ಮಂಡ್ಯ

ಮೈಷುಗರ್‌ ಪ್ರೌಢಾಶಾಲೆ ಗುತ್ತಿಗೆ ವಿವಾದ : ಶಾಸಕ ರವಿಕುಮಾರ್‌ ಹೇಳಿದ್ದೇನು?

ಮಂಡ್ಯ : ಮೈಷುಗರ್ ಪ್ರೌಢಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಗುತ್ತಿಗೆ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕಾರ್ಖಾನೆ ಅಧ್ಯಕ್ಷರಿಗೆ ತಿಳಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮೈಷುಗರ್ ಪ್ರೌಢಶಾಲೆಗೆ ಸಂಬಂಽಸಿದಂತೆ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಖಾಸಗಿಯವರಿಗೆ ಗುತ್ತಿಗೆ ನೀಡಲು ಅಧ್ಯಕ್ಷರು ನಿರ್ಧರಿಸಿ ಪ್ರಕ್ರಿಯೆ ಅರಂಭಿಸಿದ್ದರು. ಆನಂತರದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಲ್ಲ ಮುಖಂಡರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಲಾಗಿದೆ. ಬಹುತೇಕರು ಶಾಲೆಯನ್ನು ಗುತ್ತಿಗೆ ನೀಡುವುದಕ್ಕೆ ವಿರುದ್ಧ ಇರುವುದು ಕಂಡುಬಂದಿರುವ ಕಾರಣ ಗುತ್ತಿಗೆ ಪ್ರಕ್ರಿಯೆಯನ್ನು ಕೈಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಕಾರ್ಖಾನೆ ಆಸ್ತಿಯನ್ನು ಸುಮ್ಮನೆ ಖಾಲಿ ಬಿಡುವುದರಿಂದ ಪ್ರಯೋಜನವಿಲ್ಲ. ಪಾರಂಪರಿಕ ಎಂಬ ಹೆಸರಿನಲ್ಲಿ ಪಾಳು ಬಿಡುವುದೂ ಸರಿಯಲ್ಲ. ಆದಾಯ ಸೃಷ್ಟಿಸಿಕೊಳ್ಳಬೇಕಾದರೆ ಖಾಸಗಿಯವರ ಜೊತೆ ಕೈಜೋಡಿಸುವುದು ಇಂದಿನ ವಾಸ್ತವ ಸಂಗತಿ. ಬೆಂಗಳೂರಿನಲ್ಲಿರುವ ಕಾರ್ಖಾನೆ ಜಾಗದಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಆದಾಯ ಬರುವಂತೆ ಮಾಡಬಹುದು. ಮಂಡ್ಯದಲ್ಲಿ ಎಂ.ಸಿ.ರಸ್ತೆ ಆಸುಪಾಸಿನಲ್ಲಿರುವ ಕಾರ್ಖಾನೆ ಜಾಗದಲ್ಲಿ ಮಾಲ್ ನಿರ್ಮಿಸಿ ಆದಾಯದ ಮೂಲ ಸೃಷ್ಟಿಸಿಕೊಳ್ಳುವುದಕ್ಕೆ ಅವಕಾಶಗಳಿವೆ. ಈ ಬೆಳವಣಿಗೆ ಕಾಣಬೇಕಾದರೆ ಖಾಸಗಿಯವರೊಂದಿಗೆ ಶೇ.೫೦:೫೦ ಅನುಪಾತದಲ್ಲಿ ಕೈಜೋಡಿಸುವುದು ಅನಿವಾರ್ಯ. ಪಾಳುಬಿದ್ದಿರುವ ಮೈಷುಗರ್ ಈಜು ಕೇಂದ್ರವನ್ನು ಖಾಸಗಿಯವರ ನಿರ್ವಹಣೆಗೆ ನೀಡುವಾಗಲೂ ವಿರೋಧ ವ್ಯಕ್ತವಾಗಿದ್ದರಿಂದ ನಾನೂ ಸುಮ್ಮನಾದೆ ಎಂದರು.

ಅಭಿವೃದ್ಧಿಗಾಗಿ ಯಾರ ಬಳಿ ಹೋಗಲೂ ಸಿದ್ಧ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶಾಲೆಗೆ ೨೫ ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದ್ದಾರೆ. ಸಿಎಸ್‌ಆರ್ ಫಂಡ್‌ನ ವ್ಯಾಪ್ತಿ ಅವರಿಗೆ ದೊಡ್ಡದಾಗಿರುವುದರಿಂದ ಹೆಚ್ಚು ಹಣವನ್ನು ದೊರಕಿಸಿಕೊಡುವ ಸಾಮರ್ಥ್ಯ ಅವರಿಗಿದೆ. ಅಭಿವೃದ್ಧಿ ವಿಚಾರದಲ್ಲಿ ನಾನು ಯಾರ ಬಳಿ ಹೋಗುವುದಕ್ಕೂ ಸಿದ್ಧನಿದ್ದೇನೆ. ಅವರು ಹಣ ನೀಡಿದಲ್ಲಿ ಶಾಲೆಯನ್ನು ಸರ್ವಾಂಗೀಣ ಅಭಿವೃದ್ಧಿಪಡಿಸಬಹುದು ಎಂದು ಹೇಳಿದರು

ಸಭೆಯಲ್ಲಿ ಮೈಷುಗರ್ ಮಾಜಿ ಅಧ್ಯಕ್ಷರಾದ ಸಿದ್ದರಾಮೇಗೌಡ, ಬಿ.ಸಿ.ಶಿವಾನಂದ, ರೈತ ಮುಖಂಡರಾದ ಕೆ.ಬೋರಯ್ಯ, ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೀಲಾರ ಕೃಷ್ಣ, ಕಬ್ಬು ಬೆಳೆಗಾರರ ಒಕ್ಕೂಟದ ಸಾತನೂರು ವೇಣುಗೋಪಾಲ್, ನಗರಸಭೆ ಸದಸ್ಯರಾದ ಎಚ್.ಎಸ್.ಮಂಜು, ಕುಮಾರ, ಪೂರ್ಣಿಮಾ, ಮುಖಂಡರಾದ ಶಿವನಂಜು, ಜಿ.ಎ.ರಮೇಶ್, ಹನಕೆರೆ ಶಶಿಕುಮಾರ್, ಗಿರೀಶ ಇತರರು ಭಾಗವಹಿಸಿದ್ದರು.

ಆಂದೋಲನ ಡೆಸ್ಕ್

Recent Posts

ಯೋಗೇಶ್ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು : ಯೋಗೇಶ್ ಗೌಡ ಕೊಲೆ ಪ್ರಕರಣದ ಅಪರಾಧಿಗಳಿಗೆ ಕೊನೆಗೂ ಶಿಕ್ಷೆ ಪ್ರಕಟವಾಗಿದೆ. 17ನೇ ಆರೋಪಿ ಕಾಂಗ್ರೆಸ್ ಶಾಸಕ ವಿನಯ್…

15 mins ago

ಮೈಸೂರು | ಮನೆಯ ಮಂಚದ ಕೆಳಗೆ ಚಿರತೆ ಪ್ರಕ್ಷತ್ಯ, ಆತಂಕಕ್ಕೀಡಾದ ಮನೆಮಂದಿ

ಮೈಸೂರು : ನಗರದ ಸಿದ್ದಾರ್ಥ ನಗರದಲ್ಲಿ ಚಿರತೆಯೊಂದು ಮನೆಯೊಳಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸುರೇಶ್ ಎಂಬುವವರ ಮನೆಯಲ್ಲಿ…

38 mins ago

ಚಾರಣಿಗರ ಮೊಬೈಲ್ ಗೆ ಟ್ರ್ಯಾಕಿಂಗ್ ಆಪ್ ಅಳವಡಿಕೆ ಕಡ್ಡಾಯ: ಈಶ್ವರ ಖಂಡ್ರೆ

ಬೆಂಗಳೂರು : ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅನುಮೋದಿತ ಚಾರಣ ಪಥಗಳಲ್ಲಿ ಇನ್ನು ಮುಂದೆ ಪ್ರಕೃತಿ ಮಾರ್ಗದರ್ಶಕ…

1 hour ago

ಅಮೆರಿಕ-ಇರಾನ್ ಎರಡನೇ ಸುತ್ತಿನ ಮಾತುಕತೆಗೆ ಪಾಕಿಸ್ತಾನ ಸಿದ್ಧತೆ

ಇಸ್ಲಾಮಾಬಾದ್ : ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆ ಪಾಕಿಸ್ತಾನದಲ್ಲಿ ನಡೆಯಲಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು…

2 hours ago

ಕಾರು-ಖಾಸಗಿ ಬಸ್‌ ಡಿಕ್ಕಿ : 6 ಮಂದಿ ಸಜೀವ ದಹನ

ಯಾದಗಿರಿ : ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಹೊತ್ತಿಯುರಿದಿದ್ದು, 6 ಮಂದಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ…

3 hours ago

ಕುಡಿಯಲು ಶುದ್ಧ ನೀರಿಲ್ಲದೆ ಆಲಗೂಡು ಗ್ರಾಮಸ್ಥರ ಪರದಾಟ

ಸಿದ್ದೇಗೌಡ ಕೊಡಿಯಾಲ ಶ್ರೀರಂಗಪಟ್ಟಣ : ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಶ್ರೀರಂಗಪಟ್ಟಣ ವಿಧಾನಸಭಾ…

4 hours ago