ಮಂಡ್ಯ: ತಾಲೂಕಿನ ಬಸರಾಳು ಗ್ರಾಮದ ಪಟ್ಟಲದಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ತೆರವುಗೊಳಿಸಬೇಕು ಎಂದು ಬಸವರಾಳು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.
ಗುರುವಾರ ನಗರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಮುಖಂಡರು, ಬಸರಾಳು ಗ್ರಾಮದ ಮುತ್ತೇಗೆರೆ ಗ್ರಾಮಕ್ಕೆ ಹೋಗುವ ಬಲಗಡೆಗಾದಂತೆ ದೇವಸ್ಥಾನಕ್ಕೆ ಹೋಗುತ್ತಿದ್ದ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಗ್ರಾಮಸ್ಥರು 80 ವರ್ಷಗಳಿಂದ ಓಡಾಟ ನಡೆಸುತ್ತಿದ್ದಾರೆ ಎಂದರು.
ಒಂದು ವಾರದ ಹಿಂದೆ ಕೆಂಚನಹಳ್ಳಿ ಗ್ರಾಮದ ಗೂಳಿಗೌಡರ ಮಕ್ಕಳಾದ ಪುಟ್ಟೇಗೌಡ ,ಕೃಷ್ಣ ,ಬಸವರಾಜು ಅವರ ತಾಯಿಯ ಹೆಸರಿನಲ್ಲಿರುವ ಸರ್ವೆ ನಂಬರ್ 376 ರಲ್ಲಿರುವ 20 ಗುಂಟೆ ಜಮೀನಿನ ಪಕ್ಕದಲ್ಲಿ ಚಿಕ್ಕದಾಸೇಗೌಡ ಅವರ ಹೆಸರಿನಲ್ಲಿ ಸರ್ವೇ ನಂಬರ್ 375 ಒಂದು ಬಿ ನಲ್ಲಿ ಎರಡು ಗುಂಟೆ ಕರಾಬು ಜಮೀನಿದೆ. ಸದರಿ ಜಮೀನು ಅವರ ಮಗನಾದ ಪುಟ್ಟಸ್ವಾಮಿ ಅವರ ಹೆಸರಿನಲ್ಲಿ ನಮೂದಾಗಿದೆ ಎಂದರು .
ಪ್ರಸ್ತುತ ಕೆಂಚನಹಳ್ಳಿ ಗ್ರಾಮದ ಚೆನ್ನಮ್ಮ ಅವರ ಮಕ್ಕಳಾದ ಪುಟ್ಟೇಗೌಡ, ಕೃಷ್ಣ, ಬಸವರಾಜು ಅವರು ಹಾಲಿನಿಂದ ರಸ್ತೆಯನ್ನು ಮುಚ್ಚಿ ಚಿಕ್ಕದಾಸಗೌಡರ ಜಮೀನಿನಲ್ಲಿ ರಸ್ತೆ ಮಾಡಲು ಹೊರಟಿದ್ದಾರೆ .ಆದ್ದರಿಂದ ಮುಚ್ಚಿರುವ ಹಳೆಯ ರಸ್ತೆಯನ್ನು ತೆರೆವುಗೊಳಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಜವರಯ್ಯ ,ಸೋಮಶೇಖರ, ರುದ್ರೇಶ ಸೇರಿದಂತೆ ಇತರರಿದ್ದರು.
ಮೈಸೂರು: ಹೊಸ ವರ್ಷಾಚರಣೆ ಹಾಗೂ ಕ್ರಿಸ್‌ಮಸ್‌ಗೆ ಮೈಸೂರು ನಗರಕ್ಕೆ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಒಳಗೊಂಡ…
ಮಂಡ್ಯ: ಈ ಜಿಲ್ಲೆಯು ಅಪ್ಪಟ ಕನ್ನಡಿಗರು ವಾಸಿಸುವ ಜಿಲ್ಲೆಯಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಈ ಜಿಲ್ಲೆಯ ಕೊಡುಗೆ…
ಮಂಡ್ಯ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ನಿಟ್ಟಿನಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಇಂಗ್ಲೀಷ್ ಮಾಧ್ಯಮದ ಶಾಲೆ ತೆರೆಯುವುದನ್ನು…
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.…
ಕಲಬುರ್ಗಿ: ಸಂವಿಧಾನದ ವಿಧಿ 371 ( ಜೆ ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು…