ಮಂಡ್ಯ

ಜಾತಿಗಣತಿ ; ಒಕ್ಕಲಿಗರು ಮೀಸಲಾತಿ ಪಡೆಯಲು ಮುಂದಾಗಬೇಕು: ಚೈತನ್ಯ ಸ್ವಾಮೀಜಿ ಕರೆ

ಮಂಡ್ಯ : ಕೇಂದ್ರ ಸರ್ಕಾರವು ಜಾತಿಗಣತಿ ನಡೆಸುವ ಘೋಷಣೆ ಮಾಡಿದ್ದು, ಗಣತಿಯಲ್ಲಿ ಒಕ್ಕಲಿಗರು ತಮ್ಮ ಉಪಜಾತಿಗಳನ್ನು ಕಡ್ಡಾಯವಾಗಿ ನಮೂದಿಸಿ, ಇಡಬ್ಲ್ಯೂಎಸ್ (ಆರ್ಥಿಕವಾಗಿ ಹಿಂದುಳಿದವರು) ಮೀಸಲಾತಿ ಪಡೆಯಲು ಮುಂದಾಗಬೇಕು ಎಂದು ಒಕ್ಕಲಿಗ ಧರ್ಮ ಮಹಾಸಭಾದ ಸಂಸ್ಥಾಪಕರಾದ ಸಿದ್ದರಾಮ ಚೈತನ್ಯ ಸ್ವಾಮೀಜಿ ಕರೆ ನೀಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿಯಲ್ಲಿ ಒಕ್ಕಲಿಗರು ಸರಿಯಾಗಿ ತಮ್ಮ ಉಪಜಾತಿಗಳನ್ನು ಕಡ್ಡಾಯವಾಗಿ ಬರೆಸುವ ಮೂಲಕ ಸರ್ಕಾರದ ಮೀಸಲಾತಿ, ವಿವಿಧ ಸವಲತ್ತುಗಳನ್ನು ಪಡೆದು ಉಪಜಾತಿಗಳ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು ಎಂದು ಕೋರಿದರು.

ರಾಜ್ಯ ಸರ್ಕಾರ ನಡೆಸಿದ ಕಾಂತರಾಜು ಆಯೋಗದ ವರದಿಯು ಸಂವಿಧಾನ ವಿರೋಧಿ ಮತ್ತು ಅವೈಜ್ಞಾನಿಕವಾಗಿದ್ದು, ಒಕ್ಕಲಿಗ ಸಮುದಾಯಕ್ಕೆ ಮಾರವಾಗಿದೆ. ಮಂಡ್ಯ ಜಿಲ್ಲೆಯ ತಾಲೂಕೊಂದರಲ್ಲೇ ೧ ಲಕ್ಷಕ್ಕೂ ಹೆಚ್ಚು ಗಂಗಟರ್ ಒಕ್ಕಲಿಗರಿದ್ದು, ರಾಜ್ಯವಿಡಿ ೮೪,೦೦೦ ಮಾತ್ರ ಇರುವುದಾಗಿ ತೋರಿ, ಇತರ ಉಪಜಾತಿಗಳಲ್ಲಿ ತಪ್ಪಾದ ಅಂಕಿ ಅಂಶ ನೀಡಿ, ಒಕ್ಕಲಿಗರನ್ನು ಅವಸಾನದಂಚಿಗೆ ತಳ್ಳುವ ವರದಿ ಮಂಡಿಸಲಾಗಿದೆ. ಸರ್ಕಾರ ಈ ವರಿದಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ಸಮುದಾಯದ ಗಂಗಟಕಾರ್, ಮರಸು, ದಾಸ, ಹಳ್ಳಿಕಾರ, ಸರ್ಪ ಒಕ್ಕಲಿಗ ಉಪಜಾತಿಗಳಿಗೆ ಶೇ ೧೦ರಷ್ಟು ಇಡಬ್ಲ್ಯೂಎಸ್ (ಆರ್ಥಿಕವಾಗಿ ಹಿಂದುಳಿದವರು) ಮೀಸಲಾತಿಯ ಅವಕಾಶವಿದ್ದು, ಉಪಜಾತಿ ಸಹಿತ ಜಾತಿ ಪ್ರಮಾಣಪತ್ರವಿಲ್ಲದ ಕಾರಣ ಈ ಮೀಸಲಾತಿ ಸದ್ಬಳಕೆಯಾಗಲಿಲ್ಲ. ನಗರ ಪ್ರದೇಶದ ಒಕ್ಕಲಿಗರನ್ನು ಒಬಿಸಿ ಪಟ್ಟಿಯಿಂದ ತೆಗೆಯಲಾಗಿದ್ದು, ಈಗಲಾದರೂ ಎಚ್ಚೆತ್ತು ಉಪಜಾತಿಗಳನ್ನು ನಮೂದಿಸಿ, ಮೀಸಲಾತಿ ಸವಲತ್ತು ಪಡೆಯಬೇಕು ಎಂದರು.

ಉಪಜಾತಿಗಳ ನಮೂದನೆಯಿಂದ ಪ್ರವರ್ಗದ ಬದಲಾವಣೆಯಾಗಬಹುದೇ ಹೊರತು ಜಾತಿ ಬದಲಾಗದು, ಇಡಬ್ಲ್ಯೂಎಸ್ (ಆರ್ಥಿಕವಾಗಿ ಹಿಂದುಳಿದವರು) ಮೀಸಲಾತಿಯಲ್ಲಿ ಸವಲತ್ತುಗಳನ್ನು ಪಡೆಯಲು ಉಪಜಾತಿಗಳನ್ನು ನಮೂದಿಸಿ ಸಹಕರಿಸಿ ಎಂದು ಮನವಿ ಮಾಡಿದರು.

ಮಹಾಸಭಾದ ರಾಜ್ಯಸಂಚಾಲಕ ಸಿ.ಎಂ.ಕ್ರಾಂತಿಸಿಂಹ ಮಾತನಾಡಿ, ಅರ್ಹ ಮೀಸಲಾತಿ ಪಡೆಯುವ ಸಂಬಂಧ ರಾಜ್ಯಾದ್ಯಂತ ವಿವಿಧ ಒಕ್ಕಲಿಗ ಉಪಜಾತಿಗಳನ್ನು ಸೇರಿಸಿ ಜಾಗೃತಿ ಆಂದೋಲನ ನಡೆಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಆನಂದ್‌ಕುಮಾರ್, ಜಿಲ್ಲಾ ಸಂಚಾಲಕ ಕೆ.ಪಿ.ರಕ್ಷಿತ್‌ಗೌಡ, ನಾಡಪ್ರಭು ಕೆಂಪೇಗೌಡರ ಯುವ ಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ ನರಸಿಂಹೇಗೌಡ, ಕಿರಣ್‌ಕುಮಾರ್‌ಗೌಡ ಇದ್ದರು.

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

3 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

8 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

12 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

12 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

12 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

15 hours ago