ಪಾಂಡವಪುರ : ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರ ಸಲ್ಲಿಸಿದ್ದ ಅರ್ಜಿಗೆ 30 ದಿನದೊಳಗೆ ಮಾಹಿತಿ ನೀಡದ ಇಲ್ಲಿನ ತಹಶೀಲ್ದಾರ್ ಎಸ್.ಸಂತೋಷ್ ಅವರಿಗೆ ಕರ್ನಾಟಕ ಮಾಹಿತಿ ಆಯೋಗ 25 ಸಾವಿರ ರೂ. ದಂಡ ವಿಧಿಸಿದೆ.
ತಹಶೀಲ್ದಾರ್ ಅವರಿಂದ ದಂಡದ ಮೊತ್ತವನ್ನು ಮುಂದಿನ ತಿಂಗಳ ಸಂಬಳದಲ್ಲಿ ಒಂದೇ ಕಂತಿನಲ್ಲಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಿ ವರದಿ ಸಲ್ಲಿಸಿ ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್ ಶ್ರೀನಿವಾಸ್ ಅವರಿಗೆ ಆಯೋಗವು ಸೂಚಿಸಿದೆ.
ಅಷ್ಟೆ ಅಲ್ಲದೇ ಅರ್ಜಿದಾರನಿಗೆ ಮಾಹತಿ ನೀಡಲು 240ಕ್ಕೂ ಹೆಚ್ಚು ದಿನ ವಿಳಂಬವಾಗಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಆಯೋಗ, ಕಷ್ಟ ಇತರೆ ವೆಚ್ಚಗಳಿಗಾಗಿ ಆರ್ಜಿದಾರನಿಗೆ 10 ಸಾವಿರ ರೂ ಪರಿಹಾರವನ್ನು 15 ದಿನದೊಳಗೆ ನೀಡುವಂತೆ ಆದೇಶಿಸಿದೆ. ತಪ್ಪಿದಲ್ಲಿ ನಾಗರಿಕ ಸೇವಾ ನಿಯಮಗಳ ಪ್ರಕಾರ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಪ್ರಕರಣದ ವಿಚಾರಣೆಯನ್ನು ಏ 9 ರಂದು ಬೆಳಿಗ್ಗೆ 11ಕ್ಕೆ ನಿಗದಿ ಮಾಡಿರುವ ಆಯೋಗವು, ಆ ದಿನ ಖುದ್ದು ಹಾಜರಾಗುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದೆ.
ಕೋಲ್ಕತ್ತಾ: ರಘುವಂಶಿ, ವೆಂಕಟೇಶ್ ಅಯ್ಯರ್ ಅವರ ಅಮೋಘ ಬ್ಯಾಟಿಂಗ್, ಅರೋರಾ ಹಾಗೂ ವರುಣ್ ಚಕ್ರವರ್ತಿ ಅವರ ಮಾರಕ ದಾಳಿಯ ನೆರವಿನಿಂದ…
ಬ್ಯಾಂಕಾಕ್: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 3,000 ದಾಟಿದೆ. ಇನ್ನೂ 4,714 ಜನರು ಗಾಯಗೊಂಡಿದ್ದಾರೆ ಮತ್ತು 341…
ವಿಧೇಯಕ ತರುವ ಮೂಲಕ ಮೋದಿ ಅವರು ವಕ್ಫ್ ನ ₹1.2 ಲಕ್ಷ ಕೋಟಿ ಬೆಲೆಯ ಆಸ್ತಿ ರಕ್ಷಣೆ ಮಾಡಿದ್ದಾರೆ ನಾವು…
ಮಂಡ್ಯ: ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಂದ ವ್ಯಾಪವ ಭ್ರಷ್ಟಾಚಾರ ನಡೆದಿದ್ದು, ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಶಿಸ್ತುಕ್ರಮ ಕೈಗೊಂಡು ಕ್ರಿಮಿನಲ್ ಮೊಕದ್ದಮೆ…
ಮೈಸೂರು: ಪತ್ನಿ ಜೊತೆಯಲ್ಲಿದ್ದರೂ ಕೂಡ ತನಗೆ ವಿಚ್ಛೇದನವಾಗಿದೆ ಎಂದು ನಂಬಿಸಿ ಮಹಿಳೆಯೊಬ್ಬರನ್ನು ವಿವಾಹವಾಗಿದ್ದಲ್ಲದೆ, ಆಕೆಯಿಂದ 50 ಲಕ್ಷ ರೂ. ಹಣವನ್ನು…
ಮೈಸೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.…