ಮಂಡ್ಯ: ರೈತರು ತಾವು ಬೆಳೆದ ಬೆಳೆಗಳಿಗೆ ತಾವೇ ಬೆಲೆ ಕಟ್ಟಿ ಮಾರಾಟ ಮಾಡುವ ರೀತಿ ಬದಲಾವಣೆ ಮಾಡಿಕೊಳ್ಳಲು ರೈತ ಉತ್ಪಾದಕ ಸಂಘಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಅವರು ಇಂದು (ಫೆ.15) ರಂದು ಜಿಲ್ಲಾಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಮಂಡ್ಯ ಜಿಲ್ಲೆ ರೈತ ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥರು, ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ಸಂಪನ್ಮೂಲ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ವ್ಯಾಪಾರ ಮತ್ತು ವ್ಯಾವಹಾರಿ ಅಭಿವೃದ್ಧಿಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆ, ಕೃಷಿಯಲ್ಲಿ ತನ್ನದೇ ಆದ ವಿಶೇಷ ಮಹತ್ವವವನ್ನು ಹೊಂದಿದೆ. ರೈತರು ಆರ್ಥಿಕವಾಗಿ ಸದೃಢರಾಗಲು ರೈತರು ಬೆಳೆದ ಬೆಳೆಗಳ ಮೌಲ್ಯವರ್ಧನೆಯಾಗಬೇಕು ರೈತ ಉತ್ಪದಕಾ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ರೈತರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಬೇಕು ಎಂದರು.
ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕೆಂದರೆ, ದಲ್ಲಾಳಿ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಬೇಕು., ರೈತರು ನಿಜವಾಗಿಯೂ ಸ್ವಾವಲಂಬಿಗಳಾಗಬೇಕೆಂದರೆ ರೈತ ಉತ್ಪಾದಕರ ಸಂಸ್ಥೆಗಳ ಅವಶ್ಯಕತೆ ಇದೆ, ಇದರಿಂದ ರೈತರು ಸಹ ಕಂಪನಿಗಳು ಮಾಲೀಕರಾಗಬಹುದು ಎಂದರು.
ಸರ್ಕಾರದ ಪಿ.ಎಂ.ಎಫ್. ಇ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು, ರೈತರು ಬೆಳೆದ ಬೆಳೆಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಗ್ರಾಹಕರ ಗಮನ ಸೆಳೆಯುವ ರೀತಿ ಬ್ರ್ಯಾಡಿಂಗ್ ಆಗಬೇಕು. ಇದರಿಂದ ಜಿಲ್ಲೆ ಮಾತ್ರವಲ್ಲ ಹೊರ ರಾಜ್ಯ ಮತ್ತು ರಾಷ್ಟ್ರದಲ್ಲಿ ಮಾರುಕೊಟ್ಟೆ ದೊರೆಯುತ್ತದೆ ಎಂದರು.
ನಂತರ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಅವರು ಮಾತನಾಡಿ ಇದು ಜಿಲ್ಲೆಯಲ್ಲಿ ಕೃಷಿಯ ಕುರಿತು ನಡೆಸುತ್ತಿರುವ ನನ್ನ ಮೊದಲ ಕಾರ್ಯಕ್ರಮ, ದೇಶದ ಜಿ.ಡಿ.ಪಿ.ಗೆ ಸೇವಾ ವಲಯದ ಕೊಡುಗೆ ಅತಿ ಹೆಚ್ಚು, ಅದರಲ್ಲಿ ಅತಿ ಹೆಚ್ಚು ಜನ ಕೃಷಿಯ ವಲಯದ ಮೇಲೆ ಅವಲಂಬಿತರಾಗಿದ್ದಾರೆ, ಶ್ರಮ ಪಟ್ಟು ದುಡಿಯುತ್ತಿರುವ ರೈತರಿಗಿಂತ ಹೆಚ್ಚು ಕೃಷಿಗೆ ಸಂಬಂಧಿಸಿದ ಕಂಪನಿಗಳು ಆದಾಯವನ್ನು ಗಳಿಸುತ್ತಿವೆ, ರೈತರ ಆದಾಯ ಹೆಚ್ಚಬೇಕು ಎಂದರೆ ಇಂತಹಾ ಕಾರ್ಯಾಗಾರಗಳು ಮುಖ್ಯ ಮುಕ್ತ ಮನಸ್ಸಿನಿಂದ ವಿಚಾರಗಳು ವಿನಿಮಯ ಮಾಡಿಕೊಂಡು ಅದನ್ನು ಕಾರ್ಯ ಪ್ರವೃತ್ತಿಯಲ್ಲಿ ಅಳವಡಿಸಿ ಆದಾಯ ಹೆಚ್ಚಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ , ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ, ರೈತ ಉತ್ಪಾದಕ ಸಂಸ್ಥೆಗಳು ಮುಖ್ಯಸ್ಥರುಗಳಾದ ಕರಸವಾಡಿ ಮಹದೇವ್, ಹರೀಶ್, ಹನುಮಂತೇಗೌಡ, ಸುಬ್ರಹ್ಮಣ್ಯ, ಮಾಯಣ್ಣ, ಚಿಕ್ಕೇಗೌಡ, ಜಗದೀಶ್ ಬಾಬು ಮತ್ತು ಇನ್ನಿತರ ಉಪಸ್ಥಿತರಿದ್ದರು.
ಗೋಣಿಕೊಪ್ಪ: ಪಟ್ಟಣದಲ್ಲಿ ಇಂದು ಸಂಜೆ ವೇಳೆಗೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಧಾರಾಕಾರ ಮಳೆಗೆ ಶಾಲಾ-ಕಾಲೇಜುಗಳ ಮೈದಾನಗಳು ಕೆರೆಯಂತಾಗಿದ್ದು, ಮಕ್ಕಳು…
ಬೆಂಗಳೂರು: ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಈ ಮೊದಲು ನಿಗದಿಗೊಳಿಸಿದ್ದ ಸಿಇಟಿ ಕನ್ನಡ ಪರೀಕ್ಷೆಯನ್ನು ಏಪ್ರಿಲ್.18ಕ್ಕೆ ಬದಲಾಗಿ ಏಪ್ರಿಲ್.15ರಂದೇ…
ಹನೂರು: ಪವಾಡ ಪುರುಷ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಪು, ಶ್ಯಾಂಪು ಬಳಕೆಗೆ ನಿಷೇಧ ವಿಧಿಸಲಾಗಿದೆ. ಅಂತರಗಂಗೆಯ 500…
ಮಡಿಕೇರಿ: ಫ್ರೆಂಡ್ಸ್ ಹುಲಿತಾಳ ಇವರ ವತಿಯಿಂದ ಪ್ರಥಮ ವರ್ಷದ ಹುಳಿತಾಳ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯವು ಮಾರ್ಚ್ 21,22,23ರಂದು ಮಡಿಕೇರಿಯ…
ಬೆಂಗಳೂರು: 1942ರಲ್ಲಿ ಬ್ರಿಟಿಷರೊಂದಿಗೆ ಸೇರಿಕೊಂಡಿದ್ದವರು. ನೀವು ಬ್ರಿಟಿಷರ ಏಜೆಂಟರು ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಈ…
ಪಿರಿಯಾಪಟ್ಟಣ: ನಿತ್ಯ ಮನೆ ಕೆಲಸ, ಕೃಷಿ ಕೆಲಸದಲ್ಲಿಯೇ ಸಂಪೂರ್ಣ ಸಮಯ ಕಳೆಯುತ್ತಿದ್ದ ಮಹಿಳೆಯರು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಮಕ್ಕಳಂತೆ ಸಂಭ್ರಮಿಸಿದ್ದಾರೆ.…