ಮಂಡ್ಯ : ಕೆರಗೋಡು ಹನುಮನ ಧ್ವಜ ತೆರವು ರಾಜ್ಯಾದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಧ್ವಜ ತೆರವುಗೊಳಿಸಿದ ಸಂದರ್ಭ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ ಕೆ.ಆರ್ ಪೇಟೆ ಪಟ್ಟಣದ ಟಿಬಿ ವೃತ್ತದಲ್ಲಿ ಹಾರಿಸಿದ್ದ ಭಗವಾಧ್ವಜ ಹಾಗೂ ಅಳವಡಿಸಲಾಗಿದ್ದ ಮಹನೀಯ ಫ್ಲೆಕ್ಸ್ ಅನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇದನ್ನ ವಿರೋಧಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಟಿಬಿ ವೃತ್ತದ ಹತ್ತಾರು ವರ್ಷಗಳಿಂದ ಭಗವಾಧ್ವಜ ಹಾರುತ್ತಿತ್ತು. ಕೆಲ ದಿನಗಳ ಹಿಂದೆ ಪುರಸಭೆ ಧ್ವಜ ತೆರವುಗೊಳಿಸಿತ್ತು. ಹಿಂದೂ ಕಾರ್ಯಕರ್ತರು ಶನಿವಾರ ಮತ್ತೆ ಭಗವಾಧ್ವಜ ಹಾರಿಸಿದ್ದರು. ಇದರ ಜೊತೆಗೆ ಕೆಂಪೇಗೌಡ, ಡಾ.ಬಿ ಆರ್ ಅಂಬೇಡ್ಕರ್, ಸಂಗೊಳ್ಳಿರಾಯಣ್ಣ, ಬಸವಣ್ಣ ವಿಶ್ವಕರ್ಮ ಮಡಿವಾಳ ಮಾಚಯ್ಯನವರು, ಆಧ್ಯವಚನಕಾರ ದೇವರ ದಾಸಿಮಯ್ಯ ಸೇರಿ ಹಲವು ಮಹನೀಯರ ಭಾವಚಿತ್ರ ಕಳಸ ಆಕಾರದ ಪ್ಲೆಕ್ಸ್ ಅಳವಡಿಸಿದ್ದರು. ಆದರೆ ತಡರಾತ್ರಿ ಪುರಸಭೆ ಅಧಿಕಾರಿಗಳು ಯಾರಿಗೂ ಮಾಹಿತಿ ನೀಡದೇ ಪೋಲಿಸ್ ಭದ್ರತೆಯಲ್ಲಿ ಭಗವಾಧ್ವಜ ಜೊತೆಗೆ ಧ್ವಜಕಂಬವನ್ನೂ ತೆರವು ಮಾಡಿದ್ದಾರೆ. ಜೊತೆಗೆ ಮಹನೀಯರ ಪ್ಲೆಕ್ಸ್ ಕೂಡ ತೆರವು ಮಾಡಿದ್ದಾರೆ.
ಈ ಸಂಬಂಧ ಅಧಿಕಾರಿಗಳ ನಡೆ ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಬೆಳ್ಳಂಬೆಳಗ್ಗೆ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು : ಇತ್ತೀಚಿಗೆ ನಗರದ ಅರಮನೆ ಸಮೀಪದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಪೋಟ ಘಟನೆಗೆ ಸಂಬಂಧಿದಂತೆ, ಸಾರ್ವಜನಿಕ ಶಾಂತಿ, ಸುರಕ್ಷತೆ…
ಕೊಲಂಬೊ : ಐಸಿಸಿ ಪುರುಷರ ಟಿ20 ವರ್ಲ್ಡ್ ಕಪ್ 2026ರಲ್ಲಿ ಪಾಕಿಸ್ತಾನ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನಮೀಬಿಯಾವನ್ನು…
ನವದೆಹಲಿ: ಎಂ.ಎಂ.ನರವಣೆ ಅವರ ಅಪ್ರಕಟಿತ ಪುಸ್ತಕದ ಕುರಿತು ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ಲೇಖನದ ಪ್ರತಿಯನ್ನು ರಾಹುಲ್ ಗಾಂಧಿ ಸದನದಲ್ಲಿ ಪ್ರದರ್ಶಿಸಿದರು. ಈ…
ಹೊಸದಿಲ್ಲಿ : ಗೂಗಲ್ ಸಿಇಒ ಸುಂದರ್ ಪಿಚೈ ಅವರು ಭಾರತದ ಕೃತಕ ಬುದ್ಧಿಮತ್ತೆ (AI) ಪ್ರಯಾಣವು "ಅಸಾಧಾರಣ" ಆಗಿರುವುದಾಗಿ ಹೇಳಿದ್ದಾರೆ.…
ಹನೂರು : ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಬುಧವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ…
ನವದೆಹಲಿ: ಭಾರತ್ ಜೋಡೋ ಯಾತ್ರೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತೀಯ ಸೇನೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ…