ಮಂಡ್ಯ/ಕೆ.ಆರ್ ಪೇಟೆ: ಶೀಘ್ರ ನ್ಯಾಯದಾನಕ್ಕೆ ವಕೀಲರು ನ್ಯಾಯಾಧೀಶರಿಗೆ ಪೂರಕವಾಗಿ ಸಹಕಾರ ನೀಡಿ ಕೆಲಸ ಮಾಡಬೇಕು ಎಂದು ಪಾಂಡವಪುರದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಮಹೇಶ್ ಮನವಿ ಮಾಡಿದರು.
ಅವರು ಕೃಷ್ಣರಾಜಪೇಟೆ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯಕ್ಕೆ ನೂತನವಾಗಿ ವರ್ಗಾವಣೆಗೊಂಡು ಆಗಮಿಸಿರುವ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸುಧೀರ್ ಮತ್ತು ಅಪರ ಸಿವಿಲ್ ನ್ಯಾಯಾಧೀಶ ದೇವರಾಜ್ ಅವರನ್ನು ಸ್ವಾಗತಿಸಿ ನೂತನ ನ್ಯಾಯಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷ್ಣರಾಜಪೇಟೆ ನ್ಯಾಯಾಲಯದಲ್ಲಿ 4500ಕ್ಕೂ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ, ಈ ದಿಕ್ಕಿನಲ್ಲಿ ಶೀಘ್ರವಾಗಿ ಕಕ್ಷೀದಾರರಿಗೆ ನ್ಯಾಯವನ್ನು ಒದಗಿಸಿಕೊಡುವ ದಿಕ್ಕಿನಲ್ಲಿ ವಕೀಲರು ಬದ್ಧತೆಯಿಂದ ವಾದ ಮಂಡಿಸಿ ಶೀಘ್ರ ನ್ಯಾಯದಾನಕ್ಕೆ ನ್ಯಾಯಧೀಶರಿಗೆ ಪೂರಕ ಸಹಕಾರವನ್ನು ನೀಡಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಉಚ್ಚ ನ್ಯಾಯಾಲಯವು ಅತಿ ಶೀಘ್ರದಲ್ಲಿಯೇ ಕೆ.ಆರ್.ಪೇಟೆ ಪಟ್ಟಣದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯವನ್ನು ಆರಂಭ ಮಾಡುವ ಸಾಧ್ಯತೆ ಇದೆ. ನೀವು ಶ್ರೀರಂಗಪಟ್ಟಣದ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಕ್ರಿಮಿನಲ್ ಕೇಸುಗಳಿಗಾಗಿ ಅಲೆದಾಡುವ ಅಗತ್ಯವು ಸದ್ಯದಲ್ಲೇ ನಿಲ್ಲಲಿದೆ. ಆದ್ದರಿಂದ ವಕೀಲರು ನ್ಯಾಯವನ್ನು ಅರಸಿ ನ್ಯಾಯಾಲಯಕ್ಕೆ ಬರುವ ಬಡ ಕಕ್ಷಿದಾರರಿಗೆ ಶೀಘ್ರವೇ ನ್ಯಾಯ ದೊರಕುವ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂದು ನ್ಯಾಯಾಧೀಶರಾದ ಮಹೇಶ್ ಕಿವಿಮಾತು ಹೇಳಿದರು.
ಕೆ.ಆರ್.ಪೇಟೆ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು ಆಗಮಿಸಿರುವ ನ್ಯಾಯಾಧೀಶರಾದ ಸುಧೀರ್ ಮತ್ತು ದೇವರಾಜು ಮಾತನಾಡಿ ಈವರೆಗೆ ನ್ಯಾಯಾಧೀಶರಾಗಿ ಕೆಲಸ ಮಾಡಿರುವ ನ್ಯಾಯಾಧೀಶರುಗಳಿಗೆ ನೀಡಿರುವಂತೆ ತಮಗೂ ಕೆಲಸ ಮಾಡಲು ವಕೀಲರ ಸಂಘ ಹಾಗೂ ವಕೀಲರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕೃಷ್ಣರಾಜಪೇಟೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಮಾತನಾಡಿ, ಕೆ.ಆರ್.ಪೇಟೆ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿರುವ ವಕೀಲರೆಲ್ಲರೂ ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದಿಂದ ಬಂದಿರುವ ಯುವಕರಾಗಿದ್ದಾರೆ, ವಾದ ಮಂಡನೆ ಹಾಗೂ ಪ್ರಕರಣಗಳ ಇತ್ಯರ್ಥದ ಸಂದರ್ಭದಲ್ಲಿ ವಕೀಲರುಗಳಿಂದ ಸಣ್ಣಪುಟ್ಟ ಲೋಪ ದೋಷಗಳಾದರೆ, ಅವರನ್ನು ತಿದ್ದಿ ತೀಡಿ ಪೂರಕವಾದ ಸಹಕಾರ ನೀಡಿ ಕೆಲಸ ಮಾಡಲು ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದರು.
ಅಪರ ಸಿವಿಲ್ ನ್ಯಾಯಾಧಿಶರಾದ ಶಕುಂತಲಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಕೀಲರು ನೂತನವಾಗಿ ವರ್ಗಾವಣೆಗೊಂಡು ಆಗಮಿಸಿರುವ ನ್ಯಾಯಾಧೀಶರಿಗೆ ಪೂರಕವಾಗಿ ಸಹಕಾರ ನೀಡಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು ಕಾನೂನು ಬದ್ಧವಾಗಿ ಕೆಲಸ ಮಾಡಿ ನ್ಯಾಯ ಬದ್ಧವಾಗಿ ತೀರ್ಪು ನೀಡಲು ವಕೀಲರ ಸಂಘವು ಮುಂದಾಗಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಕೀಲರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ವರ್ಗಾವಣೆಗೊಂಡು ಆಗಮಿಸಿರುವ ನೂತನ ನ್ಯಾಯಾಧೀಶರುಗಳಿಗೆ ತಮ್ಮನ್ನು ಪರಸ್ಪರ ಪರಿಚಯ ಮಾಡಿಕೊಂಡರು.
ಸರ್ಕಾರಿ ಅಭಿಯೋಜಕ ಸುರೇಂದ್ರ, ಹಿರಿಯ ವಕೀಲರಾದ ಎಸ್.ಸಿ. ವಿಜಯಕುಮಾರ್, ಜಿ.ಆರ್. ಅನಂತರಾಮಯ್ಯ, ವಕೀಲರ ಸಂಘದ ಕಾರ್ಯದರ್ಶಿ ರಾಜೇಗೌಡ ಸಭೆಯಲ್ಲಿ ಮಾತನಾಡಿದರು. ವಕೀಲರ ಸಂಘದ ಪದಾಧಿಕಾರಿಗಳಾದ ದಿನೇಶ್, ಡಿ.ಆರ್.ಜಗಧೀಶ್, ನಿರಂಜನ, ಸುಜಾತ, ಹಿರಿಯ ವಕೀಲರರಾದ ಎಂ. ಆರ್.ಪ್ರಸನ್ನಕುಮಾರ್, ಕೆ. ಎನ್.ನಾಗರಾಜು, ಕೆರೆಮೇಗಳ ಕೊಪ್ಪಲು ಶಂಕರೇಗೌಡ, ಬಂಡಿಹೊಳೆ ಗಣೇಶ್, ಗಂಜಿಗೆರೆ ಲೋಕೇಶ್, ಎಂ.ಎಲ್. ಸುರೇಶ್, ಸಿ.ಎನ್.ಮೋಹನ್, ಕೆ.ಆರ್.ಮಹೇಶ್, ನಯಾಜ್ ಪಾಷ, ಮಂಜುನಾಥ್ ಸೇರಿದಂತೆ ವಕೀಲರು ಉಪಸ್ಥಿತರಿದ್ದರು.
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…