ಮಂಡ್ಯ: ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ನಾನು ಹಲವು ಪುಸ್ತಕಗಳನ್ನು ರಚಿಸಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ `ಆಡಳಿತದ ಅಂಗಳದಲ್ಲಿ’ ಎಂಬ ಪುಸ್ತಕವನ್ನು ಮಾರಾಟಕ್ಕೆ ಇಟ್ಟಿದ್ದೇನೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಟಿ.ತಮ್ಮೇಗೌಡ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್.ಎಲ್.ನಾಗೇಗೌಡರ ನಂತರ ಹಿರಿಯ ಐಎಎಸ್ ಅಧಿಕಾರಿ ತಿಮ್ಮೇಗೌಡರು ಎಂಬುದು ಜನಜನಿತವಾಗಿದ್ದು, ಸಾಹಿತ್ಯದಲ್ಲಿಯೂ ಆಸಕ್ತ ಹೊಂದಿದವನಾಗಿ ಪುಸ್ತಕ ಬರೆದಿದ್ದೇನೆ. ನನ್ನ ಎಲ್ಲಾ ಪುಸ್ತಕಗಳಿಗೂ ನನ್ನ ಗುರುಗಳು ಹಾಗೂ ಸಾಹಿತ್ಯ ಸಮ್ಮೇಳನದ ಹಾಲಿ ಅಧ್ಯಕ್ಷ ಗೊ.ರೂ.ಚನ್ನಬಸಪ್ಪ ಅವರೇ ಮುನ್ನುಡಿ ಬರೆದಿದ್ದಾರೆ ಎಂದರು.
ಬೆರಳೆಣಿಕೆ ದಿನಗಳ ಹಿಂದಷ್ಟೇ ಮುದ್ರಣಗೊಂಡ `ಆಡಳಿತದ ಅಂಗಳದಲ್ಲಿ’ ಪುಸ್ತಕಕ್ಕೂ ಗೊ.ರೂ.ಚನ್ನಬಸಪ್ಪ ಅವರು ಹಾರೈಕೆಗಳನ್ನು ಬರೆದಿದ್ದು, ಮತ್ತೋರ್ವ ಐಎಎಸ್ ನಿವೃತ್ತ ಅಧಿಕಾರಿ ಚಿರಂಜೀವಿಸಿಂಗ್ ಅವರು ಪುಸ್ತಕದ ಹಿನ್ನುಡಿಯನ್ನು ಬರೆದಿದ್ದಾರೆ ಎಂದು ಹೇಳಿದರು.
`ಆಡಳಿತದ ಅಂಗಳದಲ್ಲಿ’ ಪುಸ್ತಕವು ಮಂಡ್ಯ ಜಿಲ್ಲೆಯ ಸಮಸ್ಯೆಗಳು, ಅಧಿಕಾರಿಗಳ ಆಡಳಿತದಲ್ಲಿನ ಭ್ರಷ್ಟತೆ, ಜಿಲ್ಲೆಯ ಅಭಿವೃದ್ಧಿಗೆ ಸಲಹೆಗಳನ್ನು ನೀಡಲಾಗಿದೆ. ಮಂಡ್ಯ ಜಿಲ್ಲೆ ಹಿಂದಿನ ನಾಯಕರಿಗೆ ಹೋಲಿಕೆ ಮಾಡಿದರೆ ಇಂದು ಅಭಿವೃದ್ಧಿಯ ಹಾದಿಯಲ್ಲಿ ಹೋಗಬೇಕಾಗಿದೆ. ಜಿಲ್ಲೆಯಲ್ಲಿ ಸಾವಯವ ಕೃಷಿ, ಪ್ರವಾಸೋದ್ಯಮ, ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಕಾವೇರಿ ವಿವಾದದ ಸಮಸ್ಯೆ ಸಂಬಂಧ ಪುಸ್ತಕದಲ್ಲಿ ಉಲ್ಲೇಖವಿದ್ದು, ಸಾಹಿತ್ಯ ಸಮ್ಮೇಳನದ ಎರಡು ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ನುಡಿದರು.
ಮಂಡ್ಯ ಜಿಲ್ಲೆಯ ಜನರು `ಆಡಳಿತದ ಅಂಗಳದಲ್ಲಿ’ವು ಓದಲೇಬೇಕಾದ ಪುಸ್ತಕವಾಗಿದೆ. ಇಲ್ಲಿನ ಸಮಗ್ರ ಮಾಹಿತಿಯನ್ನು ತಿಳಿಯುವುದು ಅವರ ಹಕ್ಕಾಗಿದ್ದು, ಪುಸ್ತಕವನ್ನು ಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ೩ ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ನನಗೂ ಆಹ್ವಾನ ಬಂದಿದೆ. ಜಿಲ್ಲೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಸಬೇಕೆಂದು ಕೋರಿದರು.
ಹುಣಸೂರು: ಜಮೀನಿನಲ್ಲಿ ವ್ಯವಸಾಯ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ರಸ್ತೆ ದಾಟುವ ವೇಳೆ ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟಿರುವ ಘಟನೆ…
ಮೈಸೂರು: ಕೆ.ವಿ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ.19ರಂದು ಮತ್ತು ದಟ್ಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ.20ರಂದು ತ್ರೈಮಾಸಿಕ…
ಮಂಡ್ಯ: ಹಲವಾರು ವರ್ಷಗಳಿಂದ ದುರಸ್ಥಿಯಾಗಬೇಕಿದ್ದ ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ನವೀಕರಣ ಕಾಮಗಾರಿಯನ್ನು ಒಟ್ಟು 1.08 ಕೋಟಿ…
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ವಿರೋಧಿಸಿ ಸಮ್ಮೇಳನಕ್ಕಾಗಮಿಸುವ ಅತಿಥಿಗಳಿಗೆ ಬಾಡೂಟ ಬಡಿಸಲು ಮನೆಗೊಂದು ಕೋಡಿ, ಊರಿಗೊಂದು ಕುರಿ ಸಂಗ್ರಹ…
ಮಂಡ್ಯ: ಜಿಲ್ಲೆಯ ನಾನಾ ಭಾಗಗಳಿಂದ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು…
ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20 ರಿಂದ 22 ರವರೆಗೆ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ…