ಮಂಡ್ಯ: ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು, ಮಗಳು ಸಾವನ್ನಪ್ಪಿದ್ದ 20 ದಿನಗಳ ಬಳಿಕ ತಾಯಿಯೂ ನೇಣಿಗೆ ಶರಣಾಗಿರುವ ಧಾರುಣ ಘಟನೆಯೊಂದು ಮಂಡ್ಯ ಜಿಲ್ಲೆಯ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಗಳು ವಿಜಯಲಕ್ಷ್ಮೀ ಹಾಗೂ ತಾಯಿ ಲಕ್ಷ್ಮೀ ಎಂದು ಗುರುತಿಸಲಾಗಿದೆ.
ಕಳೆದ ಕೆಲ ವರ್ಷಗಳಿಂದ ಮಾರಸಿಂಗನಹಳ್ಳಿ ಹರಿಕೃಷ್ಣ ಹಾಗೂ ವಿಜಯಲಕ್ಷ್ಮೀ ಪರಸ್ಪರ ಪ್ರೀತಿಸುತ್ತಿದ್ದರು. ಯಾಕೋ ಏನೋ ಇದ್ದಕ್ಕಿದ್ದಂತೆ ಹರಿಕೃಷ್ಣ ಬೇರೆ ಹುಡುಗಿ ಜೊತೆ ಸುತ್ತಾಟ ನಡೆಸಲು ಶುರುಮಾಡಿದ್ದ. ಇದನ್ನು ಪ್ರಶ್ನಿಸಿದ ವಿಜಯಲಕ್ಷ್ಮೀಗೆ ನಿನ್ನನ್ನು ಯಾವುದೇ ಕಾರಣಕ್ಕೂ ಮದುವೆಯಾಗಲ್ಲ ಎಂದು ಹೇಳಿದ್ದ.
ಈ ಹಿನ್ನೆಲೆಯಲ್ಲಿ ಮನನೊಂದ ವಿಜಯಲಕ್ಷ್ಮೀ ಕಳೆದ 20 ದಿನಗಳ ಹಿಂದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು.
ಮಗಳ ಸಾವಿಗೆ ನ್ಯಾಯ ಸಿಗಲೆಂದು ಒತ್ತಾಯಿಸಿ ತಂದೆ ನಂಜುಂಡೇಗೌಡ ಠಾಣೆಗೆ ದೂರು ಕೊಡಲು ಹೋಗಿದ್ದರು. ಈ ವೇಳೆ ನ್ಯಾಯ ಕೇಳಲು ಹೋದವರ ಮೇಲೆಯೇ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಇದರಿಂದ ತೀವ್ರವಾಗಿ ಮನನೊಂದಿದ್ದ ತಾಯಿ ಲಕ್ಷ್ಮೀ ಮಗಳ ಸಾವಿಗೆ ನ್ಯಾಯವೂ ಇಲ್ಲ. ನಮಗೆ ನೆಮ್ಮದಿಯೂ ಇಲ್ಲ ಎಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರ ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನವದೆಹಲಿ: ತಿದ್ದುಪಡಿ ಮಸೂದೆ ಸೋಲುವ ಮೂಲಕ ಲೋಕಸಭೆಯಲ್ಲಿ ಮೂವತ್ತು ವರ್ಷಗಳ ಹಿಂದಿನ ಕರಾಳ ಇತಿಹಾಸ ಮತ್ತೆ ಮರುಕಳಿಸಿದೆ ಎಂದು ಕೇಂದ್ರ…
ಮೈಸೂರು: ನಗರದ ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತೃತೀಯ ಲಿಂಗಿಯೊಬ್ಬರಿಗೆ ಅಪಹರಣ ಯತ್ನ ಹಾಗೂ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಜಮೀನಿನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಳ್ಳಿಕಾರ್ ಹೋರಿಯ ಮೇಲೆ ಕಾಡಾನೆ…
ಆನೇಕಲ್: ಮಧ್ಯರಾತ್ರಿ ದಕ್ಷಿಣ ಆಫ್ರಿಕಾದಿಂದ ಎರಡು ಗಂಡು ಹಾಗೂ ಎರಡು ಹೆಣ್ಣು ಚಿತಾಗಳು ಬೆಂಗಳೂರಿನ ಬನ್ನೇರುಘಟ್ಟ ಮೃಗಾಲಯಕ್ಕೆ ಬಂದಿವೆ. ದಕ್ಷಿಣ…
ಮಂಡ್ಯ: ಬೇಸಿಗೆ ಆರಂಭದಲ್ಲೇ ಕೆಆರ್‌ಎಸ್ ನೀರಿನ ಮಟ್ಟ 99 ಅಡಿಗೆ ಕುಸಿದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದಲ್ಲಿ…
ಸರಗೂರು: ತಾಲ್ಲೂಕಿನ ಹಾದನೂರು ಬಳಿ ಹಾಡಹಗಲೇ ಪ್ರತ್ಯಕ್ಷವಾಗಿದ್ದ 11 ವರ್ಷದ ಹೆಣ್ಣು ಹುಲಿಯನ್ನು ಕಳೆದ ರಾತ್ರಿ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.…