ಮಂಡ್ಯ

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಡ್ಯದಲ್ಲಿ ಇಂದು (ಅಕ್ಟೋಬರ್‌ 18) ಮುಡಾ ಕಚೇರಿಯ ದಾಳಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರು ನ್ಯಾಯಯುತ ಹಾಗೂ ಕಾನೂನು ಬದ್ಧವಾಗಿ ನಿವೇಶನಗಳನ್ನು ಪಡೆದಿದ್ದರೆ ಮುಡಾ 50:50 ಅನುಪಾತದ ನಿವೇಶನಗಳನ್ನು ವಾಪಾಸ್‌ ನೀಡುವ ಸನ್ನಿವೇಶವೇ ಬರುತ್ತಿರಲಿಲ್ಲ. ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ. ಹಾಗಾಗಿ ನಿವೇಶನಗಳನ್ನು ಕೊಟ್ಟಿದ್ದಾರೆ. ಆ ನಿವೇಶನಗಳನ್ನು ತಿರುಗಿಸುವಾಗಲೇ ರುಜುವಾಗಿದೆ ಅವರಲ್ಲಿ ದೋಷವಿದೆ. ತಪ್ಪೇ ಮಾಡಿಲ್ಲವೆಂದರೆ ಯಾಕೆ ಎದುರಾಗಬೇಕು? ಎಂದು ಪ್ರಶ್ನಿಸಿದರು.

ನ್ಯಾಯಾಲಯಗಳಿಂದ ನ್ಯಾಯಯುತವಾಗಿ ತನಿಖೆಯಾಗಬೇಕೆಂದು ಆದೇಶಿಸಿದ್ದಾರೆ. ಆದರೆ, ಲೋಕಾಯುಕ್ತದಿಂದ ತನಿಖೆ ನಡೆದರೆ, ಸರ್ಕಾರದ ವಿರುದ್ಧವೇ ಅವರು ತನಿಖೆ ನಡೆಸಿ, ಸತ್ಯಾಂಶವನ್ನು ಹೇಳುತ್ತಾರೆ ಎಂಬುದು ಸಾಧ್ಯವೇ. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯಯುತ ತನಿಖೆಯಾಗಬೇಕೆಂದರೆ ಇ.ಡಿ.ತನಿಖೆ ಅಗತ್ಯ ಎಂದು ಹೇಳಿದರು.

ಅರ್ಚನ ಎಸ್‌ ಎಸ್

Recent Posts

ಸೈಬರ್ ವಂಚನೆಯ ಹೊಸ ಮಾದರಿ ಡಿಜಿಟಲ್ ಅರೆಸ್ಟ್‌

ನಾ.ದಿವಾಕರ ತಂತ್ರಜ್ಞಾನದ ಆವಿಷ್ಕಾರಗಳಿಗೆ ಸಮಾನಾಂತರವಾಗಿ ಬೆಳೆಯುತ್ತಿರುವ ಡಿಜಿಟಲ್ ವಂಚಕ ಜಾಲಗಳು ಕೋವಿಡ್ ೧೯ ವಿಶ್ವದಾದ್ಯಂತ ಜನರ ಬದುಕನ್ನು ಮೂರಾಬಟ್ಟೆ ಮಾಡಿದ…

1 hour ago

ಸಂವಿಧಾನದ ಆಶಯಗಳ ಮೇಲೆ ನಿರಂತರ ಪ್ರಹಾರ

ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು ಸಂವಿಧಾನ ಕುರಿತ ಚರ್ಚೆಯನ್ನು ಪ್ರಧಾನಿಯೇ ರಾಜಕೀಯಗೊಳಿಸುವ ಪ್ರಯತ್ನ ಮಾಡಿದ್ದು ಸರಿಯಲ್ಲ ದೇಶದ ಸಂವಿಧಾನ ೭೫…

1 hour ago

ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಕೊಳ ನಿರುಪಯುಕ್ತ; ಭಕ್ತರಲ್ಲಿ ನಿರಾಸೆ

ಎಂ.ಬಿ.ರಂಗಸ್ವಾಮಿ ಮೂಗೂರು: ೩ ವರ್ಷಗಳಿಂದ ಸ್ಥಗಿತಗೊಂಡಿರುವ ತೆಪ್ಪೋತ್ಸವ  ಮೂಗೂರು: ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ಕೋಟ್ಯಂತರ ರೂ.…

1 hour ago

ಎಸ್‌ಬಿಐನಲ್ಲಿವೆ ಕ್ಲರ್ಕ್‌ ಹುದ್ದೆಗಳು

ನೇಮಕಾತಿ ಬ್ಯಾಂಕ್: ಭಾರತೀಯ ಸ್ಟೇಟ್ ಬ್ಯಾಂಕ್ ಹುದ್ದೆ ಹೆಸರು: ಕ್ಲರಿಕಲ್ ಕೇಡರ್ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್)…

1 hour ago

ನೆಲ ಹೊರೆಸುವ ಮಾಯಾ ಯಂತ್ರ

ಮನೆ ಗುಡಿಸಿ ಒರೆಸಲು ರೋಬೊ ವಾಕ್ಯೂಮ್ ಕ್ಲೀನರ್‌ಗಳಿಂದಲೇ ಮನೆಮಾತಾಗಿರುವ ಯುರೇಕಾ ಫೋರ್ಬ್ಸ್ ಕಂಪೆನಿಯು ಇತ್ತೀಚೆಗೆ ‘ಸ್ಮಾರ್ಟ್ ಕ್ಲೀನ್ ವಿತ್ ಆಟೋ…

2 hours ago

ಸಕಾರಾತ್ಮಕತೆ ಎಂಬ ಸಂಕಟ ಪರಿಹಾರ

ಡಾ.ನೀ.ಗೂ.ರಮೇಶ್ ಎಲ್ಲಿ ಹುಟ್ಟಬೇಕೆಂಬುದು ನಮ್ಮ ಕೈಯಲ್ಲಿರುವುದಿಲ್ಲ. ಆದರೆ, ಎಲ್ಲಿಗೆ ಮುಟ್ಟಬೇಕೆಂಬುದನ್ನು ನಾವೇ ನಿರ್ಧಾರ ಮಾಡಿಕೊಳ್ಳಬಹುದು. ಹಾಗಾಗಿ, ನಮ್ಮ ಈಗಿನ ಕೆಟ್ಟ…

2 hours ago