ಮಂಡ್ಯ

ಯಮ ಬಂದು ಕರೆದರೆ ಅಮ್ಮನ ಕೆಲಸ ಮುಗಿಸಿ ಬರುತ್ತೇನೆ ಎಂದು ಹೇಳುತ್ತೇನೆ; ಸುಮಲತಾ ಪರ ದರ್ಶನ್‌ ಬ್ಯಾಟಿಂಗ್‌

ಮಂಡ್ಯ: ಸಂಸದೆ ಸುಮಲತಾಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಕೈತಪ್ಪಿದ ಹಿನ್ನೆಲೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಗಳು ಎದ್ದಿದ್ದವು. ಎಲ್ಲರ ಕುತೂಹಲಕ್ಕೆ ಇಂದು ( ಏಪ್ರಿಲ್‌ 3 ) ಸುಮಲತಾ ತಮ್ಮ ನಿಲುವನ್ನು ಬಹಿರಂಗಪಡಿಸುವ ಮೂಲಕ ತೆರೆಎಳೆದಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ, ಆದರೆ ಮಂಡ್ಯವನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ ಎಂದು ಸುಮಲತಾ ಅಂಬರೀಶ್‌ ಹೇಳಿದ್ದಾರೆ. ನಗರದ ಕಾಳಿಕಾಂಬ ದೇವಾಲಯದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಸುಮಲತಾ ಈ ನಿರ್ಧಾರವನ್ನು ಪ್ರಕಟಿಸಿದರು.

ಇನ್ನು ಕಳೆದ ಬಾರಿಯ ಚುನಾವಣೆಯಲ್ಲಿ ಸುಮಲತಾ ಅವರಿಗೆ ತೀವ್ರ ಬೆಂಬಲವನ್ನು ನೀಡಿದ್ದ ನಟ ದರ್ಶನ್‌ ಸಹ ಈ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು. ʼನನ್ನ ಸೆಲೆಬ್ರಿಟಿಗಳಿಗೆ, ಹಿರಿಯರಿಗೆ ನಮಸ್ಕಾರ. ಇದೇ ಐದು ವರ್ಷಗಳ ಹಿಂದೆ ಪ್ರಚಾರ ಮಾಡಲು ಬಂದಾಗ ಎಲ್ಲಾ ರೈತರು ಎಳೆನೀರು ಕೊಟ್ಟು ನನ್ನನ್ನು ತಣ್ಣಗೆ ಮಾಡಿದ್ದರು. ಅವರಿಗೆ ಧನ್ಯವಾದ. ಆರತಿ ಬೆಳಗಿದ ತಾಯಂದಿರಿಗೂ ನನ್ನ ಧನ್ಯವಾದʼ ಎಂದು ದರ್ಶನ್‌ ಮೊದಲಿಗೆ ಕಡೆಯ ಚುನಾವಣಾ ಪ್ರಚಾರದ ಸಂದರ್ಭವನ್ನು ಮೆಲುಕು ಹಾಕಿದರು.

ʼಯಮ ಕರೆದರೆ ಅಮ್ಮನ ಕೆಲಸ ಇದೆ ಮುಗಿಸಿ ಬರುತ್ತೇನೆ ಎಂದು ಎಂದು ಹೇಳುತ್ತೇನೆ. ಅವರ ಕುಟುಂಬದ ಜತೆಗಿನ ಬಾಂಧವ್ಯ ಅಂತಹದ್ದು. ಇವತ್ತು ಕೈಗೆ ಆಪರೇಷನ್‌ ಇತ್ತು. ಆದರೆ ಅಮ್ಮನ ಕೆಲಸ ಇದೆ ಎಂದು ಹೇಳಿ ಬಂದಿದ್ದೇನೆ. ಇಂದು ಸಂಜೆ ಅಡ್ಮಿಟ್‌ ಆಗಿ, ನಾಳೆ ಆಪರೇಷನ್‌ ಮಾಡಿಸಿಕೊಳ್ಳುತ್ತೇನೆʼ ಎಂದರು.

ʼಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ ನಾನು ಅವರ ಹಿಂದೆ ಇರುತ್ತೇನೆ. ತಾಯಿ ತಾಯಿನೇ. ಏನೇ ಹೇಳಿದ್ರೂ ನಾನು ಮಾಡುತ್ತೇನೆ. ಹಾಳು ಬಾವಿಗೆ ಬೀಳು ಅಂದ್ರೂ ಬೀಳುತ್ತೇನೆ. ನಾನು ಮತ್ತು ನನ್ನ ತಮ್ಮ ಅವರ ಮಾತಿಗೆ ಬದ್ಧವಾಗಿರುತ್ತೇವೆʼ ಎಂದು ಮಾತನಾಡಿದರು.

andolana

Recent Posts

ಸಿಇಟಿ ಕೇಂದ್ರದಲ್ಲಿ ಜನಿವಾರ ತೆಗೆಸಿದ ಸಿಬ್ಬಂದಿ ವಿರುದ್ಧ ಕ್ರಮ: ಸಚಿವ ಸುಧಾಕರ್‌

ಬೆಂಗಳೂರು: ಸಿಇಟಿ ಕೇಂದ್ರದಲ್ಲಿ ಜನಿವಾರ ತೆಗೆಸಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌…

6 hours ago

ರಾಜ್ಯ ಸಂಚಾರ ಪೊಲೀಸರ ಆರೋಗ್ಯ ರಕ್ಷಣೆಗೆ ಕ್ರಮ: ಮಾಸ್ಕ್‌ ನೀರು, ನೆರಳಿನ ವ್ಯವಸ್ಥೆಗೆ ಸೂಚನೆ

ಬೆಂಗಳೂರು: ರಾಜ್ಯದ ವಿವಿಧ ನಗರಗಳಲ್ಲಿ ಸುಡುತ್ತಿರುವ ಬಿಸಿಲು ಮತ್ತು ಹೆಚ್ಚುತ್ತಿರುವ ಧೂಳಿನ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಪೊಲೀಸರ ನೆರವಿಗೆ…

6 hours ago

ಚಲುವಾಂಬ ಆಸ್ಪತ್ರೆಯಲ್ಲಿ ಮಗು ಸಾವು ಪ್ರಕರಣ: ಸಂಸದ ಯದುವೀರ್‌ ಒಡೆಯರ್‌ ಪ್ರತಿಕ್ರಿಯೆ.!

ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ…

6 hours ago

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು: ಓರ್ವ ಸಾವು: 10ಕ್ಕೂ ಹೆಚ್ಚು ಮಂದಿಗೆ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ…

6 hours ago

ಒಳಮೀಸಲಾತಿ ಹಂಚಿಕೆಗೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಬೆಂಗಳೂರು: ಒಳಮೀಸಲಾತಿ ಬಗ್ಗೆ ಹಲವು ವರ್ಷಗಳಿಂದ ಇದ್ದ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆರೆ ಎಳೆದಿದೆ. ಸಿಎಂ ಸಿದ್ದರಾಮಯ್ಯ…

10 hours ago

ಸೋಮವಾರಪೇಟೆ: ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ

ಸೋಮವಾರಪೇಟೆ: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿನ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.…

11 hours ago