ಮಂಡ್ಯ: ಮೈ ಶುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಕೆಲಸ ನಡೆಯುತ್ತಿದ್ದು, ಪ್ರತಿದಿನ ಸುಮಾರು 3000 ಟನ್ ನಷ್ಟು ಕಬ್ಬು ಪೂರೈಕೆಯಾಗುತ್ತಿದೆ. ನಿಗಧಿತ ಗುರಿಯಂತೆ 2.5 ಲಕ್ಷ ಟನ್‌ನಷ್ಟು ಕಬ್ಬು ಅರೆಯಲಾಗುವುದು, ಕಾರ್ಖಾನೆಯಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಮೈ ಶುಗರ್ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಹೆಚ್ ಎಲ್ ನಾಗರಾಜು ತಿಳಿಸಿದ್ದಾರೆ.
ಅನಧಿಕೃತವಾಗಿ ಪರಭಾರೆ
ಮೈಷುಗರ್ ಕಂಪನಿಯ ವ್ಯಾಪ್ತಿಯ ಪ್ರದೇಶದಲ್ಲಿ ಅಕ್ಕ-ಪಕ್ಕದ ಕಾರ್ಖಾನೆಯಾದ ಕೆ.ಎಂ.ದೊಡ್ಡಿಯ ಭಾರತೀನಗರದಲ್ಲಿರುವ ಶ್ರೀ.ಚಾಮುಂಡೇಶ್ವರಿ ಷುಗರ್ಸ್ ಲಿ. ಇವರು ತಮ್ಮ ವ್ಯಾಪ್ತಿಯ ಪ್ರದೇಶವಾದ ಕುರುಬನಪುರ ಗ್ರಾಮದ ರೈತ ಶ್ರೀ.ಸಿದ್ದಗೌಡರ ಕಬ್ಬುನ್ನು 15 ತಿಂಗಳು ತುಂಬಿದರೂ ಕಬ್ಬುನ್ನು ಕಟಾವು ಮಾಡದೇ ಮೈಷುಗರ್ ವ್ಯಾಪ್ತಿಯ ಕಬ್ಬನ್ನು ಕಟಾವು ಮಾಡಲು ಬಂದಿರುತ್ತಾರೆ. ಎನ್.ಎಸ್.ಎಲ್. ಷುಗರ್ಸ್ ಲಿ. ಕೊಪ್ಪ ಇವರು ಹಲ್ಲೆಗೆರೆ ಗ್ರಾಮದಲ್ಲಿ ಕ್ಷೇತ್ರ ಸಹಾಯಕರ ಕಚೇರಿಗೆ ಬೀಗ ಹಾಕಿರುತ್ತಾರೆ. ಈ ಎರಡು ಕಾರ್ಖಾನೆಗಳು ಮೈಷುಗರ್ ವ್ಯಾಪ್ತಿ ಪ್ರದೇಶ ಕಬ್ಬನ್ನು ಅನಧಿಕೃತವಾಗಿ ಪರಭಾರೆ ಮಾಡುತ್ತಿದ್ದಾರೆ.
ನಿಗಧಿತ ಸುಮಯದಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ, ಸಾಗಾಣಿಕೆದಾರರಿಗೆ ಮತ್ತು ಕಬ್ಬು ಕಟಾವು ಮೇಸ್ತ್ರಿಗಳಿಗೆ ಮೈ ಶುಗರ್ ಸಕ್ಕರೆ ಕಾರ್ಖಾನೆ ಹಣ ಪಾವತಿ ಮಾಡುತ್ತಿದೆ.
ಮೈಸೂರು ಸಕ್ಕರೆ ಕಂಪನಿ ನಿಯಮಿತ ಕಾರ್ಖಾನೆಯು ಸೆಪ್ಟೆಂಬರ್ 15 ವರೆಗೆ 74605 ಮೆ.ಟನ್ ಕಬ್ಬು ನುರಿಸಿಲಾಗಿರುತ್ತದೆ.
38318 ಕ್ವಿಂಟಾಲ್ ಸಕ್ಕರೆ ಉತ್ಪಾದನೆ ಹಾಗೂ 4140 ಮೆ. ಟನ್ ಕಾಕಂಬಿ ಉತ್ಪಾದನೆಯಾಗಿರುತ್ತದೆ.
223 ಕಬ್ಬು ಕಟಾವು ಗ್ಯಾಂಗ್ ಮೇಸ್ತಿಗಳ ಸಂಖ್ಯೆ ಇದ್ದು, ಕಬ್ಬು ಕಟಾವು ಮೇಸ್ತ್ರಿ ಗಳಿಗೆ ರೂ 2,61,12,200/- ಪಾವತಿಯಾಗಿರುತ್ತದೆ,
ರೂ 91,62,839/- ಕಬ್ಬು ಸಾಗಾಣಿಕೆ ವೆಚ್ಚವಾಗಿದೆ. ಕಬ್ಬು ಸರಬರಾಜು ಮಾಡಿರುವ 531 ರೈತರಿಗೆ ಒಟ್ಟು (35775.511 ಮೆ. ಟನ್ ಕಬ್ಬು) ರೂ.9,14,45,197/- ಹಣ ಪಾವತಿಸಿದೆ.
ಸೆಪ್ಟೆಂಬರ್ 15, 2024 ರ ಅಂತ್ಯಕ್ಕೆ ಕಾರ್ಖಾನೆಯಲ್ಲಿ ಒಟ್ಟು 60,30,000 ಯೂನಿಟ್
ವಿದ್ಯುತ್ ಉತ್ಪಾದಿಸಿ , 28,52,640 ಯೂನಿಟ್ ನ್ನು ಒಂದು ಯುನಿಟ್ ಗೆ ರೂ. 6.07 ಪೈಸೆ ಯಂತೆ ರಪ್ತು ಮಾಡಲಾಗಿದೆ. .
ಮೈ ಶುಗರ್ ಸಕ್ಕರೆ ಕಾರ್ಖಾನೆಗೆ ಆದಾಯ ತೆರಿಗೆ ಇಲಾಖೆಯಿಂದ ಹಿಂಬಾಕಿ ರೂ.6.50 ಕೋಟಿ.
ಬರಬೇಕಿರುತ್ತದೆ. ಕಬ್ಬು ಕಟಾವು ಮೇಸ್ತಿಗಳಿಂದ ರೂ.2,12,99,865/- ಮುಂಗಡ ಹಣ ವಸೂಲಿ ಮಾಡಲಾಗಿದ್ದು ಇನ್ನುಳಿದ ಮುಂಗಡ ಹಣ – ರೂ. 1,15,75,135/- ಮೊತ್ತಕ್ಕೆ ಸಂಪೂರ್ಣ ಭದ್ರತೆ ಪಡೆದುಕೊಳ್ಳಲಾಗಿರುತ್ತದೆ.
223 ಕಬ್ಬು ಕಟಾವು ಮಾಡುವ ಗ್ಯಾಂಗ್‌ಗಳು ಮುಂಗಡ ಹಣವಿಲ್ಲದೇ ಪ್ರತಿ ದಿನ 3000 ಮೆ.ಟನ್ ಕಬ್ಬು ಕಟಾವು ಮಾಡುತ್ತಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…
ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…
ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…
ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…
ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…