ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ಕೆ.ಆರ್.ಎಸ್ ಜಲಾಶಯ ಭರ್ತಿಯಾಗುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ನೀರನ್ನು ನದಿಗಳಿಗೆ ಹರಿಸಲಾಗುವುದು. ಹೀಗಾಗಿ ನದಿಪಾತ್ರದಲ್ಲಿ ನೆರೆ ಉಂಟಾಗುವ ಪರಿಸ್ಥಿತಿ ಬಂದಲ್ಲಿ ಪ್ರವಾಹ ಎದುರಿಸಲು ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ – 53 ಗ್ರಾಮ, ಪಾಂಡವಪುರ ತಾಲ್ಲೂಕಿನ – 15 ಗ್ರಾಮ, ಮಳವಳ್ಳಿ ತಾಲ್ಲೂಕಿನ – 21 ಗ್ರಾಮ ಹಾಗೂ ಹೇಮಾವತಿ ಜಲಾನಯನ ಪ್ರದೇಶದ ಕೆ.ಆರ್ ಪೇಟೆ ತಾಲ್ಲೂಕಿನ – 03 ಗ್ರಾಮಗಳು ಸೇರಿ ಒಟ್ಟು – 92 ಗ್ರಾಮಗಳನ್ನು ನೆರೆ/ಪ್ರವಾಹ ಉಂಟಾಗುವ ಗ್ರಾಮಗಳೆಂದು ಗುರುತಿಸಲಾಗಿದ್ದು, ಮುನ್ನೆಚ್ಚರಿಕೆಯಾಗಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ಗಳನ್ನು ರಚಿಸಲಾಗಿದೆ.
ಸಾರ್ವಜನಿಕರು ನೆರೆ / ಪ್ರವಾಹದ ಬಗ್ಗೆ ದೂರು ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ ಸಂಖ್ಯೆ – 08232-224655, ಮಂಡ್ಯ ತಾಲ್ಲೂಕು ಕಛೇರಿ – 08232-291655, ಮದ್ದೂರು ತಾಲ್ಲೂಕು ಕಛೇರಿ – 08232-291466, ಮಳವಳ್ಳಿ ತಾಲ್ಲೂಕು ಕಛೇರಿ – 08231-242267, ಪಾಂಡವಪುರ ತಾಲ್ಲೂಕು ಕಛೇರಿ – 08236-255128, ಶ್ರೀರಂಗಪಟ್ಟಣ ತಾಲ್ಲೂಕು ಕಛೇರಿ – 08236-253001, ನಾಗಮಂಗಲ ತಾಲ್ಲೂಕು ಕಛೇರಿ – 08234-298105, ಕೆ.ಆರ್ ಪೇಟೆ ತಾಲ್ಲೂಕು ಕಛೇರಿ – 08230-262227 ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.
ಕಾವೇರಿ ನೀರಾವರಿ/ಹೆಚ್.ಎಲ್.ಬಿ.ಸಿ. ಯಲ್ಲಿಯೂ ಕಂಟ್ರೋಲ್ ರೂಂ ಅನ್ನು ಸ್ಥಾಪಿಸಲಾಗಿದ್ದು, ಕೆ ಆರ್ ಸಾಗರ ಕಾರ್ಯಪಾಲಕ ಅಭಿಯಂತರರು – 08236-257976, ಬನ್ನೂರು ಕಾರ್ಯಪಾಲಕ ಅಭಿಯಂತರರು – 9480442830, ಮಂಡ್ಯ ಕಾರ್ಯಪಾಲಕ ಅಭಿಯಂತರರು – 9742454353, ಕೆ.ಆರ್ ಪೇಟೆ ಹೆಚ್.ಎಲ್.ಬಿ.ಸಿ ಕಾರ್ಯಪಾಲಕ ಅಭಿಯಂತರರು – 9242229448 ಸಹಾಯವಾಣಿಗಳಾಗಿವೆ.
ಚೆಸ್ಕಾಂ ಟೋಲ್ ಫ್ರೀ ನಂಬರ್ – 1912, 9448994777/888/999, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಕಾರ್ಯಪಾಲಕ ಅಭಿಯಂತರರು 9448994893, ಮಳವಳ್ಳಿ ಕಾರ್ಯಪಾಲಕ ಅಭಿಯಂತರರು – 9448994828, ಕೆ.ಆರ್ ಪೇಟೆ ಕಾರ್ಯಪಾಲಕ ಅಭಿಯಂತರರು – 9480844740 ಸಹಾಯವಾಣಿಗಳಾಗಿದ್ದು, ಇವುಗಳನ್ನು ಸಂಪರ್ಕಿಸಿ ಪ್ರವಾಹಗಳ ಬಗ್ಗೆ ಮಾಹಿತಿ ನೀಡಬಹುದಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…