ಮಂಡ್ಯ

ಸಂವಿಧಾನ ಮಹತ್ವ ಬಿಜೆಪಿ, ಆರ್.ಎಸ್.ಎಸ್‌ಗೆ ಗೊತ್ತಿದೆಯೋ ; ಸಚಿವ ಎನ್ ಚೆಲುವರಾಯಸ್ವಾಮಿ

ಮಂಡ್ಯ : ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಇವರ ಬೆಂಬಲಕ್ಕೆ ನಿಂತಿರುವ ರಾಷ್ಟ್ರೀಯ ಸ್ವಯಂಸೇವಾ ಸಂಘದವರು ಸಂವಿಧಾನ ಒಪ್ಪುತ್ತಾರೆ, ವಿರೋಧವನ್ನು ಮಾಡುತ್ತಾ ಬರುತ್ತಾರೆ. ಇದನ್ನು ನೋಡಿದರೆ ಇವರಿಗೆ ಸಂವಿಧಾನದ ಮಹತ್ವ ಗೊತ್ತಿದೆಯೋ ಗೊತ್ತಿಲ್ಲವೊ ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಸಂದೇಹ ವ್ಯಕ್ತಪಡಿಸಿದರು.

ಮಂಡ್ಯ ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಮಂಡ್ಯ ಜಿಲ್ಲಾ ಬುದ್ಧಿಸ್ಟ್ ಒಕ್ಕೂಟ, ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಬೌದ್ಧ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸಮಾನತೆಯ ಬದುಕಿಗಾಗಿ ಹೋರಾಟ ನಡೆದಿದೆ, ಮಹನೀಯರು ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ ಆದರೆ ಸಮಾನತೆಯ ಹೋರಾಟದಲ್ಲಿ ಎಂದು ಸಹ ಗುರುತಿಸಿಕೊಂಡಿರದವರು ಜಾತ್ಯತೀತ ವ್ಯವಸ್ಥೆ, ಸಮಾನತೆ ಪ್ರತಿಪಾದಿಸುವ ಬುದ್ಧಿಜೀವಿಗಳು ಹಾಗೂ ಶೋಷಿತರ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಸದಾಕಾಲ ಟೀಕಿಸುತ್ತಾ ಬಂದಿದ್ದಾರೆ, ಜನತೆ ಇತಿಹಾಸ ಅರಿಯದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಹಾಗಾಗಿ ಈಗಲೇ ಎಚ್ಚೆತ್ತು ಇತಿಹಾಸವನ್ನು ಅರಿಯಬೇಕೆಂದರು.

ಸಾಮಾಜಿಕ ಪಿಡುಗಾಗಿದ್ದ ಅಸ್ಪೃಶ್ಯತೆ ಸಂಪೂರ್ಣವಾಗಿ ನಿರ್ಮೂಲನೆ ಯಾಗದಿದ್ದರೂ ಅದರ ಪರಿಣಾಮ ತಗ್ಗಿದೆ ಇದಕ್ಕೆ ಸಂವಿಧಾನ ಕಾರಣ, ಅಸ್ಪೃಶ್ಯತೆ ಪ್ರಶ್ನಿಸುವ ಹಕ್ಕು ಎಲ್ಲರಿಗೂ ದೊರೆತಿದೆ. ಶೋಷಿತರು ಸಮಾಜದ ಮುಖ್ಯ ವಾಹಿನಿಯಲ್ಲಿ ಬದುಕು ಮುನ್ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ರಚಿಸಿರುವ ಸಂವಿಧಾನವೇ ಪ್ರಮುಖ ಎಂಬುದನ್ನ ಪ್ರತಿಯೊಬ್ಬರು ತಿಳಿಯಬೇಕು ಎಂದರು.

ದೇಶದ ಇತಿಹಾಸ, ಸಂವಿಧಾನ, ಜನರ ಹಿತ ಕಾಪಾಡುವ ಕಾಳಜಿ ಹೊಂದಿಲ್ಲದಿದ್ದರೆ ನನ್ನನ್ನು ಸಹ ಟೀಕಿಸಿ, ಯಾರೇ ತಪ್ಪು ಮಾಡಿದರೂ ತಪ್ಪೇ, ತಪ್ಪನ್ನು ಸಹಿಸಿಕೊಳ್ಳುವುದು ಸಹ ಅಪರಾಧ, ಇದರಲ್ಲಿ ಪಕ್ಷ,ವ್ಯಕ್ತಿ ಮುಖ್ಯವಲ್ಲ, ತಪ್ಪನ್ನು ಸರಿಪಡಿಸುವ ಕೆಲಸವಾಗಬೇಕು ಆ ನಿಟ್ಟಿನಲ್ಲಿ ಜನತೆ ಮುನ್ನಡೆಯಬೇಕು ಎಂದರು.

ಬೌದ್ಧಧಮ್ಮಕ್ಕೆ ತನ್ನದೇ ಆದ ವಿಶೇಷ ಮಹತ್ವ ಇದೆ, ಎಲ್ಲಾ ಧರ್ಮಗಳಿಗಿಂತ ವಿಭಿನ್ನವಾದ ಧಮ್ಮ ವಾಗಿದ್ದು, ಯಾವುದೇ ಜಾತಿಗೆ ಸೀಮಿತವಾದುದಲ್ಲ, ಎಲ್ಲರೂ ಪ್ರೀತಿಸುವ ಧಮ್ಮ ವಾಗಿದೆ, ಅಂಬೇಡ್ಕರ್ ಅವರು ಹಿಂದೂ ಧರ್ಮದಲ್ಲಿನ ಅಸಮಾನತೆಯ ಬಗ್ಗೆ ಅಧ್ಯಯನ ಮಾಡಿ ಯಾವುದು ಸರಿ ಹೋಗುವುದಿಲ್ಲ ಎಂದು ಅರಿತ ನಂತರ ಬೌದ್ಧ ಧಮ್ಮವನ್ನು ಸ್ವೀಕಾರ ಮಾಡಿದರು, ಅಂತಹ ಜ್ಞಾನಿ ಮಾರ್ಗ ನಮ್ಮೆಲ್ಲರಿಗೂ ಅವಶ್ಯಕ, ಅಂಬೇಡ್ಕರ್ ರವರ ಮಾರ್ಗದರ್ಶನದಂತೆ ಬದಲಾವಣೆ ಮುಖ್ಯ ನಾವೆಲ್ಲರೂ ನಿಸ್ವಾರ್ಥದಿಂದ ಸೇವೆ ಮಾಡೋಣ, ನಾಡಿನ ಹಿತಾಸಕ್ತಿಗೆ ಶ್ರಮಿಸೋಣ, ಕೆಟ್ಟದು ಮಾಡಬಾರದು ಎಂಬ ಮನಸ್ಥಿತಿಯಲ್ಲಿ ಬದುಕೋಣ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಹೊಸ ಬೆಳವಣಿಗೆಯೊಂದಿಗೆ ಹೊಸ ಹೆಜ್ಜೆ ಕಾಣುತ್ತಿದ್ದೇನೆ, ಬದಲಾವಣೆ ಅವಶ್ಯಕ, ಆ ನಿಟ್ಟಿನಲ್ಲಿ ನೀವೆಲ್ಲರೂ ಮುನ್ನಡೆಯುತ್ತಿದ್ದೀರಿ ನಾನು ಇಷ್ಟರ ಮಟ್ಟಿಗಿನ ಬದಲಾವಣೆ ನಿರೀಕ್ಷಿಸಿರಲಿಲ್ಲ ಆದರೆ ಇಲ್ಲಿ ನೋಡಿದಿರೆ ಇಷ್ಟೊಂದು ಪ್ರಮಾಣದಲ್ಲಿ ಸಮ್ಮೇಳನದಲ್ಲಿ ಒಗ್ಗೂಡಿರುವುದು ಸಂತಸದ ವಿಚಾರ ಎಂದರು.

ಚನ್ನಲಿಂಗನಹಳ್ಳಿ ಬೌದ್ಧ ಬಿಕ್ಕು ಜೀತವನದ ಮನೋರಕ್ಕಿತ ಬಂತೇಜಿ ದಿವ್ಯ ಸಾನಿಧ್ಯ ವಹಿಸಿದ್ದರೆ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಹಿಸಿದ್ದರು,ಶಾಸಕ ರವಿಕುಮಾರ್ ಗಣಿಗ, ಸಾಹಿತಿ ಮೂಡ್ನ ಕೊಡು ಚಿನ್ನಸ್ವಾಮಿ, ಪ್ರೊ. ಕೆ ಎಸ್ ಭಗವಾನ್, ನಾದಾನಂದ ನಾಥ ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಂದಿನಿ ಕೆ ಆರ್, ಬುದ್ಧಿಸ್ಟ್ ಒಕ್ಕೂಟದ ಎಂ ಸಿ ಬಸವರಾಜು ರೈತ ಮುಖಂಡರಾದ ಸುನಂದ ಜಯರಾಮ್, ಚಿಕ್ಕರಸಿನಕೆರೆ ಸಿ ಶಿವಲಿಂಗಯ್ಯ ಇತರರಿದ್ದರು.

ಆಂದೋಲನ ಡೆಸ್ಕ್

Recent Posts

ಶರಣ್ಯ ಸುರಕ್ಷಿತ ; ಅಧಿಕಾರಿ, ಸಿಬ್ಬಂದಿ, ಬುಡಕಟ್ಟು ಜನರಿಗೆ ಅಭಿನಂದನೆ ಸಲ್ಲಿಸಿದ ಖಂಡ್ರೆ

ಬೆಂಗಳೂರು : ಕೊಡಗು ಜಿಲ್ಲೆಯ ತಡಿಯಾಂಡಮೋಳ್ ಶಿಖರಕ್ಕೆ ಕೇರಳದಿಂದ ಚಾರಣಕ್ಕಾಗಿ ಬಂದು ಏಪ್ರಿಲ್ 2 ರಂದು ನಾಪತ್ತೆಯಾಗಿದ್ದ ಜಿ.ಎಸ್. ಶರಣ್ಯ…

19 seconds ago

KSOU | ಕುಲಸಚಿವೆಯಾಗಿ ಕೆಎಎಸ್‌ ಅಧಿಕಾರಿ ಕುಸುಮಾಕುಮಾರಿ ನೇಮಕ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾಕುಮಾರಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಈವರೆಗೆ…

20 mins ago

ಏ.9ರವರೆಗೆ ರಾಜ್ಯಾದ್ಯಂತ ಯಲ್ಲೋ ಅಲರ್ಟ್, ಮಳೆ ಮುನ್ಸೂಚನೆ

ಮೈಸೂರು : ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಏ.9ರವರೆಗೆ ಯಲ್ಲೋ…

35 mins ago

ಕಾಂತರಾಜು-ಹೆಗಡೆ ವರದಿಗಳು ಇನ್ನೂ ಸ್ಟೋರೇಜ್‌ನಲ್ಲೇ ಏಕಿದೆ? ; ಕುಮಾರಸ್ವಾಮಿ ಪ್ರಶ್ನೆ

ದಾವಣಗೆರೆ : ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಎರಡು ವರದಿಗಳನ್ನು…

59 mins ago

ಅಹಿಂದ ಹತ್ತಿಕ್ಕುತ್ತಿರುವ ಸಿದ್ದರಾಮಯ್ಯ : ಕುಮಾರಸ್ವಾಮಿ ಆರೋಪ

ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ್ದ ಅಹಿಂದ ವರ್ಗವನ್ನೇ…

1 hour ago

ಕೊಡಗು | ಟೆಕ್ಕಿ ಶರಣ್ಯ ಕೊನೆಗೂ ಪತ್ತೆ

ಮಡಿಕೇರಿ : ಮಡಿಕೇರಿಯ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಕೊ‌ನೆಗೂ ಪತ್ತೆ…

1 hour ago