ಮಂಡ್ಯ : ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದರು. ಅಂತೆಯೇ ಶಿಕ್ಷಕರು ಹೂವು ಹಾಗೂ ಸಿಹಿ ತಿನಿಸು ಕೊಟ್ಟು ಸ್ವಾಗತಿಸಿದರು. ಇನ್ನು ಶಾಸಕ ರವಿಕುಮಾರ್ ಗಣಿಗ ಹಾಗೂ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಮೊದಲ ದಿನ ಶೇ.60ರಷ್ಟು ಹೆಚ್ಚು ವಿದ್ಯಾರ್ಥಿಗಳು ಹಾಜರಾದರು. ರಜೆಯಿಂದಾಗಿ ಖಾಲಿ ಹೊಡೆಯುತ್ತಿದ್ದ ಶಾಲಾ ಆವರಣದಲ್ಲಿ ಮಕ್ಕಳ ಕಲರವ ಜೋರಾಗಿತ್ತು. ಇನ್ನು ವಿದ್ಯಾರ್ಥಿಗಳನ್ನು ಸೆಳೆಯಲು ಶಿಕ್ಷಕರು, ಎಸ್‌ಡಿಎಂಸಿ ಆಡಳಿತ ಮಂಡಳಿ ಹಲವು ಸಿದ್ಧತೆ ಮಾಡಿಕೊಂಡಿದ್ದರು. ಅದರಂತೆ ಶಾಲೆಗಳನ್ನು ತಳಿರು, ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಶಾಲೆಗೆ ಹಾಜರಾದ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಗುಲಾಬಿ ಹೂ ಹಾಗೂ ಚಾಕೊಲೇಟ್ ನೀಡಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಎಲ್ಲ ಶಾಲೆಗಳಲ್ಲಿಯೂ ಬಿಸಿಯೂಟದ ಜತೆಗೆ ಸಿಹಿ ವಿತರಿಸಲಾಯಿತು. 1816 ಸರ್ಕಾರಿ, 160 ಅನುದಾನಿತ ಹಾಗೂ 469 ಅನುದಾನರಹಿತ, 83 ಸಮಾಜ ಕಲ್ಯಾಣ ಇಲಾಖೆ, 4 ಕೇಂದ್ರೀಯ ವಿದ್ಯಾಲಯ, 1 ಜವಾಹರ್ ನವೋದಯ ವಿದ್ಯಾಲಯಗಳು ಪುನಾರಂಭಗೊಂಡವು.
ಎತ್ತಿನಗಾಡಿಯಲ್ಲಿ ಬಂದ ಎಂಎಲ್‌ಎ: ತಾಲೂಕಿನ ಬಿ.ಹೊಸೂರು ಕಾಲನಿ ಸರ್ಕಾರಿ ಶಾಲೆಗೆ ಶಾಸಕ ರವಿಕುಮಾರ್ ಗಣಿಗ ಅವರು ಎತ್ತಿನಗಾಡಿ ಮೂಲಕ ಬಂದರು. ಈ ಸಂದರ್ಭ ಪೂರ್ಣಕುಂಭದೊಂದಿಗೆ ಶಾಸಕರನ್ನು ಶಾಲಾ ಮಕ್ಕಳು ಸ್ವಾಗತಿಸಿದರು. ಶಾಸಕರು ಮಕ್ಕಳಿಗೆ ಗುಲಾಬಿ ಹೂ, ಸಿಹಿ ಹಾಗೂ ಸಮವಸ್ತ್ರ, ಪುಸ್ತಕ ನೀಡಿದರು.
ಬಳಿಕ ಮಾತನಾಡಿದ ಅವರು, ಮಕ್ಕಳು ಚೆನ್ನಾಗಿ ಓದಿ ಮುಂದೆ ಉನ್ನತ ಹುದ್ದೆ ಅಲಂಕರಿಸಬೇಕು. ಸರ್ಕಾರಿ ಶಾಲೆಗಳು ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಇದರಿಂದಾಗಿ ಖಾಸಗಿ ಶಾಲೆಗಳ ಮೊರೆ ಹೋಗಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೈಕ್ಷಣಿಕ ಚಟುವಟಿಕೆ ಬದಲಾವಣೆ ಆಗಬೇಕು. ಶಾಲೆಗಳ ಅಭಿವೃದ್ಧಿಗೆ ನನ್ನಿಂದಾಗುವ ಸೇವೆ ಮಾಡುತ್ತೇನೆ. ಸರ್ಕಾರಿ ಶಾಲೆಗಳು ಮಾದರಿ ಶಾಲೆಗಳಾಗಿ ಮಕ್ಕಳ ಭವಿಷ್ಯ ರೂಪಿಸಬೇಕು. ಶಿಕ್ಷಕರು ಸಹ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಸಹಕರಿಸಿ. ಮಕ್ಕಳು ಚೆನ್ನಾಗಿ ಓದುವ ಮೂಲಕ ಒಳ್ಳೆಯ ವ್ಯಕ್ತಿಗಳಾಗಿ ಎಂದು ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳಿಗೆ ಸಿಹಿ ತಿನಿಸಿದ ಡಿಸಿ: ಚಿಕ್ಕಮಂಡ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ಎಚ್.ಎನ್.ಗೋಪಾಲಕೃಷ್ಣ ಅವರು ಮಕ್ಕಳಿಗೆ ಸಿಹಿ, ಹೂ, ಪುಸ್ತಕ ಹಾಗೂ ಸಮವಸ್ತ್ರ ನೀಡಿ ಮಕ್ಕಳನ್ನು ಬರಮಾಡಿಕೊಂಡರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಡಿಡಿಪಿಐ ಎಸ್.ಟಿ.ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್, ಮುಖ್ಯಶಿಕ್ಷಕ ಆರ್.ದೇವರಾಜು, ಅಕ್ಷರ ದಾಸೋಹ ಅಧಿಕಾರಿ ಹರೀಶ್ ಹಾಜರಿದ್ದರು.
ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…
ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…
ಚೆನ್ನೈ : ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…
ಬೆಂಗಳೂರು : ಕಾಂಗ್ರೆಸ್ ಎಂದರೆ ಕೇವಲ ಒಂದು ರಾಜಕೀಯ ಪಕ್ಷವಲ್ಲ. ಇದೊಂದು ಚಳುವಳಿ ಮತ್ತು ಸಿದ್ಧಾಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಗೋಣಿಕೊಪ್ಪ : ಪಟ್ಟಣದಲ್ಲಿ ಬೀದಿನಾಯಿ ದಾಳಿಗೆ ಇಬ್ಬರು ವಿದ್ಯಾರ್ಥಿಗಳೂ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ಎಚ್ಚೆತ್ತ ಸ್ಥಳೀಯರು ಮತ್ತಷ್ಟು…
ಹೊಸದಿಲ್ಲಿ : ಕನ್ನಡ ನಾಡು-ನುಡಿ ನಮ್ಮ ಹೆಮ್ಮೆ, ಕನ್ನಡ ಭೂಮಿ ನಮ್ಮ ಹೆಮ್ಮೆಯಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಮುಕ್ತಕಂಠದಿಂದ…