ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಕಬ್ಬು ಬೆಳೆಗಾರರ ಆರ್ಥಿಕ ಶಕ್ತಿಯಾದ ಮೈಶುಗರ್ ಕಾರ್ಖಾನೆಗೆ ಆರಂಭದಲ್ಲೇ ಸಂಕಷ್ಟ ಎದುರಾಗಿದೆ.
ಕಬ್ಬು ಕಟಾವು ಮಾಡಲು ಕಾರ್ಮಿಕರ ಕೊರತೆ ಇರುವ ಕಾರಣ ಕಾರ್ಖಾನೆಗೆ ಸಮರ್ಕಪವಾಗಿ ಕಬ್ಬು ಪೂರೈಕೆಯಾಗುತ್ತಿಲ್ಲ.
ಇದರ ಬೆನ್ನಲ್ಲೇ ಅವಧಿ ಮೀರಿದ ಕಬ್ಬು ಕಟಾವಾಗದೇ ಜಮೀನಿನಲ್ಲೇ ಉಳಿದಿದ್ದು, ಅನ್ನದಾತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬೆಳವಣಿಗೆಗಳ ನಡುವೆ ಮೈಶುಗರ್ ಆಡಳಿತ ಮಂಡಳಿ 68 ಮಂದಿ ಕಬ್ಬು ಕಟಾವು ಮೇಸ್ತ್ರಿಗಳಿಗೆ ನೋಟಿಸ್ ನೀಡಿದೆ.
ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಮಾಡಲು ಕಾರ್ಮಿಕರನ್ನು ಕರೆತರಲು ನೂರಾರು ಮಂದಿ ಮೇಸ್ತ್ರಿಗಳಿಗೆ ಮುಂಗಡ ಹಣ ನೀಡಲಾಗಿದೆ. ಆದರೆ ಮುಂಗಡ ಹಣ ಪಡೆದಿರುವ ಮೇಸ್ತ್ರಿಗಳು ಕಾರ್ಮಿಕರನ್ನೇ ಕರೆತರದೇ ನಿರ್ಲಕ್ಷ್ಯ ತೋರಿದ್ದಾರೆ.
ಈವರೆಗೂ ಕಾರ್ಮಿಕರನ್ನು ಕರೆತರದ ಮೇಸ್ತ್ರಿಗಳಿಗೆ ಮೈಶುಗರ್ ಆಡಳಿತ ಮಂಡಳಿ ಕೇಸು ದಾಖಲಿಸುವ ಎಚ್ಚರಿಕೆಯೊಂದಿಗೆ ನೋಟಿಸ್ ಜಾರಿಗೊಳಿಸಿದೆ.
ಇದರ ನಡುವೆ ಹಲವೆಡೆ ಕಬ್ಬಿಗೆ 14-15 ತಿಂಗಳಾಗಿದ್ದು, ಕೊಯ್ಲು ಆಗದಿರುವುದರಿಂದ ತೂಕ ಹಾಗೂ ಇಳುವರಿ ಕಡಿಮೆಯಾಗುವ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೇಸ್ತ್ರಿಗಳು ಆದಷ್ಟು ಬೇಗ ಕಾರ್ಮಿಕರನ್ನು ಕರೆತಂದು ಕಬ್ಬು ಕಟಾವು ಮಾಡಿಸಲಿ ಎಂದು ರೈತರು ಆಗ್ರಹಿಸಿದ್ದಾರೆ.
ಮೈಸೂರು : ಸ್ಪಾಮ್ ಕರೆಗಳ ಮೂಲಕ ಡಿಜಿಟಲ್ ಅರೆಸ್ಟ್ ಹಾಗೂ ಡಿಜಿಟಲ್ ವಂಚನೆ ಮಾಡುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಫೋನಿನ ಕಾಲಿಂಗ್…
ಹನೂರು : ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ವಲಯ ವ್ಯಾಪ್ತಿಯ ಪಚ್ಚೆ ದೊಡ್ಡಿ ಗ್ರಾಮದ ಸಮೀಪ ಹುಲಿ ಕೊಂದು ಮೂರು…
ಮಳವಳ್ಳಿ : ಪ್ಲಾಸ್ಟಿಕ್ ಗೋದಾಮಿಗೆ ಆಕಸ್ಮಿಕ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ಹಳೆ ಪ್ಲಾಸ್ಟಿಕ್ ಭಸ್ಮವಾಗಿರುವ ಘಟನೆ ಶುಕ್ರವಾರ ತಡರಾತ್ರಿ…
ಬೆಂಗಳೂರು : ಅಸಮಾನತೆಯಿರುವ ಸಮಾಜದಲ್ಲಿ ಬಡವ, ಬಲ್ಲಿದ ಎನ್ನದೇ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಸಮಾನತೆ, ನ್ಯಾಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯ…
ಟೆಹ್ರಾನ್ : ಇರಾನ್ ಸರ್ಕಾರದ ವಿರುದ್ದ ಜನಾಕ್ರೋಶ ಭುಗಿಲೆದಿದ್ದು, ಸುಮಾರು 13 ದಿನಗಳಿಂದ ಜನಖರು ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದಾರೆ.…
ಹುಣಸೂರು : ತಾಲ್ಲೂಕಿನ ಹೊಸಕೋಟೆ ಗ್ರಾಮದ ಗೋಪಾಲಯ್ಯ ಅವರ ಹಸು ಜಮೀನಿನಲ್ಲಿ ಮೇಯುವ ಸಮಯದಲ್ಲಿ ಹಸುವಿನ ಮೇಲೆ ಹುಲಿ ದಾಳಿ…