Deception by showing an idol of God
ಮೋಸ ಹೋಗಿರುವ ಮಂಡ್ಯ ತಾಲ್ಲೂಕು ದ್ಯಾಪಸಂದ್ರ ಗ್ರಾಮದ ನೂರಾರು ಮಹಿಳೆಯರು
ಮಂಡ್ಯ : ದೇವರ ವಿಗ್ರಹ ಮತ್ತು ಹಳೆಯ ಮಸಿ ಹಿಡಿದಿರುವ ತಂಬಿಗೆಯನ್ನು ಮಹಿಳೆಯರಿಗೆ ತೋರಿಸಿ, ಇದರಿಂದ ಹಣವನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿ ಕೋಟಿಗಟ್ಟಲೆ ಹಣವನ್ನು ಪಡೆದು ಮೋಸ ಎಸಗಿರುವ ಘಟನೆ ತಾಲ್ಲೂಕಿನ ದ್ಯಾಪಸಂದ್ರ ಗ್ರಾಮದಲ್ಲಿ ನಡೆದಿದೆ.
ಹುಣಸೂರು ಮೂಲದ ನಾಗರಾಜು ಎಂಬಾತನೇ ಮಹಿಳೆಯರನ್ನು ನಂಬಿಸಿ ಕೋಟಿಗಟ್ಟಲೆ ಹಣವನ್ನು ಲಪಟಾಯಿಸಿ ಈಗ ಪೊಲೀಸರ ವಶದಲ್ಲಿರುವ ಆರೋಪಿ.
ಹಳೆ ಪಾತ್ರೆ, ಪುರಾತನ ವಿಗ್ರಹದಿಂದ ಹಣ ದ್ವಿಗುಣ ಮಾಡುವುದಾಗಿ ಆರೋಪಿ ನಾಗರಾಜು ಮಹಿಳೆಯರಿಗೆ ಆಸೆ ಹುಟ್ಟಿಸಿದ್ದಾನೆ. ಈತನ ಮಾತನ್ನು ನಂಬಿದ ಮಹಿಳೆಯರು ತಮ್ಮ ಗಂಡAದಿರಿಗೆ ಕಾಣದ ಹಾಗೆ ಹಣವನ್ನು ನೀಡಿದ್ದಾರೆ.
ಮಸಿ ಹಿಡಿದಿರುವ ಹಿತ್ತಾಳೆಯ ತಂಬಿಗೆ, ದೇವರ ವಿಗ್ರಹವನ್ನು ತೋರಿಸಿದ ನಾಗರಾಜು, ಇವುಗಳನ್ನು ದೇವಸ್ಥಾನದಲ್ಲಿ ಇಟ್ಟು ಪೂಜೆ ಮಾಡಿ, ನಂತರ ಪಾತ್ರೆಯಲ್ಲಿ ಏನೇ ಹಾಕಿದರೂ ದ್ವಿಗುಣಗೊಳ್ಳುತ್ತದೆ ಎಂದು ನಂಬಿಸಿದ್ದಾನೆ. ಅಲ್ಲದೆ, ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ದೊಡ್ಡ ದೊಡ್ಡ ಜನರ ಜತೆ ಸಭೆಗಳನ್ನು ನಡೆಸಿ, ದ್ಯಾಪಸಂದ್ರ ಗ್ರಾಮದ ಮಹಿಳೆಯರನ್ನು ನಂಬಿಸಿದ್ದಾನೆ.
ಇದೆಲ್ಲವನ್ನೂ ನೋಡಿದ ಮಹಿಳೆಯರು ತಮ್ಮ ಗಂಡಂದಿರಿಗೆ ಕಾಣದ ಹಾಗೆ ನಾಗರಾಜುಗೆ ಹಣವನ್ನು ತಂದು ಕೊಟ್ಟಿದ್ದಾರೆ. ನಂತರದ ದಿನಗಳಲ್ಲಿ ಈತ ಮಾಡುತ್ತಿರುವುದು ಮೋಸ ಎಂದು ತಿಳಿದು ನಾಗರಾಜುನನ್ನು ಪ್ರಶ್ನಿಸಿದ್ದಾರೆ. ಇದರಿಂದಾಗಿ ನಾಗರಾಜು ದ್ಯಾಪಸಂದ್ರ ಗ್ರಾಮದಿಂದ ಕಾಲ್ಕಿತ್ತಿದ್ದಾನೆ.
ಇದರಿಂದ ಗಾಬರಿಗೊಂಡ ಮಹಿಳೆಯರು ತಮ್ಮ ಗಂಡAದಿರಿಗೆ ವಿಷಯ ತಿಳಿಸಿ ಕೆರಗೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಡಿವೈಎಸ್ಪಿ ಲಕ್ಷಿ÷್ಮನಾರಾಯಣ ಪ್ರಸಾದ್, ಸಿಪಿಐ ಮಹೇಶ್, ಕೆರಗೋಡು ಪಿಎಸ್‌ಐ ದೀಕ್ಷಿತ್ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದರು.
ಆರೋಪಿ ನಾಗರಾಜುವಿನ ಚಲನವಲನವನ್ನು ಪತ್ತೆ ಹಚ್ಚಿದ ತನಿಖಾ ತಂಡದ ಪೊಲೀಸ್ ಅಧಿಕಾರಿಗಳು ಉಡುಪಿಯಲ್ಲಿ ಪತ್ತೆಹಚ್ಚಿ ಬಂಧಿಸಿ, ಮಂಡ್ಯಕ್ಕೆ ಕರೆತಂದು ವಿಚಾರಣೆ ನಡೆಸಲಾಗಿ ಕೋಟಿಗಟ್ಟಲೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ಆರೋಪಿ ನಾಗರಾಜು ಹಿನ್ನೆಲೆ: ಹುಣಸೂರಿನಲ್ಲಿ ಐಸ್ ಕ್ಯಾಂಡಿ ಮಾರುತ್ತಿದ್ದ ಆರೋಪಿ ನಾಗರಾಜು, ನಂತರದಲ್ಲಿ ಚಾಲಕನಾಗಿ ಟ್ರಾಕ್ಟರ್ ಇತರೆ ವಾಹನಗಳನ್ನು ಚಾಲನೆ ಮಾಡಿಕೊಂಡಿದ್ದನು. ನಂತರದಲ್ಲಿ ರೈಸ್ ಪುಲ್ಲಿಂಗ್ ಮಾಡುತ್ತಿದ್ದವರ ಸಂಪರ್ಕ ಪಡೆದ ನಾಗರಾಜು, ಡ್ರೆವಿಂಗ್ ಬಿಟ್ಟು ರೈಸ್ ಪುಲ್ಲಿಂಗ್ ಮಾಡಲು ಕೋದಂಡರಾಮ ಎಂಬವರ ಜತೆ ಸೇರಿಕೊಂಡನು.
ಬಳಿಕ ದ್ಯಾಪಸಂದ್ರ ಗ್ರಾಮದ ರೈಸ್‌ಮಿಲ್‌ವೊಂದರಲ್ಲಿ ಕೆಲಸಕ್ಕೆ ಸೇರಿದ ನಾಗರಾಜು, ಜನರ ಸಂಪರ್ಕ ಗಿಟ್ಟಿಸಿ, ಹಳೇ ಪಾತ್ರೆ ಹಾಗೂ ದೇವರ ವಿಗ್ರಹ ತೋರಿಸಿ ಹಣ ದ್ವಿಗುಣಗೊಳಿಸುವುದಾಗಿ ಮಹಿಳೆಯರಿಗೆ ಬಣ್ಣ ಬಣ್ಣದ ಮಾತುಗಳಿಂದ ಯಾಮಾರಿಸಿ ವಂಚನೆ ಮಾಡಿದ್ದಾನೆ.
ನಾಗರಾಜು ಹಿಂದೆ ಕೋದಂಡರಾಮ ಎಂಬವರ ಜತೆ ಸೇರಿ ರೈಸ್ ಪುಲ್ಲಿಂಗ್ ಮಾಡಿ ಹಣ ಮಾಡುತ್ತಿದ್ದನು. ಬಳಿಕ ಹಣ ಮಾಡುವ ಉದ್ದೇಶದಿಂದ ಮೈಸೂರಿನಿಂದ ದೇವರ ವಿಗ್ರಹ ಹಾಗೂ ಹಿತ್ತಾಳೆಯ ಒಂದು ತಂಬಿಗೆಯನ್ನು ತಂದು ಮಹಿಳೆಯರಿಗೆ ತೋರಿಸಿ, ತಂಬಿಗೆಗೆ ಸಿಡಿಲು ಬಡಿದಿದೆ, ಇದಕ್ಕೆ ಹಣವನ್ನು ಹಾಕಿದರೆ ದ್ವಿಗುಣ ಆಗುತ್ತದೆ. ದೇವರ ವಿಗ್ರಹ ಮತ್ತು ಹಳೆಯ ಪಾತ್ರೆಯನ್ನು ದೇವಸ್ಥಾನಗಳಲ್ಲಿ ಇಟ್ಟು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಜನಗಳನ್ನು ನಂಬಿಸಿದ್ದಾನೆ. ಹಣ ದ್ವಿಗುಣವಾಗುತ್ತದೆ ಎಂದು ನಂಬಿದ ಮಹಿಳೆಯರು ತಮ್ಮ ಗಂಡಂದಿರಿಗೆ ಗೊತ್ತಾಗದಂತೆ ಆರೋಪಿ ನಾಗರಾಜುಗೆ ಹಣ ನೀಡಿದ್ದಾರೆ. ಮಹಿಳೆಯರಿಂದ ಹಣ ಪಡೆದ ನಾಗರಾಜು ಅಲ್ಲಿಂದ ಕಾಲ್ಕಿತ್ತಿದ್ದು, ಉಡುಪಿಯಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ನಮ್ಮ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. – ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ಅಧೀಕ್ಷಕ
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…
ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಇರುವ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಹಾಗೂ ಡೆನ್ಮಾರ್ಕ್ ದೇಶದ ನಿಯಂತ್ರಣದಲ್ಲಿರುವ ‘ಗ್ರೀನ್ ಲ್ಯಾಂಡ್’ ದ್ವೀಪವನ್ನು ತನ್ನ…
ನವೀನ್ ಡಿಸೋಜ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ ಮಡಿಕೇರಿ: ಬೇಸಿಗೆ…
ಎಂ ಯೋಗಾನಂದ್ ಜ.೨೩ರಿಂದ ೨೬ರವರೆಗೆ ಜಾತ್ರಾ ಮಹೋತ್ಸವ; ಮೆರುಗು ನೀಡಲಿರುವ ಗಾಡಿ ಓಡಿಸುವ ಸ್ಪರ್ಧೆ ಹುಣಸೂರು: ತಾಲ್ಲೂಕಿನ ಬಾಚಳ್ಳಿ ಗ್ರಾಮದಲ್ಲಿ…