ಮಂಡ್ಯ: ಮೈಶುಗರ್ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಮಾಡಲು ಸಕ್ಕರೆ ಆಯುಕ್ತರ ಆದೇಶವೇ ಕಾರಣ ಹೊರತು, ಇದಕ್ಕೆ ಮೈಶುಗರ್ ಆಡಳಿತ ಮಂಡಳಿ ಹೊಣೆಯಲ್ಲ ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸ್ಪಷ್ಠನೆ ನೀಡಿದರು.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಆಗಸ್ಟ್ ತಿಂಗಳಾಂತ್ಯಕ್ಕೆ ಮೈ ಶುಗರ್ ಕಾರ್ಖಾನೆಯಲ್ಲಿ 11,019 ಕ್ವಿಂಟಲ್ ಸಕ್ಕರೆ, 1060 ಮೆಟ್ರಿಕ್ ಟನ್ ಕಾಕಂಬಿ ಹಾಗೂ 22 ಲಕ್ಷದ 27 ಸಾವಿರ ಯೂನಿಟ್ ವಿದ್ಯುತ್ತನ್ನು ಉತ್ಪಾದಿಸಲಾಗಿದ್ದು,ಕಬ್ಬು ಕಟಾವು ವಿಳಂಬವಾಗಲುಸಕ್ಕರೆ ಆಯುಕ್ತರ ಆದೇಶವೇ ಕಾರಣವಾಗಿದೆ ಹೊರತು ಕಂಪನಿಯಲ್ಲ ಎಂದು ಸ್ಪಷ್ಟನೆ ಪಡಿಸಿದರು.
2024 25ನೇ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಆಗಸ್ಟ್ ಎರಡರಂದು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಪ್ರಸ್ತುತ 30,000 ಮೆಟ್ರಿಕ್ ಟನ್ ಕಬ್ಬನ್ನು ನುರಿಸಲಾಗಿದೆ ಎಂದರು.
ಆಗಸ್ಟ್ 22ರ ಅಂತ್ಯಕ್ಕೆ 11,019 ಕ್ವಿಂಟಾಲ್ ಸಕ್ಕರೆ, 1060 ಮೆಟ್ರಿಕ್ ಟನ್ ಕಾಕಂಬಿ, ಸಹ ವಿದ್ಯುತ್ ಘಟಕದಿಂದ 22 ಲಕ್ಷದ 27,000 ಯೂನಿಟ್ ವಿದ್ಯುತ್ತನ್ನು ಉತ್ಪಾದಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉತ್ಪಾದಿಸಲಾದ ವಿದ್ಯುತ್ತಿನ ಪೈಕಿ 12,27,400 ಯೂನಿಟ್ಸ್ ವಿದ್ಯುತ್ತನ್ನು ಕಾರ್ಖಾನೆಗೆ ಬಳಸಿಕೊಳ್ಳಲಾಗಿದೆ. ಒಂಬತ್ತು ಲಕ್ಷದ 99 ಸಾವಿರದ ಆರುನೂರು ಯೂನಿಟ್ ವಿದ್ಯುತ್ತನ್ನು ಚೆಸ್ಕಾಂಗೆ ರಫ್ತು ಮಾಡಲಾಗಿದೆ. ಜೊತೆಗೆ ಐದು ತಿಂಗಳಿನಲ್ಲಿ ಕಂಪೆನಿಯನ್ನು ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇಡಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದರು.
ಕೆಲುವು ಕಿಡಿಗೇಡಿಗಳು ಖಾಸಗಿ ಸಕ್ಕರೆ ಕಾರ್ಖಾನೆಯ ಮಾಲೀಕರ ಜೊತೆ ಶಾಮೀಲಾಗಿ ಮೈಸೂರು ಸಕ್ಕರೆ ಕಾರ್ಖಾನೆಯ ವಿರುದ್ಧ ತಪ್ಪು ಮಾಹಿತಿ ನೀಡಿದ್ದು ಇದನ್ನು ಖಂಡಿಸುವುದಾಗಿ ತಿಳಿಸಿದರು. ಮೈಸೂರು ಸಕ್ಕರೆ ಕಾರ್ಖಾನೆಯು ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆಯಾಗಿದ್ದು 2024 -25ನೇ ಸಾಲಿನಲ್ಲಿ ಯಶಸ್ವಿಯಾಗಿ ಕಬ್ಬು ನುಡಿಸಲಾಗುತ್ತಿದೆ. ಕಬ್ಬು ಕಟಾವು ಮಾಡುವ ಸಂಬಂಧ ಎಲ್ಲಾ ತಂಡಗಳನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡಲಾಗಿದೆ ಎಂದರು.
ಕೆಲವು ತಂಡಗಳು ಮುಂಗಡ ಹಣ ಪಡೆದು ಕಬ್ಬು ಕಟಾವು ಮಾಡಲು ಬಂದಿಲ್ಲ .ಆದರೆ ನೀಡಿರುವ ಮುಂಗಡ ಹಣಕ್ಕೆ ಭದ್ರತೆ ಪಡೆಯಲಾಗಿದೆ. ಅಲ್ಲದೆ ಹಣ ವಸೂಲಿಗೆ ದಾವೆ ಹೂಡಲಾಗಿದೆ. ಆದಕಾರಣ ಕಬ್ಬು ಕಟಾವಿಗೆ ಸಕ್ಕರೆ ಆಯುಕ್ತರ ಆದೇಶವೇ ಕಾರಣವಾಗಿದ್ದು ಕಂಪನಿಯಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ಮೋಹನ್, ಮಂಜುನಾಥ್, ಯೋಗೇಶ್, ನಾಗರಾಜು ,ದ್ಯಾವಣ್ಣ, ಅಪ್ಪಾಜಿಗೌಡ ಉಪಸ್ಥಿತರಿದ್ದರು.
ಮುಸ್ಲಿಮರ ಓಲೈಕೆಗಾಗಿ ಜಮೀನು ಕಬಳಿಕೆ, ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ ಚನ್ನಪಟ್ಟಣ: ಇದು ವ್ಯಕ್ತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ,…
ಮೈಸೂರು: ನಾಲ್ಕು ದಶಕಕ್ಕೂ ಹೆಚ್ಚು ಕಾಲ ಜನರನ್ನು ರಂಜಿಸಿದ್ದ ನಗರದ ಸರಸ್ವತಿ ಚಿತ್ರಮಂದಿರ ನೆನಪಿನಂಗಳಕ್ಕೆ ಸರಿಯುತ್ತಿದೆ. ಪ್ರೇಕ್ಷಕರ ಕೊರತೆಯಿಂದ ಕೋವಿಡ್…
ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಅನೇಕ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.…
ನವದೆಹಲಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು…
ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೇಂದ್ರ…
ಮುಂಬೈ: ಇನ್ನು 10 ದಿನದೊಳಗೆ ಸಿಎಂ ಸ್ಥಾನದಿಂದ ಕೆಳಗಿಳಿಯದಿದ್ದರೆ ಹತ್ಯೆ ಮಾಡುವುದಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಕೊಲೆ…