kuladalli keelyavudo
ಮಂಡ್ಯ: ಯೋಗರಾಜ್ ಸಿನಿಮಾಸ್ ಅರ್ಪಿಸುವ ಪರ್ಲ್ ಸಿನಿಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡ ನಗುವಿನೊಂದಿಗೆ ಮಾಸ್ ಅಂಶಗಳಿರುವ ಒಂದು ಉತ್ತಮ ಸಂದೇಶ ನೀಡುವ ಕುಲದಲ್ಲಿ ಕೀಳ್ಯಾವುದೋ ಚಲನಚಿತ್ರವು ಮೇ.೨೩ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಲನಚಿತ್ರದ ನಾಯಕನಟ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೇನೂರು ಮನು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೨.೭೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಚಲನಚಿತ್ರಕ್ಕೆ ಯೋಗರಾಜ್‌ಭಟ್ ಅವರ ಕಥೆ, ಸಾಹಿತ್ಯವಿದ್ದು, ಕೆ.ರಾಮ್‌ನಾರಾಯಣ್ ನಿರ್ದೇಶಿಸಿದ್ದಾರೆ ಎಂದರು.
ಬಹುತಾರಾಗಣ ಹೊಂದಿರುವ ಚಲನಚಿತ್ರದಲ್ಲಿ ಯೋಗರಾಜ್ ಭಟ್, ಸೋನಾಲ್ ಮೊಂತೆರೂ, ತಬಲನಾಣಿ, ಶರತ್‌ಲೋಹಿತಾಶ್ವ, ಡ್ರಾಗನ್ ಮಂಜು, ಜೇಡರಹಳ್ಳಿ ಕೃಷ್ಣಪ್ಪ, ಕರಿಸುಬ್ಬು, ಹರಿಶ್‌ರಾಜು, ಸೀನ, ನಾಗೇಂದ್ರ ಅರಸ್ ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ೫ ಹಾಡುಗಳಿರುವ ಚಲನಚಿತ್ರವು ರಾಮನಗರ, ಚನ್ನಪಟ್ಟಣ, ಸಕಲೇಶಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಶಿವಮೂರ್ತಿ, ಮಂಡ್ಯ ಮಂಜು, ಹೇಮಂತ್ ಇದ್ದರು.
ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬಳಿಕ…
ನಂಜನಗೂಡು: ಜಮೀನಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ರೈತ ದಂಪತಿಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಮಗು ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿರುವ…
ಹಿರಿಯ ರಂಗಕರ್ಮಿ ಹೆಗ್ಗೂಡು ಪ್ರಸನ್ನ ನೇತೃತ್ವದಲ್ಲಿ ನಡೆದ ಸಭೆ; ಸುರೇಂದ್ರ ಕೌಲಗಿ ಮತ್ತಿತರರು ಭಾಗಿ ನಂಜನಗೂಡು: ಮಹಾತ್ಮ ಗಾಂಧೀಯವರ ಸರ್ವೋದಯದ…
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 21ನೇ ಘಟಿಕೋತ್ಸವದ ಸಂಭ್ರಮ ಮನೆಮಾಡಿದ್ದು, ಒಟ್ಟು 8 ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್…
ಬೆಂಗಳೂರು: ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕು ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಶಾಲೆಗೆ…
ಬೀದರ್: ನಿಗೂಢ ವಸ್ತುವೊಂದು ಸ್ಫೋಟಗೊಂಡ ಪರಿಣಾಮ ಆರು ಮಕ್ಕಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ನಡೆದಿದೆ.…