ಮಂಡ್ಯ

ನಶಿಸಿ ಹೋದ ಇತಿಹಾಸ ಪರಿಚಯಿಸಿ ; ಇತಿಹಾಸ ತಜ್ಞ ರಾಜೇಂದ್ರಪ್ಪ

ಮಂಡ್ಯ:  ಜಿಲ್ಲೆಯು ಅದ್ಭುತ ದೇವಾಲಯ, ಶಾಸನ ಮತ್ತು ವೀರಗಲ್ಲುಗಳ ನೆಲೆಯಾಗಿದೆ. ಆದರೆ ಕೆಲವು ಕಡೆ ಅವುಗಳ ರಕ್ಷಣೆ ಸರಿಯಾಗಿ ಆಗುತ್ತಿಲ್ಲ. ವಿದ್ಯಾರ್ಥಿಗಳು ಅವುಗಳನ್ನು ರಕ್ಷಿಸಿ ಉಳಿಸುವ ಕೆಲಸಗಳನ್ನು  ಮಾಡಬೇಕು ಎಂದು ಬೆಂಗಳೂರು ಇತಿಹಾಸ ತಜ್ಞ ಡಾ. ಎಸ್ ರಾಜೇಂದ್ರಪ್ಪ ಸಲಹೆ ನೀಡಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಸೋಮವಾರ ಇತಿಹಾಸ ವಿಭಾಗವು ಏರ್ಪಡಿಸಿದ “ಕರ್ನಾಟಕ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ” ಎಂಬ ವಿಷಯದ ಕುರಿತು ರೂಸಾ 2.0 ಅಡಿಯಲ್ಲಿ ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ರೈಲು ನಿಲ್ದಾಣದ ಪಕ್ಕದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಬಲಭಾಗದ ಹಿಂಭಾಗಕ್ಕೆ 15ನೇ ಶತಮಾನದ ವೀರಗಲ್ಲು ಮಾಸ್ತಿಕಲ್ಲು ಇದೆ. ಜೊತೆಗೆ ಭಕ್ತರು ಎಣ್ಣೆ ದೀಪ ಪುಷ್ಪವನ್ನು ಇಟ್ಟು ಪೂಜೆ ಮಾಡುತ್ತಿದ್ದಾರೆ. ಪೇಟೆಯ ವೀರಪ್ಪನ ಗುಡಿ ವೀರಗಲ್ಲು ಕೂಡ ಇಂತಹ ಸ್ಥಿತಿಯಲ್ಲಿದೆ. ಇಂತಹ ನಶಿಸಿ ಹೋದ ಇತಿಹಾಸವನ್ನು ಪರಿಚಯಿಸಿ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆ ಗೆಜೆಟಿಯರ್ 2003 ರಲ್ಲಿ ಪ್ರಕಟವಾಗಿದ್ದು ಇದು ಮಂಡ್ಯ ಜಿಲ್ಲೆಯ ಪ್ರತಿಯೊಂದು ಊರಿನ ಮಾಹಿತಿ ಹೊಂದಿದೆ, ಜೊತೆಗೆ ಮಂಡ್ಯ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗಳು ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ವೈವಿಧ್ಯತೆಯ ವಿಷಯಗಳನ್ನು ಒಳಗೊಂಡಿದೆ. ಇಂತಹ ವಿಷಯಗಳನ್ನು ವಿದ್ಯಾರ್ಥಿಗಳು ಓದಿದರೆ ಜಿಲ್ಲೆಯ ಬಗ್ಗೆ ಸಂಪೂರ್ಣ ತಿಳುವಳಿಕೆ ಬರುತ್ತದೆ. ಜಿಲ್ಲೆಯಲ್ಲಿರುವ ಬೂದನೂರು, ಬಸರಾಳು, ಅರಕೆರೆ, ನಾಗಮಂಗಲ, ಸಿಂಧಘಟ್ಟ, ಕಿಕ್ಕೇರಿ ದೇವಾಲಯಗಳು ಹೊಯ್ಸಳರ ಅದ್ಭುತ ನೈಪುಣ್ಯತೆಯ ಇತಿಹಾಸವನ್ನು ಸಾರುವಂಥಹವು ಎಂದು ಹೇಳಿದರು.

ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಕೃಷ್ಣೇಗೌಡ ಹೆಚ್  ಮಾತನಾಡಿ, ಇಂದಿನ ಪೀಳಿಗೆಗೆ ಇತಿಹಾಸದ ಓದು, ಗ್ರಹಿಕೆ ಹಿಂದೆಂದಿಗಿಂತಲೂ ಇಂದು ಪ್ರಸ್ತುತವಾಗಿದೆ. ಭಾರತದ ಇತಿಹಾಸ ಪರಂಪರೆ,ಸಂಸ್ಕೃತಿ, ಶ್ರೇಷ್ಠತೆಯನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು.

ಅಮೆರಿಕ ಯುರೋಪ್ ದೇಶಗಳ ಇತಿಹಾಸಕ್ಕಿಂತಲೂ ನಿಮ್ಮ ಊರಿನ ನಿಮ್ಮ ರಾಜ್ಯದ, ರಾಷ್ಟ್ರದ ಇತಿಹಾಸ ತಿಳಿದುಕೊಳ್ಳುವುದು ಬಹಳ ಮುಖ್ಯ. ಆಗ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.

ಮದ್ದೂರಿನ ಸಮೀಪ ಇರುವ ನಾಯಿಶಾಸನ ಮನುಷ್ಯ ಮತ್ತು ಪ್ರಾಣಿ ನಡುವಿನ ಬದುಕನ್ನು ತಿಳಿಸುವ ಹೆಗ್ಗುರುತ್ತಾಗಿದೆ. ಇದೇ ರೀತಿ ಪ್ರತಿ ಶಾಸನ ಸ್ಮಾರಕಗಳು ಮಾನವನ ಬದುಕಿನ ಒಂದೊಂದು ಕಥೆ ಹೇಳುವ ಸಾಕ್ಷಿಗಳವಾಗಿವೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ ಪ್ರಭು ಕೆ ಮಾತನಾಡಿ, ವಿಜಯನಗರ ಸಾಮ್ರಾಜ್ಯ ಮತ್ತು ಅಶೋಕನ ಶಾಸನಗಳು ಭಾರತದ ಭವ್ಯ ಇತಿಹಾಸವನ್ನು ಹೇಳುವಂಥವು ಸ್ಮಾರಕ ಮತ್ತು ಶಾಸನಗಳ ಅಧ್ಯಯನದ ಮೂಲಕ ಆಳವಾದ ಇತಿಹಾಸವನ್ನು ತಿಳಿಯಬಹುದು. ಆಸ್ಟ್ರೇಲಿಯಾ ದೇಶದಲ್ಲಿ ಹೆಚ್ಚು ವಸ್ತು ಸಂಗ್ರಹಾಲಯಗಳಿವೆ ಅಲ್ಲಿ ಇತಿಹಾಸ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಆದರೆ ನಮ್ಮಲ್ಲಿ ಶಾಸನಗಳು ಅನಾಥವಾಗಿವೆ ಭಾರತದಲ್ಲಿ ಅವುಗಳನ್ನು ಉಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಎನ್ ಎಸ್ ರಂಗರಾಜು ,ಇತಿಹಾಸಕಾರರಾದ  ಮೊಹಮ್ಮದ್ ಖಲೀಮ್ ಮುಲ್ಲಾ, ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶಿವರಾಮು ಎಸ್, ಸಹ ಪ್ರಾಧ್ಯಾಪಕ ಡಾ. ಕವಿತಾ ಕೆಎಂ, ಸಹಾಯಕ ಪ್ರಾಧ್ಯಾಪಕ ಶಾಂತರಾಜು ಟಿ ಎನ್. ಪತ್ರಾಂಕಿತ ವ್ಯಸ್ಥಾಪಕ ರವಿಕಿರಣ್ ಕೆಪಿ. ಹೇಮಲತಾ.ರೂಸಾ 2.0 ಸಂಯೋಜಕರಾದ ಡಾ. ಮಂಗಳಮ್ಮ ಕೆ ಎಂ. ಉಪನ್ಯಾಸಕರಾದ ಪ್ರಕಾಶ್ ಜಿಜೆ ಪೂರ್ಣಿಮಾ ಹಾಜರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಕೇರ್ ಟೇಕರ್ ಕೆಲಸಕ್ಕೆ ಸೇರಿ ಮನೆ ದರೋಡೆ; ಆರೋಪಿ ಬಂಧನ

ಮಡಿಕೇರಿ: ವಯೋವೃದ್ಧರೊಬ್ಬರ ಮನೆಯಲ್ಲಿ ಹೋಂ ನರ್ಸಿಂಗ್(ಕೇರ್ ಟೇಕರ್) ಕೆಲಸಕ್ಕೆಂದು ಸೇರಿಕೊಂಡು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ…

45 mins ago

ಮಹದೇಶ್ವರ ಬೆಟ್ಟ : ವಿವಿಧ ಸೇವೆಗಳಿಂದ 1.16 ಕೋಟಿ ಸಂಗ್ರಹ

ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಎರಡನೇ ಶನಿವಾರ ಹಾಗೂ ಯುಗಾದಿ ಜಾತ್ರಾ…

55 mins ago

ಹೊರ್ಮುಜ್‌ ಜಲಸಂಧಿ ಶತ್ರುಗಳಿಗೆ ಮಾತ್ರ ಮುಚ್ಚಿದೆ : ಇರಾನ್

ಟೆಹ್ರಾನ್ : ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆಯೂ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಶತ್ರು ರಾಷ್ಟ್ರ ಮತ್ತು…

2 hours ago

ಹುಣಸೂರು | ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆ

ಹುಣಸೂರು : ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿ ಸೇರಿದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಗುಡುಗು-ಸಿಡಿಲು…

2 hours ago

ಕುಕ್ಕರಹಳ್ಳಿ ಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ ; ಪ್ರತಿಭಟನೆ

ಮೈಸೂರು : ಕುಕ್ಕರಹಳ್ಳಿ ಕೆರೆಯ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಪರಿಸರ ಸಂರಕ್ಷಿಸಿ ಹೋರಾಟ ಸಮಿತಿ ವತಿಯಿಂದ ಕುಕ್ಕರಹಳ್ಳಿ…

2 hours ago

2 ಸಾವಿರ ಬೋಧಕ ಹುದ್ದೆಗಳಿಗೆ ನೇಮಕಾತಿ : ಉನ್ನತ ಶಿಕ್ಷಣ ಸಚಿವ ಸುಧಾಕರ್‌

ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಎಂಜಿನಿಯರಿಂಗ್ ಕಾಲೇಜು ಹಾಗೂ ವಿವಿಯಲ್ಲಿ ಖಾಲಿ ಇರುವ…

2 hours ago