ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ, ಜಿಲ್ಲಾಧಿಕಾರಿಗಳು ಇದುವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಮಾಹಿತಿ ಹಕ್ಕು ಸಮಿತಿಯ ಮಂಡ್ಯ ತಾಲೂಕು ಅಧ್ಯಕ್ಷ ಶಿವಕುಮಾರ್ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಷುಗರ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ಅಪ್ಪಾಸಾಹೇಬ ಚನ್ನಪ್ಪ ಪಾಟೀಲ್ ಮೇಲೆ ಭ್ರಷ್ಟಾಚಾರ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಇದೇ ಜನವರಿ ೨೦ರಂದು ದೂರು ಸಲ್ಲಿಸಿದ್ದು, ಅವರ ವಿರುದ್ಧ ಪರಿಶೀಲನೆ ನಡೆಸಿ ಮಾಹಿತಿ ಹಾಗೂ ಹಿಂಬರಹ ನೀಡಲು ಸೂಚಿಸಿದ್ದು, ಇದೇ ಫೆಬ್ರವರಿ ೧೩ರಂದು ಸರ್ಕಾರದ ಕಾರ್ಯದರ್ಶಿಗಳೂ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರೂ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು.
೨೦೨೨-೨೩ನೇ ಸಾಲಿನಲ್ಲಿ ಸಕ್ಕರೆ, ಕಾಕಾಂಬಿ ಮತ್ತು ವಿದ್ಯುತ್ ಆಮದಿನಿಂದ, ೨೦೨೩ರ ಮೇ ಮತ್ತು ಜೂನ್‌ನಲ್ಲಿ ಸಕ್ಕರೆ ಮಾರಾಟ ಮಾಡದೇ ನಷ್ಟವುಂಟಾಗಿದ್ದು, ಮೈಷುಗರ್ ಅಧ್ಯಕ್ಷರ ವಾಹನಕ್ಕೆ ಇಂಧನ ತುಂಬಿಸುವಲ್ಲಿಯೂ ಆಡಳಿತದ ದುರುಪಯೋಗವಾಗಿದೆ ಎಂದರು.
ಸಿಸಿಟಿವಿ ಅಳವಡಿಕೆ ಮಾಡಿದ ನಂತರ ಟೆಂಡರ್ ಕರೆದು ಅಕ್ರಮ, ಕಾನೂನು ಬಾಹಿರವಾಗಿ ಅಧಿಕಾರಿಗಳಿಗೆ ಸೂಚನೆ, ಲಕ್ಷಾಂತರ ಬೆಲೆಯ ಮರಗಳನ್ನು ಕೇವಲ ೭೦ ಸಾವಿರಕ್ಕೆ ಮಾರಾಟ, ಉತ್ತಮ ಆಡಳಿತ ನಡೆಸುತ್ತಿದ್ದ ಅಧಿಕಾರಿಯನ್ನು ೭ ತಿಂಗಳಿಗೆ ವರ್ಗಾವಣೆ ನೀಡಿದ್ದು, ಅಧಿಕಾರಿ ದಿಟ್ಟತನದಿಂದ ತಡೆಯಾಜ್ಞೆ ತಂದಿದ್ದಾರೆಂದು ಹೇಳಿದರು.
೨೦೨೩ರಿಂದ ಇಲ್ಲಿಯವರೆಗೂ ೪ ಕೋಟಿ ರೂ ಕಾಮಗಾರಿಗಳನ್ನು ಮಾಡಿದ್ದು, ಅವುಗಳೂ ಕೂಡ ಕಳಪೆಯಿಂದ ಕೂಡಿದೆ. ಅಲ್ಲದೇ ಕಬ್ಬು ಸಾಗಾಣೆಯ ವೆಚ್ಚ ನೀಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕಬ್ಬು ಬೆಳೆಗಾರ ಪತ್ರಬರೆದಿರುವುದನ್ನು ಖಂಡಿಸಿ ಮೈಷುಗರ್ ಅಧ್ಯಕ್ಷರ ವಿರುದ್ಧ ಹರಿಹಾಯ್ದರು.
ಗೋಷ್ಠಿಯಲ್ಲಿ ದೀಪಕ್, ವಿನೋಬ್, ಸಚಿನ್, ಪ್ರಸನ್ನಕುಮಾರ್, ಸುನಿಲ್ ಇದ್ದರು.
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…
ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…
ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…