ಮಂಡ್ಯ: ಸಾಹಿತ್ಯ, ಕ್ರೀಡೆ, ಸಾಮಾಜಿಕ ಸೇವೆ, ಶಿಕ್ಷಣ, ರಂಗಭೂಮಿ, ನ್ಯಾಯಾಂಗ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 33 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ನ.1ರ ಶನಿವಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಗಣ್ಯರು ಸಾಧಕರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಆನಂದ (ನ್ಯಾಯಾಂಗ), ನಾಗಮಂಗಲ ತಾಲ್ಲೂಕು ಕಾರಭೈಲು ಗ್ರಾಮದ ಮರಿಯಪ್ಪ (ಮೂಡಲಪಾಯ ಯಕ್ಷಗಾನ), ಎಂ.ಆರ್. ಕುಪ್ಪಸ್ವಾಮಿ, ಮದ್ದೂರು (ರಂಗಭೂಮಿ), ಇಕ್ಕಲಕ್ಕಿ ರಾಮಲಿಂಗೇಗೌಡ, ಹೊಸಹಳ್ಳಿ, ಮಂಡ್ಯ (ಸಹಕಾರ ಕ್ಷೇತ್ರ), ಸಂತೆ ಕಸಲಗೆರೆ ಬಸವರಾಜು (ಜಾನಪದ ಕ್ಷೇತ್ರ), ಬಿಳಿಗೌಡ, ತಗ್ಗಹಳ್ಳಿ, ಮದ್ದೂರು ತಾ. (ಸಾವಯವ ಕೃಷಿ), ದೇವರಾಜು, ಹಲಗೂರು ಆಸ್ಪತ್ರೆ (ಸಮಾಜ ಸೇವೆ), ಎಚ್.ಪಿ. ಅಶೋಕ್ ಕುಮಾರ್, ಹೊಸಹೊಳಲು, ಕೆ.ಆರ್. ಪೇಟೆ ತಾ. (ಡೋಲು ವಾದಕ), ಸುದೇಶ್ ಪಾಲ್, ಬಿ.ಜೆ. ಸೋಮಶೇಖರ್, ಸುನೀಲ್ ಕುಮಾರ್, ಚನ್ನಮಾದೇಗೌಡ (ಪತ್ರಿಕೋದ್ಯಮ). ಎಂ.ಟಿ. ರಾಜೇಂದ್ರ, ಮುಟ್ಟನಹಳ್ಳಿ, ಮದ್ದೂರು ತಾ. (ಕಾನೂನು ಕ್ಷೇತ್ರ), ಎಂ. ಕೃಷ್ಣೇಗೌಡ, ನಂಬಿನಾಯಕನಹಳ್ಳಿ, ಮದ್ದೂರು ತಾ. (ಕೋಲಾಟ), ಲವಕುಮಾರ, ಕಣಿವೆಕೊಪ್ಪಲು, ಪಾಂಡವಪುರ ತಾ. (ಪರಿಸರ), ಎಂ.ಕೆ. ಮಂಜುನಾಥ್, ಮಂಡ್ಯ ಕೊಪ್ಪಲು, ಶ್ರೀರಂಗಪಟ್ಟಣ ತಾ. (ಸಮಾಜ ಸೇವೆ), ನರಸಿಂಹೇಗೌಡ, ನಾರಾಯಣಪುರ, ಪಾಂಡವಪುರ ತಾ. (ಸಾಹಿತ್ಯ), ಜಿ.ಆರ್. ಸಂಗೀತ, ಗೌಡಹಳ್ಳಿ, ಶ್ರೀರಂಗಪಟ್ಟಣ ತಾ. (ಸುಗಮ ಸಂಗೀತ). ಡಾ. ಅ.ಮ. ಶ್ಯಾಮೇಶ್, ಕೆ.ಆರ್.ಪೇಟೆ (ಸಾಹಿತ್ಯ), ಸಿ.ಎಲ್. ಶಿವಕುಮಾರ್, ಮಂಡ್ಯ (ಕಾನೂನು ಕ್ಷೇತ್ರ), ಎಲ್.ಆರ್. ಸತೀಶ್, ಲಿಂಗಾಪುರ, ಪಾಂಡವಪುರ ತಾ. (ರಂಗಭೂಮಿ), ಎನ್.ಆರ್. ಚಂದ್ರಶೇಖರ್, ಬದರಿಕೊಪ್ಪಲು ಗೇಟ್, ನಾಗಮಂಗಲ (ಸಮಾಜ ಸೇವೆ), ಡಾ. ಆರ್.ಪಿ. ಛಾಯಾ, ಮಂಡ್ಯ (ಜಾನಪದ ಕ್ಷೇತ್ರ), ಶೇಖ್ ಉಬೇದುಲ್ಲಾ, ಮಂಡ್ಯ (ಸಮಾಜ ಸೇವೆ).
ಇದನ್ನೂ ಓದಿ:-ಪೊಲೀಸ್ ಇಲಾಖೆ ಲಂಚ ಸಾಬೀತಾದರೆ ಸೇವೆಯಿಂದ ವಜಾ : ಗೃಹ ಸಚಿವ ಪರಮೇಶ್ವರ್
ಮಂಜುಳಾ ರಮೇಶ್, ಮಲ್ಲನಾಯಕನಕಟ್ಟೆ, ಮಂಡ್ಯ ತಾ. (ಸಮಾಜ ಸೇವೆ), ಎಸ್. ಪ್ರಕಾಶ್, ಸೊಳ್ಳೇಪುರ, ಮದ್ದೂರು ತಾ. (ಕೃಷಿ), ಬಿ.ಆನಂದ, ಚನ್ನೇಗೌಡ ಬಡಾವಣೆ, ಮದ್ದೂರು ತಾ. (ಸಮಾಜ ಸೇವೆ), ಡಿ.ಯು. ಮನೋಜ್, ದಮ್ಮಸಂದ್ರ, ನಾಗಮಂಗಲ ತಾ. (ಕ್ರೀಡಾ ಕ್ಷೇತ್ರ), ಎಂ.ಎಲ್.ತುಳಸೀಧರ್, ಮಂಡ್ಯ (ಸಮಾಜ ಸೇವೆ), ಗೆಳೆಯರ ಬಳಗ, ಸಂತೆಬಾಚಹಳ್ಳಿ, ಕೆ.ಆರ್. ಪೇಟೆ ತಾ. (ಸಾಮಾಜಿಕ ಸೇವೆ), ಡಾ. ಕೆ.ಚಂದ್ರಶೇಖರ್, ಮಂಡ್ಯ (ವೈದ್ಯಕೀಯ ಸೇವೆ), ತಿಮ್ಮರಾಯಿಗೌಡ, ಚಾಕೇನಹಳ್ಳಿ, ನಾಗಮಂಗಲ ತಾ. (ರಂಗಭೂಮಿ), ಸಿ. ನಿಶ್ಚಿತ್‌ಗೌಡ, ಚಾಮಲಾಪುರ, ನಾಗಮಂಗಲ ತಾ. ಕ್ರೀಡೆ.
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…