ಮಂಡ್ಯ

ಅಂತರ್‌ಜಿಲ್ಲಾ ಕಳ್ಳನ ಬಂಧನ ; ಆರೋಪಿಯಿಂದ 490 ಗ್ರಾಂ ಚಿನ್ನ, ರೂ.40 ಲಕ್ಷ ವಶಕ್ಕೆ

ಮಂಡ್ಯ: ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ಹಾಗೂ ನಗದು ದೋಚುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸಿರುವ ನಾಗಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು, ೪೯೦ ಗ್ರಾಂ ಚಿನ್ನದ ವಡವೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ ೪೦ ಲಕ್ಷ ರೂ.ಗಳಾಗಿದೆ.

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಮುದಿಗೆರೆ ಗ್ರಾಮದ ಎಂ.ವಿ.ರಂಗೇಗೌಡ ಉ.ಸಂತೋಷ ಅಲಿಯಾಸ್ ಐಪಿಎಲ್ ಸಂತೋಷ (೩೭) ಬಂಽತ ಆರೋಪಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇ ೨೦ರಂದು ನಾಗಮಂಗಲ ತಾಲ್ಲೂಕಿನ ಬಿದರಕೆರೆ ಗ್ರಾಮದ ಗಂಗೇಗೌಡ ಎಂಬವರು ಬಿಂಡಿಗನವಿಲೆ ಪೊಲೀಸ್ ಠಾಣೆಗೆ ಬಂದು ಮೇ ೧೮ರಂದು ಮನೆಯ ಬೀಗ ತೆಗೆದು ಬೀರುವಿನಲ್ಲಿದ್ದ ಸುಮಾರು ೨೦ ಗ್ರಾಂ ಚಿನ್ನಾಭರಣ ಮತ್ತು ೯೭ ಸಾವಿರ ರೂ. ನಗದನ್ನು ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದರು.

ಈ ಪ್ರಕರಣ ಭೇದಿಸಲು ಅಪರ ಪೊಲೀಸ್ ಅಧಿಕ್ಷಕರಾದ ಸಿ.ಇ. ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್ಪಿ ಬಿ.ಚಲುವರಾಜು ಅವರ ಮಾರ್ಗದರ್ಶನದಲ್ಲಿ ನಾಗಮಂಗಲ ಗ್ರಾಮಾಂತರ ಠಾಣೆಯ ಸಿಪಿಐ ಕೆ.ಎಸ್.ನಿರಂಜನ, ಪಿಎಸ್‌ಐಗಳಾದ ವೈ.ಎನ್. ರವಿಕುಮಾರ್, ಟಿ.ಮಾರುತಿ, ಪ್ರಶಾಂತ್ ಕುಮಾರ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಅದರಂತೆ ಜೂ.೧ರಂದು ಹಾಸನದಲ್ಲಿದ್ದ ಆರೋಪಿ ಸಂತೋಷನನ್ನು ಬಂಧಿಸಿ, ವಿಚಾರಣೆ ಮಾಡಲಾಗಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದರು.

ಆರೋಪಿ ಸಂತೋಷ್ ವಿರುದ್ಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ೩, ಬೆಳ್ಳೂರು ಠಾಣೆಯಲ್ಲಿ ೪, ನಾಗಮಂಗಲ ಗ್ರಾಮಾಂತರ ೧, ತುರುವೇಕೆರೆ ಠಾಣೆ ೧, ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಹಲವು ಬಾರಿ ಸೆರೆವಾಸ ಅನುಭವಿಸಿದ್ದರೂ ಹೊರಬಂದ ನಂತರ ಐಷಾರಾಮಿ ಜೀವನ ನಡೆಸಲು ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದನು ಎಂದು ಹೇಳಿದರು.

ಪೊಲೀಸ್ ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್, ಮಧು ಕುಮಾರ, ಇಂದ್ರಕುಮಾರ್, ರವಿಕಿರಣ್, ಲೋಕೇಶ್, ದಿನೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಶ್ಲಾಘಿಸಿದರು.

ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ
ಮಂಡ್ಯ ನಗರದ ಹಲವು ಕಡೆ ಸಿಸಿ ಕ್ಯಾಮೆರಾಗಳನ್ನು ಈಗಾಗಲೇ ಅಳವಡಿಸಲಾಗಿದ್ದು, ಇನ್ನೂ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದರಿಂದಾಗಿ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಬಹುದಾಗಿದೆ. ಮಳವಳ್ಳಿ ಪಟ್ಟಣದಲ್ಲಿ ೧೦೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದೇ ರೀತಿ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಆಂದೋಲನ ಡೆಸ್ಕ್

Recent Posts

ಪಿರಿಯಾಪಟ್ಟಣ: ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ಪಿರಿಯಾಪಟ್ಟಣ: ಮೈಸೂರು ಜಿಲ್ಲೆಯ ಹಲವೆಡೆ ವರ್ಷದ ಮೊದಲ ಮಳೆಯಾಗುತ್ತಿದ್ದು, ಪಿರಿಯಾಪಟ್ಟಣದಲ್ಲಿ ಸಿಡಿಲು ಬಡಿದು ತೆಂಗಿನ ಮರ ಧಗಧಗನೇ ಹೊತ್ತಿ ಉರಿದಿದೆ.…

5 mins ago

ಸರಗೂರು: ಚಿಕ್ಕದೇವಮ್ಮನ ಬೆಟ್ಟದಲ್ಲಿ ಯುಗಾದಿ ಜಾತ್ರೆಗೆ ಸಿದ್ಧತೆ

ಸರಗೂರು: ಕ್ಷೇತ್ರದ ಆದಿ ದೇವತೆ ಇಟ್ನಾ ಗ್ರಾಮದ ಶ್ರೀ ಚಿಕ್ಕದೇವಮ್ಮ ಬೆಟ್ಟದ ಯುಗಾದಿ ಹಬ್ಬದ ಜಾತ್ರಾ ಮಹೋತ್ಸವ ಮಾರ್ಚ್.19ರ ಯುಗಾದಿಯಂದು…

12 mins ago

ವಿಧಾನಸಭೆಯಲ್ಲಿ ಅಚ್ಚರಿಯ ಪ್ರಸಂಗ: ಸ್ಪೀಕರ್‌ ಯು.ಟಿ.ಖಾದರ್‌ ಸಭಾತ್ಯಾಗ

ಬೆಂಗಳೂರು: ವಿಧಾನಸಭೆಯಲ್ಲಿ ಅಪರೂಪದ ಅಚ್ಚರಿಯ ಪ್ರಸಂಗ ನಡೆದಿದ್ದು, ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಗರಂ ಆದ ಸ್ಪೀಕರ್‌ ಯು.ಟಿ.ಖಾದರ್‌ ಅವರು…

16 mins ago

ಮೈಸೂರಿನ ಫುಟ್‌ಪಾತ್‌ನಲ್ಲಿ ಅವೈಜ್ಞಾನಿಕ ಟಾಂಗಾ ಸ್ಟ್ಯಾಂಡ್‌ ನಿರ್ಮಾಣ: ಪಾಲಿಕೆ ನಡೆಗೆ ಸಾರ್ವಜನಿಕರ ಆಕ್ರೋಶ

ಮೈಸೂರು: ನಿತ್ಯ ಸಾವಿರಾರು ಜನರು ಓಡಾಡುವ ಫುಟ್‌ಪಾತ್‌ನಲ್ಲಿ ಈಗ ಅವೈಜ್ಞಾನಿಕ ಟಾಂಗಾ ಸ್ಟ್ಯಾಂಡ್‌ ನಿರ್ಮಾಣ ಮಾಡಲು ಮುಂದಾಗುತ್ತಿದ್ದು, ಪಾಲಿಕೆ ನಡೆಗೆ…

56 mins ago

ಒಳಮೀಸಲಾತಿ ವಿಚಾರದಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯ ಆರೋಪ: ಜಿಲ್ಲಾ ಬಲಗೈ ಸಮುದಾಯದ ಒಕ್ಕೂಟ ಪ್ರತಿಭಟನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಒಳಮೀಸಲಾತಿ ವಿಚಾರದಲ್ಲಿ ನಾಗಮೋಹನ್ ದಾಸ್ ನೀಡಿರುವ ವರದಿಯು ಅವೈಜ್ಞಾನಿಕವಾಗಿದ್ದು ಹಂಚಿಕೆ…

1 hour ago

ಮಹದೇಶ್ವರ ಬೆಟ್ಟ: ಪಾದಯಾತ್ರಿಕರಿಗೆ ಭಯ ಹುಟ್ಟಿಸಿದ ಕಾಡಾನೆಗಳ ಹಿಂಡು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಜ್ಯದ ಪ್ರಸಿದ್ಧ ಕಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

1 hour ago