ಮಂಡ್ಯ : ಆಸ್ತಿ ವಿಚಾರಕ್ಕೆ ಟವೆಲ್‌ನಿಂದ ಕುತ್ತಿಗೆ ಬಿಗಿದು ವೃದ್ಧೆಯನ್ನು ಕೊಲೆ ಮಾಡಿರುವ ಘಟನೆ ಮಂಡ್ಯ ನಗರದ ಹೆಬ್ಬಾಳ ಸಮೀಪದ ಹೊರವಲಯದಲ್ಲಿ ನಡೆದಿದೆ.
ನಳಿನಿ ರಮೇಶ್(62)ಕೊಲೆಯಾದ ದುರ್ದೈವಿ. ಕಾಫಿ ಪುಡಿ ಅಂಗಡಿ-ಚಿಕೋರಿ ಕಾರ್ಖಾನೆಯ ಮಾಲೀಕ ರಮೇಶ್ ಪತ್ನಿಯಾಗಿರುವ ಮೃತ ನಳಿನಿ ರಮೇಶ್. ಮಂಡ್ಯ ನಗರದ ವಿದ್ಯಾನಗರದ ನಿವಾಸಿಗಳಾಗಿದ್ದಾರೆ.
ಉದ್ಯಮ ಮಾಡಲು ಕಾಫೀ ಪುಡಿ ಅಂಗಡಿ ಹಾಗೂ ಚಿಕೋರಿ ಕಾರ್ಖಾನೆಯನ್ನ ಬ್ಯಾಂಕ್ ನಲ್ಲಿ ಅಡಮಾನ ಇಟ್ಟಿದ್ದರು. ಆದರೆ ಸಾಲ ತೀರಿಸಲಾಗದ ಕಾರಣ ಕಾರ್ಖಾನೆಯನ್ನ ಬ್ಯಾಂಕ್ ವಶಕ್ಕೆ ಪಡೆದಿತ್ತು. ಹೀಗಾಗಿ ಮಂಡ್ಯ ಬಿಟ್ಟು ಮೈಸೂರಿನ ವೃದ್ದಾಶ್ರಮದಲ್ಲಿದ್ದ ದಂಪತಿಗಳು.
ಇತ್ತೀಚಿಗೆ ವೃದ್ದೆ ಮಂಡ್ಯದ ಚಿಕೋರಿ ಕಾರ್ಖಾನೆಯ ಮನೆಯಲ್ಲಿ ವಾಸವಿದ್ದರು. ದುಷ್ಕರ್ಮಿಗಳು ಟವೆಲ್ ಬಳಸಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಆಸ್ತಿಗಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ಪರಿಶೀಲನ ನಡೆಸಿದ್ದಾರೆ.
ಸದ್ಯ ಮೃತ ವೃದ್ದೆಯ ಶವವನ್ನು ಮಂಡ್ಯ ಮಿಮ್ಸ್ ಶವಗಾರಕ್ಕೆ ರವಾನಿಸಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹನೂರು: ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಎರಡನೇ ದಿನವಾದ ಇಂದು ಹನೂರು…
ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣ…
ಮಂಜು ಕೋಟೆ ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಕೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನಲ್ಲಿ ಕಾಡು ಪ್ರಾಣಿಗಳು…
ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…
ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…