ಮಂಡ್ಯ

ಮಳೆಯಿಂದ ಒಡೆದು ಹೋಗಿದ್ದ ಸಿಡಿಎಸ್ ನಾಲೆ ಪರಿಶೀಲಿಸಿದ ಸಚಿವ ಚಲುವರಾಯಸ್ವಾಮಿ

ಮಂಡ್ಯ : ಶ್ರೀರಂಗಪಟ್ಟಣ ತಾಲ್ಲೂಕಿನ ದರಸಗುಪ್ಪೆಯಲ್ಲಿ ಸಿ.ಡಿ.ಎಸ್. ನಾಲೆ ಒಡೆದು ರೈತರ ಬೆಳೆ ಹಾನಿಯಾಗಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆ ನಡೆಸಿ ಮಾತನಾಡಿದ ಅವರು, ಭಾರೀ ಮಳೆಯಾಗಿರುವುದರಿಂದ ಸಿ.ಡಿ.ಎಸ್. ನಾಲೆ ಒಡೆದು ಕೃಷಿ ಬೆಳೆ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಮಳೆ ನಿಂತ ನಂತರ ಜಂಟಿ ಸರ್ವೆ ಕಾರ್ಯಾಚರಣೆ ನಡೆಸಿ ಯಾರ ಬೆಳೆ ಎಷ್ಟು ಹಾನಿಯಾಗಿದೆ ಎಂದು ತಿಳಿದುಕೊಂಡು ಅಂದೇ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ವೆ ನಂತರವೇ ಎಷ್ಟು ಎಕರೆ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ತಿಳಿಯುತ್ತದೆ ಎಂದು ತಿಳಿಸಿದರು.

ಸಿ.ಡಿ.ಎಸ್. ನಾಯಲ್ಲಿ ನೀರನ್ನು ನಿಲ್ಲಿಸಲಾಗಿದೆ. ಮಳೆ ನಿಂತ ನಂತರ ಒಡೆದ ನಾಲೆಯನ್ನು ಸರಿಪಡಿಸಲಾಗುವುದು. ಎನ್‌ಡಿಆರ್‌ಎಸ್‌ನಲ್ಲಿ ೧ ಹೆಕ್ಟೇರ್ ಮಳೆ ಆಶ್ರಿತ ಬೆಳೆಗಳಿಗೆ ಎಂಟೂವರೆ ಸಾವಿರ, ನೀರಾವರಿ ಆಶ್ರಿತ ಬೆಳೆಗಳಿಗೆ ೧೭ ಸಾವಿರ, ತೋಟಗಾರಿಕೆ ಬೆಳೆಗೆ ೨೨,೫೦೦ ರೂ. ಪರಿಹಾರ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಂಟಾದ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ರೈತರ ಬೇಡಿಕೆಯಂತೆ ಎಲ್ಲ ಬಗೆಯ ಬೆಳೆಗಳಿಗೂ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಎಂಟೂವರೆ ಸಾವಿರ ನೀಡುವುದಾಗಿ ಘೋಷಣೆ ಮಾಡಿದೆ ಎಂದು ತಿಳಿಸಿದರು.

ಇದನ್ನೂ ಓದಿ:-ಮಳೆಯಿಂದ ಒಡೆದು ಹೋಗಿದ್ದ ಸಿಡಿಎಸ್ ನಾಲೆ ಪರಿಶೀಲಿಸಿದ ಸಚಿವ ಚಲುವರಾಯಸ್ವಾಮಿ

ಜಂಟಿ ಸರ್ವೆ ನಡೆದ ತಕ್ಷಣ ಯಾರೂ ಕಾಯುವಂತಿಲ್ಲ, ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ ಮಾರನೇ ದಿನಕ್ಕೆ ಪರಿಹಾರವನ್ನು ನೀಡಲಾಗುವುದು. ಈ ಪ್ರಕ್ರಿಯೆಯನ್ನು ಮಳೆ ನಿಂತ ಒಂದು ವಾರದೊಳಗೆ ಮಾಡಲಾಗುತ್ತದೆ, ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ್ದರೆ ವಿಮೆ ಹಣದ ಜತೆಗೆ ಸರ್ಕಾರ ಪರಿಹಾರವನ್ನು ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಽಕಾರಿ ಡಾ.ಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಶ್ರೀರಂಗಪಟ್ಟಣ ತಹಸಿಲ್ದಾರ್ ಚೇತನಾ ಯಾದವ್, ಕಾವೇರಿ ನೀರಾವರಿ ನಿಗಮದ ಅಽಕ್ಷಕ ಇಂಜಿನಿಯರ್ ರಘುರಾಮ್, ಕಾರ್ಯಪಾಲಕ ಇಂಜಿನಿಯರ್ ಜಯಂತ್, ಜಂಟಿ ಕೃಷಿ ನಿರ್ದೇಶಕ ಅಶೋಕ್ ಸೇರಿದಂತೆ ಇತರರಿದ್ದರು.

ಆಂದೋಲನ ಡೆಸ್ಕ್

Recent Posts

ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ರಾಮನಗರ: ದೇವರ ದರ್ಶನಕ್ಕೆಂದು ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗಲೇ ವ್ಯಕ್ತಿಯೋರ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕೆಂಪನಹಳ್ಳಿ…

22 mins ago

ನಾಳೆಯಿಂದ ಬೆಳಗಾವಿಯ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ

ಬೆಂಗಳೂರು: ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಆಯೋಜಿಸಲಾಗಿದೆ. ಸುಮಾರು ಆರು…

27 mins ago

ಗೋವಾದಲ್ಲಿ 25 ಮಂದಿ ಸಜೀವ ದಹನ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಉತ್ತರ ಗೋವಾದ ಬಾಗಾ ಬೀಚ್‌ ಬಳಿಯ ಅರ್ಪೊರಾದ ನೈಟ್‌ಕ್ಲಬ್‌ ಬೀರ್ಚ್‌ ಬೈ ರೋಮಿಯೋ ಲೇನ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ…

1 hour ago

ಮೈಸೂರು| ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ ಬಳಿಕ ಅಪಹರಣ

ಮೈಸೂರು: ಕಣ್ಣಿಗೆ ಕಾರದಪುಡಿ ಎರಚಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಅಪಹರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ ಮೂರನೇ ಹಂತದಲ್ಲಿ ಈ…

1 hour ago

ಗೋವಾದಲ್ಲಿ ಘೋರ ದುರಂತ: ಬಾಗಾ ಬೀಚ್‌ ಬಳಿ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ಅವಘಡ: 25 ಮಂದಿ ಸಜೀವ ದಹನ

ಗೋವಾ: ಇಲ್ಲಿನ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25 ಜನ ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್‌…

1 hour ago

ಓದುಗರ ಪತ್ರ: ಅಮೃತ ಬೇಕರಿ ನಿಲ್ದಾಣದಲ್ಲಿ ಬಸ್ ತಂಗುದಾಣ ನಿರ್ಮಿಸಿ

ಮೈಸೂರಿನ ಶ್ರೀರಾಂಪುರದ ಮಾರ್ಗದಲ್ಲಿ ಬರುವ ಅಮೃತ್ ಬೇಕರಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ತಂಗುದಾಣ ಹಾಳಾಗಿದ್ದು, ಬಸ್‌ಗಾಗಿ ಕಾಯುವವರು ರಸ್ತೆಯಲ್ಲಿ ನಿಲ್ಲಬೇಕಾದ…

2 hours ago