಸ್.ಮುದ್ದೇಗೌಡ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಜಿಲ್ಲಾ ಪರಿಷತ್ತಿಗೆ ನಾಲ್ಕು ಮಂದಿ ಪದಾಧಿಕಾರಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಹುಸ್ಕೂರು ಕೃಷ್ಣೇಗೌಡ, ಜಿಲ್ಲಾ ಕಾರ್ಯದರ್ಶಿಯಾಗಿ ಸುಜಾತ ಕೃಷ್ಣ, ಕೋಶಾಧ್ಯಕ್ಷರಾಗಿ ಬಿ.ಎಂ.ಅಪ್ಪಾಜಪ್ಪ, ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಮುಂದಿನ ವಾರದಲ್ಲಿ ಎಲ್ಲಾ ತಾಲೂಕಿಗೆ ಭೇಟಿ ನೀಡಿ, ರಾಜಕೀಯ ಹೊರತು ಪಡಿಸಿ ಆಸಕ್ತಿಯಿಂದ ಕೆಲಸ ಮಾಡುವವರನ್ನು ನೇಮಕ ಮಾಡಲಾಗುವುದು. ಜಿಲ್ಲಾ ಸಮ್ಮೇಳನಕ್ಕೆ ೬ ಲಕ್ಷ ರೂ ಗಳನ್ನು ರಾಜ್ಯ ಸರ್ಕಾರ ನೀಡಲಿದ್ದು, ಅದನ್ನು ೬.೫೦ ಲಕ್ಷಕ್ಕೆ ಹೇರಿಸಲು ಪ್ರಯತ್ನ ಮಾಡಲಾಗುವುದು. ತಾಲೂಕು ಸಮ್ಮೇಳನಕ್ಕೆ ೧ ಲಕ್ಷ ಹೋಬಳಿ ಸಮ್ಮೇಳನಕ್ಕೆ ೫೦ ಸಾವಿರ ನೀಡುತ್ತಿದ್ದು ಅದನ್ನು ಹೆಚ್ವಿಸಲು ಶ್ರಮಿಸಲಾಗುವುದು ಎಂದು ಹೇಳಿದರು.

ಒಂದು ತಿಂಗಳಿನಲ್ಲಿ ಹೊಸ ಆಡಳಿತ ಮಂಡಳಿಯ ಕಾರ್ಯಗಳನ್ನು ಮುಗಿಸಿ ಅಧಿಕೃತವಾಗಿ ಸಾಹಿತ್ಯ ಪರಿಷತ್ತಿನ ಕೆಲಸಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದ ಅವರು ಜಿಲ್ಲೆಯಲ್ಲಿರುವ ಕನ್ನಡ ಭವನ ಸರ್ಕಾರ ಇತರೆ ಇಲಾಖೆ ನೀಡುವುದು ಅಥವಾ ಮಾರಾಟ ಮಾಡುವುದಕ್ಕೆ ನಿರ್ಣಯಿಸಲಾಗಿದ್ದು, ನೂತನ ಕನ್ನಡ ಭವನವನ್ನು ನಗರದ ಕೇಂದ್ರ ಭಾಗದಲ್ಲಿ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಇದೇ ವೇಳೆ ಹೇಳಿದರು.

ಜಿಲ್ಲೆಯಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸನ್ನು ಕಂಡಿದ್ದು, ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಸಮಾಜದ ವರ್ಗದ ಜನ ಸಮೂಹಕ್ಕೆ ಕೇಂದ್ರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಕೃತಜ್ಞಗತೆ ಸಲ್ಲಿಸಿದರು.

ಸಮ್ಮೇಳನದ ವಿಚಾರವಾಗಿ ನೂರು ಜನದ ಪೈಕಿ ಐದು ಮಂದಿ ವಕ್ರವಾಗಿ ಮಾತನಾಡುವುದು ಸಹಜ, ಒಪ್ಪಿಗೆ ಸೂಚಿಸಿದವರ ಸಂಖ್ಯೆ ಹೆಚ್ಚಿದ್ದು ಅದಕ್ಕೆ ಮನ್ನಣೆ ನೀಡಬೇಕು ಎಂದ ಅವರು, ಜಿಲ್ಲೆಗೆ ಸಮ್ಮೇಳನ ತಂದ ಕೇಂದ್ರ ಪರಿಷತ್ತಿನ ಅಧ್ಯಕ್ಷರ ಕಾಲೆಳೆಯುವುದು ಜಿಲ್ಲೆಗೆ ಶೋಭೆ ತರುವಂತದ್ದಲ್ಲ. ಹಾಗೆಯೆ ಹಾವೇರಿ ಸಮ್ಮೇಳನವನ್ನು ಮೀರಿದ ರೀತಿಯಲ್ಲಿ ಮಂಡ್ಯ ಸಮ್ಮೇಳನ ನಡೆದಿದೆ ಎಂದು ತಚ್ಛವಾಗಿ ಮಾತನಾಡಿದ್ದರಿಂದಾಗಿ ಹಾವೇರಿ ಜನರು ಪ್ರತಿಭಟನೆ ನಡೆಸುವಂತಾಗಿದ್ದು, ಇದು ಬೇಕಿತ್ತೇ ಎಂದು ಪ್ರಶ್ನಸಿದರು.

ಹೊಸ ಹೊಸ ಯೋಜನೆಗಳನ್ನು ತಂದು ಸಮ್ಮೇಳನ ನಡೆಸಿದ್ದು, ಹೊರ ದೇಶದ ಶೇ.೯೫ರಷ್ಟು ಕನ್ನಡಿಗರು ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇದು ಪ್ರಪ್ರಥಮವಾಗಿ ನಡೆದ ಬದಲಾವಣೆಯಾಗಿದೆ. ಹೊರದೇಶದವರನ್ನು ಏಕೆ ಕರೆಯಬೇಕಿತ್ತು. ವಿಶ್ವೇರಯ್ಯ ಅವರ ಮೊಮ್ಮಗಳನ್ನು ಏಕೆ ಕೆರೆತರಬೇಕು ಎಂದು ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರೊ.ಜಯಪ್ರಕಾಶ್‌ಗೌಡ, ಜಿ.ಟಿ.ವೀರಪ್ಪ, ಎಸ್.ಬಿ.ಶಂಕರೇಗೌಡ, ವಾ.ನಂ ಶಿವರಾಮು, ಸತೀಶ್ ಜವರೇಗೌಡ ಸೇರಿದಂತೆ ಹಲವರು ಸಮ್ಮೇಳನದ ವಿರುದ್ಧ ಮಾತನಾಡಿದ್ದು, ಅದು ಶೋಭೆ ತರುವಂತದ್ದಲ್ಲ, ಉಚಿತವಾದದ್ದೂ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ, ಜಿಲ್ಲಾ ಕಾರ್ಯದರ್ಶಿ ಸುಜಾತ ಕೃಷ್ಣ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಪದಾಧಿಕಾರಿಗಳಾದ ದರಸಗುಪ್ಪೆ ಧನಂಜಯ, ಮಂಜುನಾಥ ಬಲ್ಲೇನಹಳ್ಳಿ, ಚಿಕ್ಕತಿಮ್ಮಯ್ಯ ಇದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ : ಗ್ರಾ.ಪಂ ಮಾಜಿ ಅಧ್ಯಕ್ಷನ ವಿರುದ್ಧ ದೂರು

ಸಿದ್ದಾಪುರ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಗ್ರಾ.ಪಂ. ಮಾಜಿ ಅಧ್ಯಕ್ಷನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ…

25 mins ago

ರೈತರಿಗೆ ಸಿಹಿ ಸುದ್ದಿ ; ಕೊಬ್ಬರಿಗೆ ಬೆಂಬಲ ಬೆಲೆ

ಬೆಂಗಳೂರು : ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ೨೦೨೬ರ ಹಂಗಾಮಿನ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು…

29 mins ago

ಮಾಗಿ ಚಳಿಯ ಅಬ್ಬರಕ್ಕೆ ರಾಜ್ಯದ ಜನತೆ ಕಕ್ಕಾಬಿಕ್ಕಿ

ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ೩೦ ಡಿ.ಸೆ. ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಹೆಚ್ಚಾಗಿರುವ ಮಾಗಿ ಚಳಿಯ ವಾತಾವರಣಕ್ಕೆ ಜನರು…

32 mins ago

ಹುಲಿ ದಾಳಿ; ಹಸು ಸಾವು

ಗುಂಡ್ಲುಪೇಟೆ : ತಾಲ್ಲೂಕಿನಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು ಹಸುವಿನ ಮೇಲೆ ದಾಳಿ ಮಾಡಿದ ವ್ಯಾಘ್ರ ರಕ್ತ ಹೀರಿ ಕೊಂದಿರುವ…

35 mins ago

ಮೈಸೂರು | ಜಿಲ್ಲೆಯಲ್ಲಿ ಅಪೌಷ್ಠಿಕ‌ ಮಕ್ಕಳ ಸಂಖ್ಯೆ ಗಣನೀಯ ಇಳಿಕೆ

ಮೈಸೂರು : NFHS-5 ವರದಿಯ ಪ್ರಕಾರ ಮೈಸೂರು ಜಿಲ್ಲೆಯ SAM ಮಕ್ಕಳ ಪ್ರಮಾಣ 7.2% ಇದ್ದು ಪ್ರಸ್ತುತ 0.21% ಗೆ…

37 mins ago

ಅಧಿಕಾರ ಕಿತ್ತಾಟ ಬಿಟ್ಟು ಅಭಿವೃದ್ಧಿ ಚರ್ಚೆ ನಡೆಯಲಿ : ಶಾಸಕ ಜಿ.ಟಿ.ದೇವೇಗೌಡ

ಮೈಸೂರು : ರಾಜ್ಯದಲ್ಲಿ ನಾಯಕತ್ವ, ಅಧಿಕಾರ ಹಂಚಿಕೆ ಕಿತ್ತಾಟ ಬಿಟ್ಟು ರಾಜ್ಯದ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಲಿ ಎಂದು…

41 mins ago