Categories: ಮಂಡ್ಯ

ಕೆಆರ್‌ಎಸ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ; ಮಾಕ್‌ಡ್ರಿಲ್‌ ನಡೆಸಿ ಜನತೆಗೆ ಸುರಕ್ಷತೆಯ ಪಾಠ

ಮಂಡ್ಯ : ಕೆಆರ್‌ಎಸ್‌ ಉದ್ಯಾನವನದಲ್ಲಿ ಯುದ್ಧದ ಸೈರನ್‌ ಮೊಳಗಿತು… ಬಾಂಬುಗಳು ಸಿಡಿದವು…ಕೆಆರ್‌ಎಸ್‌ನಲ್ಲಿ ಬೋಟ್‌ಗಳು ಮುಳುಗಿದವು.. ರಕ್ಷಣೆಗೆ ಸೈನಿಕರು, ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಧಾವಿಸಿದರು. ಗಾಯಗೊಂಡವರನ್ನು ಪತ್ತೆ ಹಚ್ಚಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದರು.

ದೇಶದ ಭದ್ರತೆ ದೃಷ್ಟಿಯಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಕೆಆರ್‌ಎಸ್‌ ಉದ್ಯಾನವನದಲ್ಲಿ ಭಾನುವಾರ ಆಯೋಜಿಸಿದ್ದ ಅಣಕು ರಕ್ಷಣಾ ಕಾರ್ಯಾಚರಣೆಯಲ್ಲಿ ಕಂಡ ದೃಶ್ಯಗಳಿವು…

mandya mock drill

ಯುದ್ಧದ ವೇಳೆ ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆ ಕುರಿತು ಅಣುಕು ಪ್ರದರ್ಶನ ‌ಅನಾವರಣಗೊಳಿಸಿ, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು.

ಕೆ.ಆರ್.ಎಸ್ ಉದ್ಯಾನವನದಲ್ಲಿರುವ ಬೋಟಿಂಗ್ ಪಾಯಿಂಟ್ ನಲ್ಲಿ ಬೋಟ್ ಮಗಚಿಕೊಂಡ ಸಂದರ್ಭದಲ್ಲಿ ಕಂಟ್ರೋಲ್ ರೂಂ.ಗೆ ಘಟನೆ ವಿವರ ಬಂದ ತಕ್ಷಣ ಕಂಟ್ರೋಲ್‌ ರೂಂ ನಿಂದ ವಿವಿಧ ಇಲಾಖೆಗಳಿಗೆ ಮಾಹಿತಿ ನೀಡಿ ಎಚ್ಚರಿಸಲಾಯಿತು.

ಅಗ್ನಿಶಾಮಕ ದಳದವರು ಮೊದಲು‌ ನೀರಿನಲ್ಲಿ‌ ಮುಳುಗುತ್ತಿರುವ ವ್ಯಕ್ತಿಗಳ ರಕ್ಷಣೆಗಾಗಿ ತಮ್ಮ ಇಲಾಖೆ ಬೋಟ್, ರಕ್ಷಣಾ ಸಲಕರಣೆಗಳನ್ನು ಬಳಸಿಕೊಂಡು ಮುಳುಗುತ್ತಿರುವ ವ್ಯಕ್ತಿಗಳನ್ನು ದಡಕ್ಕೆ ಕರೆತರುತ್ತಾರೆ‌. ಪೊಲೀಸ್ ಇಲಾಖೆಯವರು ಸಾರ್ವಜನಿಕರನ್ನು ನಿಯಂತ್ರಿಸಲು ಹಾಗೂ ಅಗ್ನಿಶಾಮಕ ಇಲಾಖೆ ವಾಹನಗಳು ಹಾಗೂ ಅಂಬ್ಯೂಲೆನ್ಸ್ ಗಳ ಚಲನ-ವಲನ ಗಳಿಗೆ ತೊಂದರೆಯಾಗದಂತೆ ಬಂದೋಬಸ್ತ್ ಒದಗಿಸಿದರು. ಆರೋಗ್ಯ ಇಲಾಖೆ ವತಿಯಿಂದ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅವಶ್ಯಕವಿರುವವರನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಪೊಲೀಸ್ ಗೆಸ್ಟ್ ಹೌಸ್ ನಲ್ಲಿ ಬೆಂಕಿ ಅವಘಡವಾದ ತಕ್ಷಣ ಸೈರನ್ ಶಬ್ದ ಚಾಲನೆ ಮಾಡಿ ಎಚ್ಚರಿಕೆ ನೀಡಲಾಯಿತು. ಕಂಟ್ರೋಲ್‌ ರೂಂಗೆ ವಿಷಯ ರವಾನಿಸಿ ಎಲ್ಲಾ ಇಲಾಖೆಗಳನ್ನು ಎಚ್ಚರಿಸಲಾಯಿತು. ಬೆಂಕಿ ಅನಾಹುತದಲ್ಲಿ ಸಿಲುಕಲಾಗಿದ್ದ ವ್ಯಕ್ತಿಗಳನ್ನು ರಕ್ಷಿಸುವ ಅಣುಕು ಪ್ರದರ್ಶನದಲ್ಲಿ ಮೊದಲನೇ ಮಹಡಿಯಿಂದ ಗಯಾಳುಗಳನ್ನು ಕೆಳಗೆ ಇಳಿಸಿ ಚಿಕಿತ್ಸೆ ನೀಡುವುದು ವಿಶೇಷವಾಗಿತ್ತು‌

ಬಾಂಬ್ ಸ್ಪೋಟ್ ವಾದ ತಕ್ಷಣ ಸೈರನ್ ಮೂಲಕ ಎಚ್ಚರಿಕೆ ನೀಡಿ ಕಂಟ್ರೋಲ್‌ ರೂಂ.ಗೆ ವಿಷಯ ರವಾನಿಸಿ ಎಲ್ಲಾ ಇಲಾಖೆಗಳಿಗೆ ಕ್ರಮಕ್ಕೆ‌ ಮಾಹಿತಿ ನೀಡಲಾಯಿತು‌. ಬಾಂಬ್ ನಿಷ್ಕ್ರಿಯ ತಂಡ ಶ್ವಾನ ದಳದೊಂದಿಗೆ ಆಗಮಿಸಿ ಉದ್ಯಾನವನದ ಪರಿಶೀಲನೆ ಪ್ರಾರಂಭಿಸಲಾಯಿತು‌. ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಎನ್.ಸಿ.ಸಿ ವಿದ್ಯಾರ್ಥಿಗಳು, ಅಪಘಾತಕ್ಕೀಡದವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದರೆ. ವೈದ್ಯರ ತಂಡ ಪ್ರಥಮ ಚಿಕಿತ್ಸೆ ನೀಡುವ ಕಾರ್ಯದಲ್ಲಿ ತೊಡಗಲಾಯಿತು‌.

ಅಣಕು ಪ್ರದರ್ಶನದಲ್ಲಿ ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಗಂಗಾಧರ್, ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ, ಉಪವಿಭಾಗಾಧಿಕಾರಿ ಶಿವಮೂರ್ತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಆರೋಗ್ಯ, ಪೊಲೀಸ್, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಎನ್‌.ಎಸ್.ಎಸ್ ವಿದ್ಯಾರ್ಥಿಗಳು, ಗೃಹರಕ್ಷಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು  ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ಮಳವಳ್ಳಿ: ಸಿಡಿ ಹಬ್ಬಕ್ಕೆ ಸಿಂಗಾರಗೊಂಡ ಪಟ್ಣಣ

ಮಾಗನೂರು ಶಿವಕುಮಾರ್ ಇಂದು,ನಾಳೆ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವ  ಮಳವಳ್ಳಿ: ಶಾಂತಿ-ಸೌಹಾರ್ದತೆಯ ಸಂದೇಶ ಸಾರುವ ಪಟ್ಟಣದ ಗ್ರಾಮ ದೇವತೆಗಳಾದ ದಂಡಿನ…

2 mins ago

ಮಾಂದಲ್‌ಪಟ್ಟಿ ಜೀಪ್ ಸಫಾರಿಗೆ ದುಪ್ಪಟ್ಟು ಹಣ ವಸೂಲಿ..!

ಪ್ರವಾಸಿಗರ ಅಸಮಾಧಾನ; ವಿಡಿಯೋ ವೈರಲ್ ಮಡಿಕೇರಿ: ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್‌ಪಟ್ಟಿ ಜೀಪ್ ಸಫಾರಿಗೆ ಪ್ರವಾಸಿಗರಿಂದ ದುಪ್ಪಟ್ಟು…

8 mins ago

ವಿಶ್ವದರ್ಜೆ ಫುಟ್‌ಪಾತ್ ನಿರ್ಮಾಣಕ್ಕೆ ಪ್ಲಾನ್!

ಕೆ.ಬಿ.ರಮೇಶನಾಯಕ ಮೊದಲ ಹಂತದಲ್ಲಿ ಮೈಸೂರಿನ ಪ್ರಮುಖ ಮೂರು ರಸ್ತೆಗಳ ಗುರುತು ಮೈಸೂರು: ದೇಶದ ಪ್ರಮುಖ ಸ್ಮಾರ್ಟ್ ಸಿಟಿಗಳಲ್ಲಿ ನಿರ್ಮಾಣಗೊಂಡಿರುವ ವಿಶ್ವದರ್ಜೆಯ…

12 mins ago

ಚಿರತೆ ಸೆರೆ | ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಗುಂಡ್ಲುಪೇಟೆ : ತಾಲ್ಲೂಕಿನ ಬರಗಿ ಗ್ರಾಮದ ಜಮೀನುಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ವಿಚಾರವಾಗಿ ಅರಣ್ಯ ಇಲಾಖೆ ಚಿರತೆ…

9 hours ago

ಮೈಸೂರಲ್ಲಿ ಡ್ರಗ್ಸ್‌ ಉತ್ಪಾದನೆ ಶಂಕೆ : ಓರ್ವನ ಬಂಧನ

ಮೈಸೂರು : ಬುಧವಾರವಷ್ಟೇ ಹೆಬ್ಬಾಳ್‌ನಲ್ಲಿ ಶೆಡ್‌ವೊಂದರ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಪೊಲೀಸರು, ಮಾದಕ ವಸ್ತು ಮಾರಾಟ ಆರೋಪ ಪ್ರಕರಣದಲ್ಲಿ…

10 hours ago

ತೇಗದ ಮರ ಅಕ್ರಮ ಕಟಾವು : ಓರ್ವ ಬಂಧನ

ಹನೂರು : ತಾಲ್ಲೂಕಿನ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಟಾವು…

10 hours ago