ಮದ್ದೂರು: ಮದ್ದೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಹಾಸ್ಟೆಲ್ ಅಧೀಕ್ಷಕ ಶಿವರಾಜು ಅವರ ಮನೆ ಹಾಗೂ ಫಾರ್ಮ್ ಹೌಸ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಮದ್ದೂರಿನ ಕೊಲ್ಲಿ ವೃತ್ತದ ಬಳಿಯ ವಿನಾಯಕ ಬಡಾವಣೆಯಲ್ಲಿರುವ ಶಿವರಾಜು ಅವರ ಮನೆ ಹಾಗೂ ಫಾರ್ಮ್ ಹೌಸ್‌ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿ ಕಾರ್ಯನಿರ್ವಹಿಸಿದ್ದ ಶಿವರಾಜು, ಸೋಮನಹಳ್ಳಿ ಹಾಗೂ ಬೆಸಗರಹಳ್ಳಿ ಹಾಸ್ಟೆಲ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ತಿಂಗಳಷ್ಟೇ ಅವರು ನಿವೃತ್ತರಾಗಿದ್ದರು.
ದಾಳಿ ವೇಳೆ ಹಾಸ್ಟೆಲ್ ಮಕ್ಕಳಿಗೆ ನೀಡಬೇಕಿದ್ದ ಪುಸ್ತಕಗಳು ಹಾಗೂ ಬೆಡ್‌ಶೀಟ್‌ಗಳನ್ನು ಫಾರ್ಮ್ ಹೌಸ್‌ನಲ್ಲಿ ಇಟ್ಟಿರುವುದು ಪತ್ತೆಯಾಗಿದೆ ಎನ್ನಲಾಗಿದೆ.
ಅಲ್ಲದೆ, ದುಬಾರಿ ಬೆಲೆಯ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಫಾರ್ಮ್ ಹೌಸ್‌ನಲ್ಲಿ ಮಿನಿ ಬಾರ್ ನಿರ್ಮಿಸಿಕೊಂಡಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಇದರ ಜೊತೆಗೆ ಚಿನ್ನ, ಬೆಳ್ಳಿ ಸೇರಿದಂತೆ ಬೆಲೆಬಾಳುವ ವಸ್ತುಗಳು ಕೂಡ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಅಕ್ರಮ ಆಸ್ತಿ ಗಳಿಕೆ ಬಗ್ಗೆ ಲೋಕಾಯುಕ್ತಕ್ಕೆ ಬಂದಿದ್ದ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಮಂಡ್ಯ ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ಹಾಗೂ ಲೋಕಾಯುಕ್ತ ಪೊಲೀಸ್ ಬಟ್ರಾಯಗೌಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಅಧಿಕಾರಿಗಳು ಮತ್ತಷ್ಟು ತನಿಖೆ ಮುಂದುವರಿಸಿದ್ದಾರೆ.
ಮಂಡ್ಯ: ನಗರದ ಗಾಂಧಿನಗರದಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಗಾಂಧಿನಗರ ನಿವಾಸಿ 47 ವರ್ಷದ ಪುರುಷೋತ್ತಮ್…
ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…
ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್…
ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…
ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ,…
ಶ್ರೇಯಸ್ ದೇವನೂರು ಅಭಿವೃದ್ಧಿಯ ಹೆಸರಿನಲ್ಲಿ ಅರ್ಧ ಕಾಮಗಾರಿ, ಸಂಚಾರದ ಹೆಸರಿನಲ್ಲಿ ಹೆಚ್ಚುತ್ತಿರುವ ಸಂಕಷ್ಟ ಮೈಸೂರು ದಸರಾ ಎಂದರೆ ಕೇವಲ ಹತ್ತು…