ಮಂಡ್ಯ

ಬಿಜೆಪಿ-ಜೆಡಿಎಸ್‌ ದಲಿತ ವಿರೋಧಿ: ಮೈತ್ರಿ ಪಕ್ಷಕ್ಕೆ ಸಿಎಂ ತಿರುಗೇಟು

ಮಂಡ್ಯ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ-ಜೆಡಿಎಸ್‌ ಅವರು ಅಪಪ್ರಚಾರ ಮಾಡುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಇದೂವರೆಗೆ ದಲಿತರಿಗೆ ಕಾಂಗ್ರೆಸ್‌ ಪಕ್ಷ ಮಾಡಿದಷ್ಟು ಅನುಕೂಲವನ್ನು ಬಿಜೆಪಿ-ಜೆಡಿಎಸ್‌ ಪಕ್ಷಗಳು ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮೈತ್ರಿಗೆ ಪಕ್ಷಕ್ಕೆ ತೀರುಗೇಟು ನೀಡಿದರು.

ಅವರು ಸೋಮವಾರ ಕೆಆರ್‌ಎಸ್‌ ಗೆ ಬಾಗಿನ ಅರ್ಪಿಸಿ, ಬಳಿಕ ಮಾತನಾಡಿದ ಅವರು, ಎಸ್‌ಸಿಪಿ-ಟಿಎಸ್‌ಪಿ ಜಾರಿ ಇರುವುದು ಕರ್ನಾಟಕದಲ್ಲಿ ಮಾತ್ರ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಾದರೂ ಈ ಯೋಜನೆ ಜಾರಿ ಇದೆಯೇ? ಎಂದು ಪ್ರಶ್ನಿಸಿದರು.

ವಿರೋಧ ಪಕ್ಷಗಳು ಗಾಂಧಿ, ಅಂಬೇಡ್ಕರ್‌, ಬಸವಣ್ಣ ಅವರ ಸಿದ್ದಾಂತಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಜತೆಗೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

 

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ದರ ವ್ಯತ್ಯಾಸ: ಗ್ರಾಹಕರ ಹಿತವೇ ಮುಖ್ಯ

ಔಷಧಿಗಳ ನೈಜ ದರಕ್ಕೂ ಮತ್ತು ಮಾರಾಟ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಇತ್ತೀಚೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ಗಮನಿಸಿ ತೀವ್ರ…

22 seconds ago

ದೇವಭೂಮಿ ದ್ವಾರಕಾದ ‘ಮೀಟಾಪುರ್ ಮದರ್ ಥೆರೇಸಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಡಪಾಯಿಗಳ ಸೇವೆ ಮಾಡಿ ಜನರ ಹೃದಯ ಗೆದ್ದ ಮಾತೆ  ಮದರ್ ಥೆರೇಸಾ ಈಗ ನಮ್ಮ…

4 mins ago

‘ಸರೆಂಡರ್ ಆದ ಹುಡುಗರು ಬೇರೆ ಕಥೆ ಹೇಳುತ್ತಿದ್ದಾರೆ!?’

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಅಂತೂ ನಾಲ್ಕು ಹುಡುಗರು ಸ್ಟೇಷನ್ ಒಳಗೆ ಹೋದರು ಎಂದರೆ ಮತ್ತೊಂದು ಸಂಕಟ ಶುರು ಪಿಎಸ್‌ಐ…

12 mins ago

ಮಡಿಕೇರಿ ದಸರಾ: ಕೆಎಸ್‌ಆರ್‌ಟಿಸಿ ಪ್ರವಾಸಿ ಪ್ಯಾಕೇಜ್

ನವೀನ್ ಡಿಸೋಜ ಒಂದೇ ದಿನದಲ್ಲಿ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ; ವಯಸ್ಕರಿಗೆ ೪೦೦, ಮಕ್ಕಳಿಗೆ ೩೦೦ ರೂ.ದರ  ಮಡಿಕೇರಿ:…

25 mins ago

ದಸರಾ ಖರ್ಚಿನ ಭಾರ ಇಳಿಸಿದ ಟಿಕೆಟ್ ಮಾರಾಟದ ಆದಾಯ

ಕೆ.ಬಿ.ರಮೇಶನಾಯಕ ಗೋಲ್ಡ್ ಕಾರ್ಡ್, ಜಂಬೂಸವಾರಿ, ಪಂಜಿನ ಕವಾಯತು ಟಿಕೆಟ್ ಸೋಲ್ಡ್ ಔಟ್ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಪ್ಲಾನ್ ಯಶಸ್ವಿ ಮೈಸೂರು:…

45 mins ago

ದಸರಾ: ರಾಜಪಥದಲ್ಲಿ ಅಂಬಾರಿ ಸಂಚಾರ!

ಪ್ರಶಾಂತ್ ಎಸ್. ಕೆಎಸ್‌ಟಿಡಿಸಿ ವತಿಯಿಂದ ವ್ಯವಸ್ಥೆ; ಪ್ರತಿನಿತ್ಯ ೩ ಟ್ರಿಪ್‌ಗಳಲ್ಲಿ ಪ್ರಯಾಣ ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ‘ಅಂಬಾರಿ ಬಸ್’…

51 mins ago