ಮಂಡ್ಯ

ಮೈ-ಬೆಂ ಹೆದ್ದಾರಿಯ ಸರ್ವಿಸ್‌ ರಸ್ತೆ ಸಮಸ್ಯೆ ಪರಿಶೀಲಿಸಿದ ಶಾಸಕ : ಅಭಿವೃದ್ಧಿ ಕೆಲಸಕ್ಕೆ ಸೂಚನೆ

ಮದ್ದೂರು : ಬೆಂಗಳೂರು-ಮೈಸೂರು ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಸಮಸ್ಯೆಗಳನ್ನು ಶಾಸಕ ಕೆ.ಎಂ.ಉದಯ್ ಅವರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು.

ತಾಲ್ಲೂಕಿನ ನಿಡಘಟ್ಟ ಗಡಿ ಭಾಗದ ಸರ್ವೀಸ್ ರಸ್ತೆಯಲ್ಲಿರುವ ಚರಂಡಿ ಮಳೆ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಕುಸಿದಿದೆ. ಕಬ್ಬಿಣದ ತಡೆ ಬೇಲಿ ಮುರಿದಿರುವುದನ್ನು ವೀಕ್ಷಿಸಿದರು.
ಹೆದ್ದಾರಿ ಮಧ್ಯದಲ್ಲಿ ಬರುವ ಗ್ರಾಮಗಳ ತಿರುವಿನ ರಸ್ತೆ ಬದಿಯ ಅಡ್ಡ ಮೋರಿಗಳನ್ನು ವೀಕ್ಷಿಸಿ, ಅದನ್ನು ಸರಿಪಡಿಸುವ ಬಗ್ಗೆ ಅಽಕಾರಿಗಳ ಜತೆ ಚರ್ಚಿಸಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾಲ್ಕು ವರ್ಷ ಕಳೆದರೂ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ, ಸರ್ವಿಸ್ ರಸ್ತೆಯ ಸಮಸ್ಯೆಯಂತೂ ಹೇಳ ತೀರದ್ದಾಗಿದೆ. ಹಲವು ಬಾರಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಂಬಂಧಪಟ್ಟ ಇಲಾಖೆಯ ಅಽಕಾರಿಗಳು, ಇಂಜಿನಿಯರ್‌ಗಳ ಜತೆ ಚರ್ಚಿಸಿದ್ದೇನೆ. ಎಲ್ಲೆಲ್ಲಿ ರಸ್ತೆ ಕಾಮಗಾರಿ ಅಪೂರ್ಣವಾಗಿದೆಯೋ ಅಲ್ಲಿ ತಕ್ಷಣ ಅಭಿವೃದ್ಧಿ ಕೆಲಸ ಮಾಡಬೇಕು. ಆದಷ್ಟು ಬೇಗ ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಯನ್ನು ವಹಿಸಿ ಪೂರ್ಣಗೊಳಿಸಲಾಗುತ್ತದೆ ಎಂದರು.

ಇದನ್ನೂ ಓದಿ:-ಕಂದಾಚಾರ, ಮೌಢ್ಯ ಪಾಲಿಸಿದರೆ ವಿದ್ಯಾವಂತರಾಗಿಯೂ ಪ್ರಯೋಜನವಿಲ್ಲ : ಸಿಎಂ

ರಸ್ತೆಗೆ ಹೊಂದಿಕೊಂಡಂತೆ ಅಂಗಡಿ, ಮನೆಗಳನ್ನು ನಿರ್ಮಿಸಿದ್ದಾರೆ. ಕೂಡಲೇ ಅವುಗಳನ್ನು ತೆರವುಗೊಳಿಸಬೇಕಿದೆ. ಇಲ್ಲದಿದ್ದರೆ ಕಾಮಗಾರಿ ಮಾಡಲು ತೊಂದರೆಯಾಗುತ್ತದೆ. ಅಂಗಡಿಗಳು, ಹೋಟೆಲ್‌ಗಳು, ಮನೆಗಳನ್ನು ಮಾಲೀಕರೆ ಸ್ಥಳಾಂತರಿಸಿ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲದಿದ್ದರೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾದಾಗ ಎಲ್ಲವನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೇಲ್ಸೇತುವೆಯಿಂದ ನೀರು ಸೋರಿಕೆಯಾಗುತ್ತಿದ್ದು, ಪೈಪ್‌ಗಳನ್ನು ಸರಿಪಡಿಸಬೇಕು, ವಿದ್ಯುತ್ ದೀಪಗಳನ್ನು ಅಳವಡಿಸಬೇಕು, ಕೆಲವು ವೃತ್ತ, ರಸ್ತೆಗಳಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸಬೇಕೆಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರದ ಯೋಜನಾ ನಿರ್ದೇಶಕ ವಾಬ್ಲು, ಇಂಜಿನಿಯರ್ ಅರುಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜ್, ಮುಖಂಡರಾದ ರವಿ, ಸತೀಶ, ಚಿಕ್ಕಣ್ಣ, ಆರ್.ಸಿ.ಮಹೇಶ, ವಿಜಯಕುಮಾರ್, ಯತೀಶ್, ಲೋಕೇಶ್, ಅಭಿ, ಅಪ್ಪೇಗೌಡ, ಪುಟ್ಟಪ್ಪ, ರಾಜು, ಸತೀಶ್ ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ಸರ್ಕಾರಿ ಕಾರ್ಯಕ್ರಮಗಳಲ್ಲಿ ಜನರ ಸುರಕ್ಷತೆ: ಹೊಸ ಸುತ್ತೋಲೆ

ಬೆಂಗಳೂರು: ಕರ್ನಾಟಕ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿದೆ. ಸರ್ಕಾರಿ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬಗಳು, ಶಾಲಾ-ಕಾಲೇಜುಗಳ ಕಾರ್ಯಕ್ರಮಗಳಲ್ಲಿ ಜನರ ಹಾಗೂ ಮಕ್ಕಳ ಸುರಕ್ಷತೆಗೆ…

43 mins ago

ಲಕ್ಕುಂಡಿ ಬೆನ್ನಲ್ಲೇ ಯಾದಗಿರಿಯಲ್ಲೂ ಉತ್ಖನನ ನಡೆಸಲು ಸಿದ್ಧತೆ

ಯಾದಗಿರಿ: ದೇವರದಾಸಿಮಯ್ಯ ಪುಣ್ಯಕ್ಷೇತ್ರ ಯಾದಗಿರಿ ಜಿಲ್ಲೆಯ ಮುದನೂರು ಗ್ರಾಮದಲ್ಲಿಯೂ ಉತ್ಖನನ ನಡೆಸಲು ಸಿದ್ಧತೆ ನಡೆದಿದೆ. ಮುದನೂರು ಗ್ರಾಮ ರಾಜ-ಮಹಾರಾಜರ ಕಾಲದಲ್ಲಿ…

1 hour ago

ಸಂಸದ ಯದುವೀರ್‌ ಒಡೆಯರ್‌ ಭೇಟಿಯಾದ ಪ್ರತಾಪ್‌ ಸಿಂಹ

ಮೈಸೂರು: ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಸಂಸದ ಯದುವೀರ್‌ ಒಡೆಯರ್‌ ಅವರನ್ನು ಭೇಟಿಯಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು…

1 hour ago

ಜಾತಿ, ಅಸಮಾನತೆ, ಸಂವಿಧಾನದ ಮೌಲ್ಯ ಎತ್ತಿ ಹಿಡಿಯುವ “ಲ್ಯಾಂಡ್ ಲಾರ್ಡ್” ಸಿನಿಮಾ ನೋಡಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜಾತಿ, ಅಸಮಾನತೆ, ಸಂವಿಧಾನದ ಮೌಲ್ಯ ಎತ್ತಿ ಹಿಡಿಯುವ "ಲ್ಯಾಂಡ್ ಲಾರ್ಡ್" ಸಿನಿಮಾ ನೋಡಿ ಎಂದು ಸಿಎಂ ಸಿದ್ದರಾಮಯ್ಯ ಕರೆ…

2 hours ago

ಜಮ್ಮು-ಕಾಶ್ಮೀರದಲ್ಲಿ ಭಾರೀ ಹಿಮಪಾತ: ಜನಜೀವನ ಅಸ್ತವ್ಯಸ್ತ

ಶ್ರೀನಗರ: ಕಾಶ್ಮೀರದ ಸುತ್ತಮುತ್ತ ಭಾರೀ ಹಿಮಮಳೆಯಾಗುತ್ತಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಹಲವು ವರ್ಷಗಳ ಬಳಿಕ ಇಷ್ಟೊಂದು ಹಿಮಪಾತವಾಗುತ್ತಿದ್ದು, ಜನಜೀವನ…

2 hours ago

ಪಾಕಿಸ್ತಾನ ಮದುವೆ ಸಮಾರಂಭದಲ್ಲಿ ಆತ್ಮಾಹುತಿ ದಾಳಿ: ಐವರು ಸಾವು

ಪೇಶಾವರ: ಪಾಕಿಸ್ತಾನದ ವಾಯುವ್ಯ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಶಾಂತಿ ಸಮಿತಿ ಸದಸ್ಯರ ಮನೆಯಲ್ಲಿ ಶುಕ್ರವಾರ ರಾತ್ರಿ ನಡೆದ ವಿವಾಹ ಸಮಾರಂಭದ…

3 hours ago