ಮಂಡ್ಯ: ಜಿಲ್ಲೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಬಗೆಯ ಆಹಾರಗಳನ್ನು ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟದ ಕಾರ್ಯದರ್ಶಿ ಚಂದನ್ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ಎನ್ನುವುದು ಸಂವಿಧಾನಕ್ಕೆ ವಿರದ್ಧವಾಗಿದ್ದು, ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರು ಮಾಂಸಾಹಾರವು ತಂಬಾಕು, ಮಧ್ಯದಂತೆಯೇ ದುಶ್ಚಟಗಳು ಎಂದು ಪರಿಬಿಂಭಿಸುವ ಪ್ರಯತ್ನ ನಡೆಸಿದ್ದು, ಮಾಂಸಾಹಾರ ನಿಕೃಷ್ಠವಲ್ಲ ಎಂದು ಪ್ರತಿರೋಧ ಒಡ್ಡುವ ಅವಶ್ಯಕತೆಯಿದೆ ಎಂದರು.
ಎಲ್ಲರ ಆಹಾರ ಸಂಸ್ಕೃತಿಯನ್ನು ಸಮಾನವಾಗಿ ಗೌರವಿಸಬೇಕು. ಆಹಾರ ಸಮಾನತೆ ಎಲ್ಲರೂ ಮನಗಾಣಬೇಕು. ಜಿಲ್ಲಾಡಳಿತ ಮಾಂಸಾಹಾರದ ಆಯೋಜನೆ ಮಾಡಬೇಕು. ಇಲ್ಲವಾದಲ್ಲಿ ಪ್ರಗತಿಪರ ಸಂಘಟನೆಗಳು ಸಂಘಟಿತವಾಗಿ ಮಾಂಸಾಹಾರ ಒದಗಿಸುವ ಕಾರ್ಯಕ್ಕೆ ಅಖಿಲ ಭಾರತ ವಕೀಲರ ಒಕ್ಕೂಟ ಕೈಜೋಡಿಸಲಿದೆ ಎಂಬ ಸಂದೇಶ ರವಾನಿಸಿದರು.
ಅಧ್ಯಕ್ಷ ವಕೀಲ ಬಿ.ಟಿ.ವಿಶ್ವನಾಥ್ ಮಾತನಾಡಿ, ಸಸ್ಯಹಾರ ಶ್ರೇಷ್ಟ, ಮಾಂಸಾಹಾರ ನಿಕೃಷ್ಠ ಎಂಬ ಸಣ್ಣನೆಯ ಪ್ರವಾಹ ಸೃಷ್ಠಿಯಾಗುತ್ತಿದೆ. ಕೋಮುವಾದ ದಳ್ಳೂರಿಯ ನಡುವೆ ಆಹಾರ ಕುರಿತಂತೆ ಬೀದಿ ದಾಳಿಗಳು ನಡೆಯುತ್ತಿವೆ. ಎಲ್ಲಿಯೂ ಮಾಸಹಾರ ನಿಶಿದ್ಧ ಎಂದು ಸಂವಿಧಾನದಲ್ಲಿ ಒಂದು ಪದವೂ ಇಲ್ಲ. ಈ ರೀತಿಯ ಬೇದಭಾವ ಸಲ್ಲದು ಎಂದು ಹೇಳಿದರು.
ಬಹುಸಂಖ್ಯಾತ ಮಾಂಸಹಾರಿಗಳಿಗೆ ಬೇದಭಾವ ತೋರಲಾಗುತ್ತಿದೆ. ಸಸ್ಯಹಾರ, ಮಾಂಸಹಾರ ಎರಡಕ್ಕೂ ಅವಕಾಶ ನೀಡಬೇಕು. ಮಾಂಸಾಹಾರದ ಪರವಾಗಿ ನಡೆಯುತ್ತಿರುವ ಚಳುವಳಿಯ ಮಾತುಗಳಿಗೆ ಪ್ರಭುತ್ವ ಸ್ಪಂಧಿಸಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನದ ಉಸ್ತುವಾರಿ ವಹಿಸಿರುವವರು ಹಾಗೂ ಪ್ರಭುತ್ವ ಆಹಾರ ಸಂಬಂಧ ಮನವಿಯನ್ನು ಗಮನಿಸಿ, ಧನಾತ್ಮಕ ನಿರ್ಧಾರವನ್ನು ಕೂಡಲೇ ಕೈಗೊಳ್ಳಬೇಕು. ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ಸದರಿ ಮನವಿಯನ್ನು ಮುಂದಿಟ್ಟು ಕಾರ್ಯಗತಗೊಳಿಸಲಾಗದಷ್ಟು ಅಶಕ್ತರೇ ಎಂಬ ಪ್ರಶ್ನೆ ಮೂಡದಂತೆ ಕ್ರಿಯಾಶೀಲತೆಯನ್ನು ತೋರಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿ ಜೆ.ರಾಮಯ್ಯ, ಒಕ್ಕೂಟದ ವಿದ್ಯಾರ್ಥಿ ನಾಯಕರುಗಳಾದ ಆಕಾಶ್, ಸುಚೀಂದ್ರ, ವಕೀಲರಾದ ಚೇತನ್, ಕಿಶೋರ್ ಇದ್ದರು.
ನ್ಯೂಯಾರ್ಕ್ : ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.…
ಹಾಸನ : ಕರ್ತವ್ಯದ ವೇಳೆ ಲಾರಿ ಡಿಕ್ಕಿಯಾಗಿ KSRTC ಬಸ್‌ನ ಚೆಕ್ಕಿಂಗ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು…
ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್ ಡಿಸೋಜ ಮಡಿಕೇರಿ: ಈ ಬಾರಿಯ…
ಭೇರ್ಯ ಮಹೇಶ್ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…
ದೊಡ್ಡ ಕವಲಂದೆ : ಗಬ್ಬೆದ್ದು ನಾರುತ್ತಿರುವ ಚರಂಡಿಯ ಕೊಳಚೆ ನೀರಿನಿಂದ ಗ್ರಾಮ ಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡು ತ್ತಿದ್ದು, ಗ್ರಾಮ…
ಸರಗೂರು : ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರು ತತ್ತರಿಸಿ ಆತಂಕದಲ್ಲಿದ್ದರೂ ನಿಯಂ ತ್ರಣ…