ಮಂಡ್ಯ: ಅಸೋಸಿಯೇಷನ್ ಆಫ್ ಫಿಜಿಷಿಯನ್ ಆಫ್ ಇಂಡಿಯಾ ಮಂಡ್ಯ ಶಾಖೆ ವತಿಯಿಂದ 41ನೇ ರಾಜ್ಯಮಟ್ಟದ ಫಿಜಿಷಿಯನ್ ವೈದ್ಯರ ಸಮ್ಮೇಳನವನ್ನು ಆದಿಚುಂಚನಗಿರಿ ವಿಶ್ವವಿದ್ಯಾನಿಲಯ ಹಾಗೂ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಯೋಗದಲ್ಲಿ ಜುಲೈ 26 ರಿಂದ ಜುಲೈ 28 ರ ವರೆಗೆ ಮಂಡ್ಯದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಅಧ್ಯಕ್ಷ ಡಾ. ಶಿವಕುಮಾರ್ ತಿಳಿಸಿದರು.
ಬುಧುವಾರ(ಜು.24) ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ,ಸಮ್ಮೇಳನಕ್ಕೆ ಸುಮಾರು 1,200ಕ್ಕೂ ಹೆಚ್ಚು ಮಂದಿ ವೈದ್ಯರು ಮತ್ತು ವಿದ್ಯಾರ್ಥಿಗಳು ಹೆಸರನ್ನು ನೋಂದಾಯಿಸಿಕೊಂಡಿದ್ದು ಈ ಮೂರು ದಿನಗಳ ಕಾಲ ವಿಶೇಷ ಉಪನ್ಯಾಸ, ಚರ್ಚೆ, ಮೆಡಿಕಲ್ ಕ್ವಿಜ್ ಹಾಗೂ ಕಾರ್ಯಗಾರಗಳನ್ನು ನಡೆಸಲಾಗುತ್ತದೆ ಎಂದರು.
ಜುಲೈ 26ರಂದು ಸಂಜೆ 6ಗಂಟೆಗೆ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳ ಸಮ್ಮುಖದಲ್ಲಿ ರಾಷ್ಟ್ರೀಯ ಏಪಿಐ ಸಂಘದ ಅಧ್ಯಕ್ಷರಾದ ಡಾ. ಜ್ಯೋತಿರ್ಮೈ ಪಾಲ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು ,ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ ಎ ಶೇಖರ್, ಎಪಿಐ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ಬಿವಿ ಮುರಳಿ ಮೋದನ್, ಡಾ. ಸುರೇಶ್ ವಿ ಸಾಗರ್ ,ಕೆ ವಿಶ್ವನಾಥ್ ,ಮೋಹನ್ ಕುಮಾರ್, ಬೆಳ್ಳೂರಿನ ಎಮ್ಸ್ ನಿರ್ದೇಶಕ ಡಾ. ಎಂಜಿ ಶಿವರಾಮ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಡಾ. ಪ್ರಸನ್ನ ಕುಮಾರ್ ,ಡಾ. ರೇಖಾ, ಡಾ. ಮೋಹನ್ ಕುಮಾರ್ ಸೇರಿದಂತೆ ಇತರರಿದ್ದರು.
ಮೈಸೂರು: ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟ ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು,…
ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ನ್ಯಾಯಾಲಯದ ಆದೇಶವನ್ನು ಮೀರಿ…
ಹನೂರು: ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಬರುತ್ತಿದ್ದು, ಇಂದು…
ಚಾಮರಾಜನಗರ: ತಾಲ್ಲೂಕಿನ ಅಮಚವಾಡಿ ಗ್ರಾಮದಲ್ಲಿ ಸಿಡಿಮದ್ದು ಸಿಡಿದು ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸಿಡಿಮದ್ದು ಸಿಡಿದು ಪೆದ್ದಿ ಅಲಿಯಾಸ್…
ಎಚ್.ಡಿ.ಕೋಟೆ -ಗದ್ದಿಗೆ ಮುಖ್ಯ ರಸ್ತೆಯಲ್ಲಿರುವ ಪೈಲ್ವಾನ್ ಕಾಲೋನಿ ಗ್ರಾಮದಲ್ಲಿರುವ ನೀರು ಕಾಲುವೆಗೆ ತಡೆಗೋಡೆ ಇಲ್ಲಿದೇ ತೀವ್ರ ತೊಂದರೆಯಾಗಿದೆ. ಎಚ್.ಡಿ.ಕೋಟೆ ಮತ್ತು…
ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಸಂಶೋಧಕರ ಪುರುಷ ಮತ್ತು ಮಹಿಳಾ ವಿದ್ಯಾರ್ಥಿ ನಿಲಯಗಳಲ್ಲಿ, ಶುದ್ಧ ಕುಡಿಯುವ ನೀರಿನ ಫಿಲ್ಟರ್, ಬಿಸಿನೀರಿನ…