ಮಂಡ್ಯ: ಕಡಿಮೆ ನೀರು, ಹೆಚ್ಚು ಇಳುವರಿ ಮತ್ತು ರೋಗ ನಿರೋಧಕ ಶಕ್ತಿ ಅಧಿಕವಾಗಿರುವ ಹೊಸ ಭತ್ತದ ತಳಿಗಳನ್ನು ಬೆಳೆಯಲು ಮಂಡ್ಯ ರೈತರು ಉತ್ಸುಕರಾಗಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಈ ಭತ್ತದ ತಳಿಯನ್ನು ಪರಿಚಯಿಸಿದ್ದು, ಈಗಾಗಲೇ ಮಂಡ್ಯ ಜಿಲ್ಲೆಯ ರೈತರನ್ನು ವಿವಿಧ ಸಭೆಗಳಿಗೆ ಆಹ್ವಾನಿಸಿದೆ.
ನೀರಿನ ಲಭ್ಯತೆ, ಕೀಟ ಹಾಗೂ ರೋಗದ ತೀವ್ರತೆ ಗಮನದಲ್ಲಿಟ್ಟುಕೊಂಡು ಅಧಿಕ ಇಳುವರಿ ನೀಡುವ ಭತ್ತದ ತಳಿ ಇದಾಗಿದ್ದು, ಈ ಬಾರಿ ಮಂಡ್ಯ ಜಿಲ್ಲೆಯ ರೈತರು ಹೊಸ ತಳಿ ಭತ್ತ ಬೆಳೆಯಲು ಭಾರೀ ಉತ್ಸುಕರಾಗಿದ್ದಾರೆ.
ಇನ್ನೂ ಈ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದು, ಕೆಆರ್‌ಎಸ್ ಜಲಾಶಯ ಕೂಡ ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ ನಾಲೆಗಳಿಗೂ ಕೂಡ ಹೆಚ್ಚುವರಿಯಾಗಿ ನೀರನ್ನು ಬಿಡಲಾಗುತ್ತದೆ. ಹಾಗಾಗಿ ಮಂಡ್ಯ ಜಿಲ್ಲೆಯಲ್ಲಿ ರೈತರು ಅಧಿಕ ಇಳುವರಿ ಕೊಡುವ ಭತ್ತ ಬೆಳೆಯಲು ಅನುಕೂಲವಾಗುತ್ತದೆ.
ಈ ಹೊಸ ತಳಿ ಭತ್ತಗಳಿಂದ ರೈತರು ಉತ್ತಮ ಆದಾಯ ಗಳಿಸಲು ಅನುಕೂಲವಾಗಲಿದ್ದು, ಈ ಮೂಲಕ ಅನ್ನದಾತರ ಬದುಕು ಹಸನಾಗಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮಂಡ್ಯ ಜಿಲ್ಲೆಯ ರೈತರ ಮೊಗದಲ್ಲಿ ಭಾರೀ ಮಂದಹಾಸ ಮನೆಮಾಡಿದೆ.
ಚಾಮರಾಜನಗರ : ತಾಲೂಕಿನ ದೇವರಾಜಪುರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕೋಳಿ ಫಾರಂ ಶೆಡ್‌ಗೆ ಬೆಂಕಿ ತಗುಲಿ ಸುಮಾರು 4…
ದಾವಣಗೆರೆ : ಆಟೋ ರಿಕ್ಷಾಗಳಿಗೆ ಅನಿಲ ಪೂರೈಕೆ ಸಮಸ್ಯೆ ಇಲ್ಲ, ಆದರೂ ವಿನಾಕಾರಣ ಆತಂಕಕ್ಕೊಳಗಾಗಿ ಕ್ಯೂ ನಿಲ್ಲಲಾಗುತ್ತಿದೆ ಎಂದು ಆಹಾರ…
ಶ್ರೀರಂಗಪಟ್ಟಣ : ಪ್ರವಾಸಕ್ಕೆ ಬಂದಿದ್ದ ಇನ್ಫೋಸಿಸ್ ಉದ್ಯೋಗಿಯೊಬ್ಬರು ಕಾವೇರಿ ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ…
ಬೆಂಗಳೂರು : ಕರ್ನಾಟಕ ಸರ್ಕಾರವು ದಿನಗೂಲಿ ನೌಕರರು ಮತ್ತು ಅವರ ಅವಲಂಬಿತರಿಗೆ ವಾರ್ಷಿಕ 5 ಲಕ್ಷದವರೆಗೆ ನಗದು ರಹಿತ ಆರೋಗ್ಯ…
ಬೆಂಗಳೂರು : ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ ಹಗರಣ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್…
ಮೈಸೂರು : ಜಿಲ್ಲೆಯಲ್ಲಿ ಏ.16 ರಿಂದ ಮೇ 15ರವರೆಗೆ ನಡೆಯುವ ಜನಗಣತಿಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜನಗಣತಿಗೂ ಮುನ್ನ ‘ಸ್ವಯಂ…