ಮಂಡ್ಯ

ಮೈಶುಗರ್: 2.5 ಲಕ್ಷ ಟನ್‌ನಷ್ಟು ಕಬ್ಬು ಅರೆಯಲು ಯಾವುದೇ ತೊಂದರೆ ಇಲ್ಲ: ಡಾ: ಹೆಚ್.ಎಲ್ ನಾಗರಾಜು

ಮಂಡ್ಯ: ಮೈ ಶುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಕೆಲಸ ನಡೆಯುತ್ತಿದ್ದು, ಪ್ರತಿದಿನ ಸುಮಾರು 3000 ಟನ್ ನಷ್ಟು ಕಬ್ಬು ಪೂರೈಕೆಯಾಗುತ್ತಿದೆ. ನಿಗಧಿತ ಗುರಿಯಂತೆ 2.5 ಲಕ್ಷ ಟನ್‌ನಷ್ಟು ಕಬ್ಬು ಅರೆಯಲಾಗುವುದು, ಕಾರ್ಖಾನೆಯಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಮೈ ಶುಗರ್ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಹೆಚ್ ಎಲ್ ನಾಗರಾಜು‌ ತಿಳಿಸಿದ್ದಾರೆ.

ಅನಧಿಕೃತವಾಗಿ ಪರಭಾರೆ
ಮೈಷುಗರ್ ಕಂಪನಿಯ ವ್ಯಾಪ್ತಿಯ ಪ್ರದೇಶದಲ್ಲಿ ಅಕ್ಕ-ಪಕ್ಕದ ಕಾರ್ಖಾನೆಯಾದ ಕೆ.ಎಂ.ದೊಡ್ಡಿಯ ಭಾರತೀನಗರದಲ್ಲಿರುವ ಶ್ರೀ.ಚಾಮುಂಡೇಶ್ವರಿ ಷುಗರ್ಸ್ ಲಿ. ಇವರು ತಮ್ಮ ವ್ಯಾಪ್ತಿಯ ಪ್ರದೇಶವಾದ ಕುರುಬನಪುರ ಗ್ರಾಮದ ರೈತ ಶ್ರೀ.ಸಿದ್ದಗೌಡರ ಕಬ್ಬುನ್ನು 15 ತಿಂಗಳು ತುಂಬಿದರೂ ಕಬ್ಬುನ್ನು ಕಟಾವು ಮಾಡದೇ ಮೈಷುಗರ್ ವ್ಯಾಪ್ತಿಯ ಕಬ್ಬನ್ನು ಕಟಾವು ಮಾಡಲು ಬಂದಿರುತ್ತಾರೆ. ಎನ್.ಎಸ್.ಎಲ್. ಷುಗರ್ಸ್ ಲಿ. ಕೊಪ್ಪ ಇವರು ಹಲ್ಲೆಗೆರೆ ಗ್ರಾಮದಲ್ಲಿ ಕ್ಷೇತ್ರ ಸಹಾಯಕರ ಕಚೇರಿಗೆ ಬೀಗ ಹಾಕಿರುತ್ತಾರೆ. ಈ ಎರಡು ಕಾರ್ಖಾನೆಗಳು ಮೈಷುಗರ್ ವ್ಯಾಪ್ತಿ ಪ್ರದೇಶ ಕಬ್ಬನ್ನು ಅನಧಿಕೃತವಾಗಿ ಪರಭಾರೆ ಮಾಡುತ್ತಿದ್ದಾರೆ.

ನಿಗಧಿತ ಸುಮಯದಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ, ಸಾಗಾಣಿಕೆದಾರರಿಗೆ ಮತ್ತು ಕಬ್ಬು ಕಟಾವು ಮೇಸ್ತ್ರಿಗಳಿಗೆ ಮೈ ಶುಗರ್ ಸಕ್ಕರೆ ಕಾರ್ಖಾನೆ ಹಣ ಪಾವತಿ ಮಾಡುತ್ತಿದೆ.

ಮೈಸೂರು ಸಕ್ಕರೆ ಕಂಪನಿ ನಿಯಮಿತ ಕಾರ್ಖಾನೆಯು ಸೆಪ್ಟೆಂಬರ್ 15 ವರೆಗೆ 74605 ಮೆ.ಟನ್ ಕಬ್ಬು ನುರಿಸಿಲಾಗಿರುತ್ತದೆ.
38318 ಕ್ವಿಂಟಾಲ್ ಸಕ್ಕರೆ ಉತ್ಪಾದನೆ ಹಾಗೂ 4140 ಮೆ. ಟನ್ ಕಾಕಂಬಿ ಉತ್ಪಾದನೆಯಾಗಿರುತ್ತದೆ.

223 ಕಬ್ಬು ಕಟಾವು ಗ್ಯಾಂಗ್ ಮೇಸ್ತಿಗಳ ಸಂಖ್ಯೆ ಇದ್ದು, ಕಬ್ಬು ಕಟಾವು ಮೇಸ್ತ್ರಿ ಗಳಿಗೆ ರೂ 2,61,12,200/- ಪಾವತಿಯಾಗಿರುತ್ತದೆ,

ರೂ 91,62,839/- ಕಬ್ಬು ಸಾಗಾಣಿಕೆ ವೆಚ್ಚವಾಗಿದೆ. ಕಬ್ಬು ಸರಬರಾಜು ಮಾಡಿರುವ 531 ರೈತರಿಗೆ ಒಟ್ಟು (35775.511 ಮೆ. ಟನ್ ಕಬ್ಬು) ರೂ.9,14,45,197/- ಹಣ ಪಾವತಿಸಿದೆ.

ಸೆಪ್ಟೆಂಬರ್ 15, 2024 ರ ಅಂತ್ಯಕ್ಕೆ ಕಾರ್ಖಾನೆಯಲ್ಲಿ ಒಟ್ಟು 60,30,000 ಯೂನಿಟ್
ವಿದ್ಯುತ್ ಉತ್ಪಾದಿಸಿ , 28,52,640 ಯೂನಿಟ್ ನ್ನು ಒಂದು ಯುನಿಟ್ ಗೆ ರೂ. 6.07 ಪೈಸೆ ಯಂತೆ ರಪ್ತು ಮಾಡಲಾಗಿದೆ. .

ಮೈ ಶುಗರ್ ಸಕ್ಕರೆ ಕಾರ್ಖಾನೆಗೆ ಆದಾಯ ತೆರಿಗೆ ಇಲಾಖೆಯಿಂದ ಹಿಂಬಾಕಿ ರೂ.6.50 ಕೋಟಿ.
ಬರಬೇಕಿರುತ್ತದೆ. ಕಬ್ಬು ಕಟಾವು ಮೇಸ್ತಿಗಳಿಂದ ರೂ.2,12,99,865/- ಮುಂಗಡ ಹಣ ವಸೂಲಿ ಮಾಡಲಾಗಿದ್ದು ಇನ್ನುಳಿದ ಮುಂಗಡ ಹಣ – ರೂ. 1,15,75,135/- ಮೊತ್ತಕ್ಕೆ ಸಂಪೂರ್ಣ ಭದ್ರತೆ ಪಡೆದುಕೊಳ್ಳಲಾಗಿರುತ್ತದೆ.

223 ಕಬ್ಬು ಕಟಾವು ಮಾಡುವ ಗ್ಯಾಂಗ್‌ಗಳು ಮುಂಗಡ ಹಣವಿಲ್ಲದೇ ಪ್ರತಿ ದಿನ 3000 ಮೆ.ಟನ್ ಕಬ್ಬು ಕಟಾವು ಮಾಡುತ್ತಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಶೋಭಾ ಕರಂದ್ಲಾಜೆ ಹಾಗೂ ಆರ್.ಅಶೋಕ್‌ ವಿರುದ್ಧ ಎಫ್‌ಐಆರ್‌

ಮಂಡ್ಯ: ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.…

2 mins ago

ಒಂದು ದೇಶ, ಒಂದು ಚುನಾವಣೆ ಯೋಜನೆಗೆ ಅಸಾದುದ್ದೀನ್ ಓವೈಸಿ ಕಿಡಿ

ನವದೆಹಲಿ: ಒಂದು ದೇಶ, ಒಂದು ಚುನಾವಣೆ ಯೋಜನೆಗೆ ಎಐಎಂಐಎಂ ನಾಯಕ ಅಸಾದುದ್ದೀನ್‌ ಓವೈಸಿ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ…

10 mins ago

ಇಂದು ಮುನಿರತ್ನ ಜಾಮೀನು ಅರ್ಜಿ ಆದೇಶ

ಬೆಂಗಳೂರು: ಪರಿಶಿಷ್ಟ ಜಾತಿ ನಿಂದನೆ ಹಾಗೂ ಮಹಿಳೆಯರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದಡಿ ನ್ಯಾಯಾಂಗ ಬಂಧನಲ್ಲಿರುವ ಬಿಜೆಪಿ ಶಾಸಕ ಮುನಿರತ್ನ…

14 mins ago

ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಗೆ ಸ್ವಾಗತ, ಮೋದಿಯವರ ಭಯದಿಂದ ಈ ಕ್ರಮ ವಿರೋಧಿಸುತ್ತಿರುವ ಕಾಂಗ್ರೆಸ್‌: ಆರ್‌.ಅಶೋಕ

ರಾಹುಲ್‌ ಗಾಂಧಿಯವರಿಗೆ ಪ್ರಬುದ್ಧತೆ ಇಲ್ಲ, ಮಕ್ಕಳಂತೆ ಆಟವಾಡುತ್ತಾರೆ ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ…

7 hours ago

ರೀಲ್ಸ್‌ ಪ್ರಿಯರಿಗೆ ಭರ್ಜರಿ ಆಫರ್:‌ ರೀಲ್ಸ್ ಟ್ಯಾಗ್ ಮಾಡಿ ಬಹುಮಾನ ಗೆಲ್ಲಿ

ಮೈಸೂರು: ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟೆಂಬರ್‌ ಸೆ. 27 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು…

7 hours ago

ʻಕಾಟೇರʼನಿಗೆ ಕೋಳ ಬಿದ್ದು 100 ದಿನ: ಇಲ್ಲಿಯವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಕಂಪ್ಲಿಟ್‌ ಡೀಟೆಲ್ಸ್…‌

ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲು ಸೇರಿ ಇಂದಿಗೆ ಬರೊಬ್ಬರಿ 100 ದಿನ…

8 hours ago