Cultural diversity of Mandya people in America
ಮಂಡ್ಯ : ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ ಪದವಿ ಪಡೆದು ದೇಶದ ವಿವಿಧೆಡೆ ನೆಲೆಸಿರುವವರ ಬೃಹತ್ ಸಂಗಮ. ನೃತ್ಯ, ನಾಟಕ, ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಎಲ್ಲರೂ ಸಂಭ್ರಮಿಸಿದರು. ಅಮೆರಿಕದ ಒಕ್ಕಲಿಗರ ಪರಿಷತ್ತಿನ 18ನೇ ಸಮಾವೇಶ ಹಾಗೂ ವಿಶ್ವ ಒಕ್ಕಲಿಗರ ಸಮ್ಮೇಳನ ಕ್ಯಾಲಿಫೋರ್ನಿಯಾದ ಸಾನ್ಹೋಸೆ ಕನ್ವೆನ್ಷನ್ ಸೆಂಟರ್‌ನಲ್ಲಿ ಕಂಡುಬಂದ ಕಾರ್ಯಕ್ರಮವಿದು.
ಈ ಆಚರಣೆಯ ಭಾಗವಾಗಿ ಒಕ್ಕಲಿಗರ ಪರಿಷತ್ ವತಿಯಿಂದ 1967 ರಿಂದ 2000ನೇ ಇಸವಿಯವರೆಗೆ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದವರಿಗಾಗಿ ಅಲ್ಯುಮ್ನಿ ಮೀಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹಳೆಯ ಗೆಳೆಯರು ಪರಸ್ಪರ ಒಂದೇ ವೇದಿಕೆಯಲ್ಲಿ ಸಂಗಮಗೊಂಡರು. ತಮ್ಮ ಸಾಧನೆಗಳು ಮತ್ತು ಅನುಭವಗಳನ್ನು ಹಂಚಿಕೊಂಡು ಅಮೂಲ್ಯ ನೆನಪುಗಳನ್ನು ಮೆಲುಕು ಹಾಕಿದರು.
ಈ ಸಮಾವೇಶದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಚಿವರಾದ ಡಾ.ಕೆ.ಸುಧಾಕರ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಸ್.ಟಿ.ಸೋಮಶೇಖರ್, ಸಿ.ಎಸ್.ಪುಟ್ಟರಾಜು, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರವಿಶಂಕರ್‌ಗೌಡ, ಶ್ರೀ ಹರ್ಷ, ಹೇಮಂತ್‌ಕುಮಾರ್, ಹರಿಕೃಷ್ಣ ಮತ್ತು ಎಂ.ಡಿ.ಪಲ್ಲವಿ ಮೊದಲಾದ ಖ್ಯಾತ ನಟರು ಹಾಗೂ ಗಾಯಕರು ಭಾಗವಹಿಸಿದ್ದರು.
ಪ್ರಕೃತಿ ಸ್ವಾಮಿಗೌಡ, ಭಾಗ್ಯ, ಚೇತನ ಕುಮಾರ್, ಸಂಧ್ಯಾ, ಸಿಂಧು ಶಿವ, ಸಚಿನ್, ಎ.ಆರ್.ಮಮತಾ, ನಮಿತಾ, ಎಲ್.ಮಹೇಶ್, ಪ್ರವೀಣ್, ಮಾದೇಶ್, ಶಿವಾನಂದ, ರವಿ, ರಶ್ಮಿ, ರಮೇಶ್, ನವೀನ್, ವಿದ್ಯಾ, ಮಂಜುನಾಥ, ಮುರಳೀಧರ್, ವೆಂಕಟೇಶ್, ಶ್ರೀವಲ್ಲಿ, ಶೇಷಾದ್ರಿ, ಕೆ.ಎನ್.ಯದುಷ್, ಕೆ.ಎಸ್.ಮಮತಾ ಅವರೆಲ್ಲರೂ ಮಂಡ್ಯ ಪಿಇಎಸ್ ಕಾಲೇಜಿನಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳಾಗಿ ಸವಿನೆನಪುಗಳನ್ನು ಹಂಚಿಕೊಂಡರು.
ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…
ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…
ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…
ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…
ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…
ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…