ಮಂಡ್ಯ

ಮಂಡ್ಯ ಲೋಕಸಭಾ: ಮತ ಎಣಿಕೆಗೆ ಸಕಲ ಸಿದ್ಧತೆ; ಡಾ ಕುಮಾರ

ಮಂಡ್ಯ: ಜೂನ್ 4 ರಂದು ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಮಂಡ್ಯ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ವೀಕ್ಷಕರಾಗಿ ನೀರಜ್ ಕುಮಾರ್ ಅವರನ್ನು ಭಾರತ ಚುನಾವಣಾ ಆಯೋಗವು ನೇಮಕ ಮಾಡಲಾಗಿದ್ದು, ಅವರು ನಾಳೆ ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎಂದರು.

ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಮಂಡ್ಯ ವಿಶ್ವವಿದ್ಯಾನಿಲಯದ ಕಾಮರ್ಸ್ ಬ್ಲಾಕ್ ನಲ್ಲಿ, ಜೂನ್ 4 ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಚುನಾವಣೆ ಏಜೆಂಟರುಗಳಿಗೆ ಮತದಾನ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲು ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 1779075 ಮತದಾರರಲ್ಲಿ, 1453016 ಮತದಾರರು ಮತ ಚಲಾಯಿಸಿದ್ದಾರೆ. ಮಳವಳ್ಳಿಯಲ್ಲಿ ಗಂಡು – 98146, ಹೆಣ್ಣು – 97741, ಒಟ್ಟು – 195887 ಮತದಾರರು ಮತ ಚಲಾಯಿಸಿದ್ದು, ಶೇ. 77.23 ರಷ್ಟು ಮತದಾನವಾಗಿದೆ. ಮದ್ದೂರಿನಲ್ಲಿ ಗಂಡು- 87323, ಹೆಣ್ಣು -91703, ಒಟ್ಟು 179026 ಮತದಾರರು ಮತ ಚಲಾಯಿಸಿದ್ದು, ಶೇ. 82.98 ರಷ್ಟು ಮತದಾನವಾಗಿದೆ. ಮೇಲುಕೋಟೆಯಲ್ಲಿ ಗಂಡು-88175, ಹೆಣ್ಣು-89189, ಒಟ್ಟು 177364 ಮತದಾರರು ಮತ ಚಲಾಯಿಸಿದ್ದು, ಶೇ. 87.20 ರಷ್ಟು ಮತದಾನವಾಗಿದೆ. ಮಂಡ್ಯದಲ್ಲಿ ಗಂಡು-86970, ಹೆಣ್ಣು-89859, ಒಟ್ಟು 176829 ಮತದಾರರು ಮತ ಚಲಾಯಿಸಿದ್ದು, ಶೇ. 77.00 ರಷ್ಟು ಮತದಾನವಾಗಿದೆ. ಶ್ರೀರಂಗಪಟ್ಟಣ ಗಂಡು- 90507, ಹೆಣ್ಣು-93336, ಒಟ್ಟು 183843 ಮತದಾರರು ಮತ ಚಲಾಯಿಸಿದ್ದು, ಶೇ. 84.48 ರಷ್ಟು ಮತದಾನವಾಗಿದೆ. ನಾಗಮಂಗಲದಲ್ಲಿ ಗಂಡು-92195, ಹೆಣ್ಣು-91281, ಒಟ್ಟು 183476 ಮತದಾರರು ಮತ ಚಲಾಯಿಸಿದ್ದು,ಶೇ 84.73 ರಷ್ಟು ಮತದಾನವಾಗಿದೆ. ಕೃಷ್ಣರಾಜಪೇಟೆಯಲ್ಲಿ ಗಂಡು-89362, ಹೆಣ್ಣು-91112, ಒಟ್ಟು 180474 ಮತದಾರರು ಮತ ಚಲಾಯಿಸಿದ್ದು, ಶೇ. 80.63 ರಷ್ಟು ಮತದಾನವಾಗಿದೆ. ಕೆ. ಆರ್ ನಗರದಲ್ಲಿ ಗಂಡು-87834, ಹೆಣ್ಣು-88283 ಸೇರಿದಂತೆ ಒಟ್ಟು 176117 ಮತದಾರರು ಮತ ಚಲಾಯಿಸಿದ್ದು, ಶೇ80.50 ಮತದಾನವಾಗಿದೆ ಎಂದು ಮಾಹಿತಿ ನೀಡಿದರು.

ಮತ ಎಣಿಕೆ ಕೊಠಡಿ
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತಲಾ 2 ಕೊಠಡಿಗಳಂತೆ ಒಟ್ಟು 16 ಕೊಠಡಿಗಳಲ್ಲಿ ತಲಾ 7 ಟೇಬಲ್ ಗಳಂತೆ ಅಂದರೆ 112 ಟೇಬಲ್ ಗಳಲ್ಲಿ ಇವಿಎಂ ಮತ ಎಣಿಕೆ ಕಾರ್ಯ ನಡೆಯಲಿದೆ. ಅಂಚೆ ಮತ ಪತ್ರ ಹಾಗೂ ETPBS ಮತಪತ್ರಗಳ ಎಣಿಕೆ 2 ಕೊಠಡಿಗಳಲ್ಲಿ ಒಟ್ಟು 11 ಟೇಬಲ್ ಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದರು.

ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಕ್ಷೇತ್ರಕ್ಕೆ 14 ಟೇಬಲ್ ಗಳಂತೆ ಒಟ್ಟು 123 ಟೇಬಲ್ಗಳಲ್ಲಿ, ಒಟ್ಟು 151 ಸುತ್ತುಗಳ ಮತ ಎಣಿಕೆ ಪ್ರಕ್ರಿಯೆಯು ನಡೆಯಲಿದೆ. ಮಳವಳ್ಳಿಯಲ್ಲಿ 20 ಸುತ್ತು, ಮದ್ದೂರು – 19 ಸುತ್ತು, ಮೇಲುಕೋಟೆ -19 ಸುತ್ತು, ಮಂಡ್ಯ – 19 ಸುತ್ತು, ಶ್ರೀರಂಗಪಟ್ಟಣ – 18 ಸುತ್ತು, ನಾಗಮಂಗಲ – 19 ಸುತ್ತು, ಕೆ. ಆರ್. ಪೇಟೆ – 19 ಸುತ್ತು, ಕೆ. ಆರ್. ನಗರ – 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.

ಮತ ಎಣಿಕೆ ಸಿಬ್ಬಂದಿಗಳ ನೇಮಕ ಇ. ವಿ. ಎಂ. ಮತ ಎಣಿಕೆಗಾಗಿ ಮತ್ತು ಅಂಚೆ ಮತಪತ್ರ ಹಾಗೂ ETPBS ಮತಪತ್ರಗಳ ಎಣಿಕೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 44 ಸಿಬ್ಬಂದಿಗಳು ಹಾಗೂ ಮೀಸಲು 48 ಸಿಬ್ಬಂದಿಗಳು ಸೇರಿದಂತೆ ಒಟ್ಟು 400 ಅಧಿಕಾರಿ/ ನೌಕರರನ್ನು ನೇಮಿಸಲಾಗಿದೆ. ಇವರಲ್ಲಿ 16 ಎಆರ್ ಒಗಳು, 128 ಕೌಂಟಿಂಗ್ ಸೂಪರ್ ವೈಸರ್ ಗಳು, 128 ಕೌಂಟಿಂಗ್ ಅಸಿಸ್ಟೆಂಟ್ ಗಳು, 128 ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

ಅಂಚೆ ಮತಪತ್ರ ಮತ್ತು ETPBS ಮತಪತ್ರಗಳ ಮತ ಎಣಿಕೆ ಸಿಬ್ಬಂದಿಗಳ ನೇಮಕ ಅಂಚೆ ಮತಪತ್ರ ಮತ್ತು ETPBS ಮತ ಪತ್ರಗಳ ಎಣಿಕೆ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆಯನ್ನು ಸಹಾಯಕ ಚುನಾವಣಾ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಡಾ. ಹೆಚ್. ಎಲ್. ನಾಗರಾಜುರವರು ನಿರ್ವಹಿಸಲಿದ್ದಾರೆ. ಅಂಚೆ ಮತಪತ್ರ ಮತ್ತು ETPBS ಮತಪತ್ರಗಳ ಮತ ಎಣಿಕೆಗೆ ಒಟ್ಟು 69 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, 13 – ಎಆರ್ ಒ ಗಳು, 14- ಕೌಂಟಿಂಗ್ ಸೂಪರ್ ವೈಸರ್ ಗಳು, 28 – ಕೌಂಟಿಂಗ್ ಅಸಿಸ್ಟೆಂಟ್ಗಳು, 14 – ಮೈಕ್ರೋ ಅಬ್ಸರ್ವರ್ ಗಳಿಗೆ ಮತ ಎಣಿಕೆಗೆ ಸಂಬಂಧಿಸಿದಂತೆ ಇವರುಗಳಿಗೆ ಪ್ರತ್ಯೇಕವಾಗಿ ತರಬೇತಿ ನೀಡಲಾಗಿದೆ ಎಂದರು.

ಸಿಸಿ ಕ್ಯಾಮರಾ ಮತ್ತು ವೆಬ್ ಕ್ಯಾಸ್ಟಿಂಗ್
ಚುನಾವಣೆಯ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಮತ್ತು ಚುನಾವಣಾ ಏಜೆಂಟರ ಚಲನವಲನಗಳ ಬಗ್ಗೆ ನಿಗಾ ವಹಿಸಲಿಕ್ಕೆ ಪ್ರತಿ ಟೇಬಲ್ ಗೆ 1 ಸಿಸಿ ಕ್ಯಾಮರಾವಿದ್ದು, ಒಟ್ಟು 123 ಟೇಬಲ್ ಗಳಿಗೆ 123 ವೆಬ್ ಕಾಸ್ಟಿಂಗ್ ಕ್ಯಾಮರಾವನ್ನು ಅಳವಡಿಸಲಾಗುತ್ತದೆ. ಭದ್ರತಾ ಕೊಠಡಿಯ ಹೊರಾಂಗಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿರುತ್ತದೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಗುಂಡ್ಲುಪೇಟೆ: ಮನೆಯೊಳಗೆ ನುಗ್ಗಿದ್ದ ನಾಗರಹಾವಿನ ರಕ್ಷಣೆ

ಗುಂಡ್ಲುಪೇಟೆ: ತಾಲ್ಲೂಕಿನ ಕಗ್ಗಳದಹುಂಡಿ ಗ್ರಾಮದ ಮನೆಯೊಳಗೆ ನುಗ್ಗಿದ್ದ ನಾಗರಹಾವನ್ನು ಉರಗಪ್ರೇಮಿ ಸ್ವಾಮಿ ಅವರು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.…

2 hours ago

ಬೈಕ್ ಸವಾರನ ಮೇಲೆ ಕಾಡುಕೋಣ ದಾಳಿ

ಮಡಿಕೇರಿ: ತಾಲ್ಲೂಕಿನ ಕೆದಕಲ್ ಸಮೀಪದ ಕೋಟೆಕಾಡು ಪ್ರದೇಶದಲ್ಲಿ ಬೈಕ್ ಸವಾರನ ಮೇಲೆ ಕಾಡುಕೋಣ ದಾಳಿ ನಡೆಸಿದ ಘಟನೆ ನಡೆದಿದೆ. ಕಕ್ಕಬ್ಬೆ…

3 hours ago

ಹನೂರು: ಹುಚ್ಚು ನಾಯಿ ದಾಳಿಗೆ ಹಲವರು ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಮಹದೇಶ್ವರಬೆಟ್ಟ ಮುಖ್ಯರಸ್ತೆಯ ಸಮೀಪ ಶನಿವಾರ ಬೆಳಿಗ್ಗೆ ಹುಚ್ಚು ನಾಯಿಯೊಂದು…

3 hours ago

ರೀಲ್ಸ್‌ಗಾಗಿ ಡ್ರಿಫ್ಟಿಂಗ್:‌ ಜಾನುವಾರುಗಳ ಮೇವನ್ನು ಮಣ್ಣುಪಾಲು ಮಾಡಿದ ಪ್ರವಾಸಿಗರು

ಹಾಸನ: ಜಿಲ್ಲೆಯ ಸಕಲೇಶಪುರ ಗವಿಬೆಟ್ಟದಲ್ಲಿ ಪ್ರವಾಸಿಗರು ರೀಲ್ಸ್‌ಗಾಗಿ ಥಾರ್‌ ಕಾರನ್ನು ಡ್ರಿಫ್ಟಿಂಗ್‌ ಮಾಡಿದ್ದಾರೆ. ಇದರಿಂದ ಜಾನುವಾರುಗಳ ಮೇವು ಹಾಗೂ ರಸ್ತೆಗೆ…

3 hours ago

ವಿಯೆಟ್ನಾಂ ದ್ವೀಪದಲ್ಲಿ 32 ಭಾರತೀಯ ಪ್ರವಾಸಿಗರಿದ್ದ ಬೋಟ್‌ ಮುಳುಗಡೆ: 15 ಮಂದಿ ಸಾವು

ಹನೋಯ್:‌ ವಿಯೆಟ್ನಾಂ ಫು ಕ್ವಾಕ್‌ ದ್ವೀಪದ ಬಳಿ 32 ಮಂದಿ ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್‌ ಬೋಟ್‌ ಮುಳುಗಡೆಯಾಗಿದ್ದು, ಕನಿಷ್ಠ…

4 hours ago

ಬಡ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್:‌ 39 ಅಗತ್ಯ ಔಷಧಿಗಳ ಬೆಲೆ ಇಳಿಕೆ

ನವದೆಹಲಿ: ಕೇಂದ್ರ ಸರ್ಕಾರ ಬಡ ರೋಗಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, 39 ಅಗತ್ಯ ಔಷಧಿಗಳ ಬೆಲೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.…

4 hours ago