ಪಾಂಡವಪುರ : ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಆಲೆಮನೆಯೊಂದು ಹೊತ್ತಿ ಉರಿದು ಬೆಲೆ ಬಾಳುವ ನಾಟಿ ಹಸು, ಕರು, ಮೇಕೆ ಸಾವನ್ನಪ್ಪಿ, ಟ್ರ್ಯಾ ಕ್ಟರ್ ಸುಟ್ಟು ಕರಕಲಾಗಿ ಸುಮಾರು 10 ಲಕ್ಷ ರೂ. ನಷ್ಟ ಸಂಭವಿಸಿರುವ ಘಟನೆ ತಾಲ್ಲೂಕಿನ ದೇವೇಗೌಡನಕೊಪ್ಪಲು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ನಿವಾಸಿ ಡಿ.ಧನಂಜಯ (ಬಾಲು) ಹಾಗೂ ಡಿ.ಉಮೇಶ್ ಎಂಬುವರಿಗೆ ಸೇರಿದ ಆಲೆಮನೆ ಬೆಂಕಿಗಾಹುತಿಯಾಗಿದೆ. ದೇವೇಗೌಡನಕೊಪ್ಪಲು ಹೊರವಲಯದಲ್ಲಿರುವ ಆಲೆಮನೆಗೆ ಸೋಮವಾರ ಬೆಳಗಿನ ಜಾವ ಸುಮಾರು 3.30ರ ಸಮಯದಲ್ಲಿ ಬೆಂಕಿ ಆವರಿಸಿ ಒಂದು ನಾಟಿ ಹಸು, ಎರಡು ನಾಟಿ ಕರುಗಳು ಹಾಗೂ ಮೇಕೆಯೊಂದು ಸಾವನ್ನಪ್ಪಿವೆ. ಆಲೆಮನೆ ಬಳಿ ನಿಲ್ಲಿಸಿದ ಟ್ರ್ಯಾ ಕ್ಟರ್ ಕೂಡ ಬೆಂಕಿಗಾಹುತಿಯಾಗಿದೆ. ಮನೆ ಕಟ್ಟುವ ಸಲುವಾಗಿ ಆಲೆಮನೆಯೊಳಗೆ ಜೋಡಿಸಿಟ್ಟಿದ್ದ 3 ಲಕ್ಷ ರೂ. ಬೆಲೆ ಬಾಳುವ ತೇಗದ ಮರಗಳು ಕೂಡ ಬೆಂಕಿಗಾಹುತಿಯಾಗಿವೆ.
ಮೊದಲಿಗೆ ಕಬ್ಬಿನ ರಚ್ಚಿಗೆ ಬೆಂಕಿ ಬಿದ್ದಿದೆ. ನಂತರ ಬೆಂಕಿ ಆಲೆಮನೆಗೆ ವ್ಯಾಪಿಸಿ ಧಗ ಧಗನೆ ಹೊತ್ತಿ ಉರಿದಿದೆ. ತಕ್ಷಣವೇ ಕಾರ್ಮಿಕರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಅಲ್ಲದೆ, ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲಿ ಸಂಪೂರ್ಣ ಬೆಂಕಿ ಆಲೆಮನೆಗೆ ವ್ಯಾಪಿಸಿದ್ದರಿಂದ 10 ಲಕ್ಷ ರೂ. ನಷ್ಟವಾಗಿದೆ.
ಶಾಸಕ ದರ್ಶನ್ ಭೇಟಿ : ಘಟನಾ ಸ್ಥಳಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಒಂದು ನಾಟಿ ಹಸು ಹಾಗೂ ಎರಡು ನಾಟಿ ಕರುಗಳು ಸಾವನ್ನಪ್ಪಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದರಲ್ಲದೆ, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಆಲೆಮನೆಯ ಮಾಲೀಕರಾದ ಧನಂಜಯ ಹಾಗೂ ಉಮೇಶ್ ಅವರಿಗೆ ಭರವಸೆ ನೀಡಿದರು.
ಅಧಿಕಾರಿಗಳ ಭೇಟಿ : ಘಟನಾ ಸ್ಥಳಕ್ಕೆ ತಹಸಿಲ್ದಾರ್ ಎಸ್.ಸಂತೋಷ್, ಪೊಲೀಸ್ ಇನ್ಸ್ ಪೆಕ್ಟರ್ ಎಚ್.ಆರ್.ತ್ಯಾಗರಾಜು, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಹಿಮಾಚಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಚಿನ್ನಯ್ಯ ಆರೋಪಿಸಿದ್ದ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದೆ. ಹಣದ…
ಬೆಳಗಾವಿ: ಗ್ಯಾರಂಟಿಗಳ ಬಗ್ಗೆ ಸಿಎಲ್‌ಪಿಯಲ್ಲಿ ಚರ್ಚೆಯೇ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಶಾಸಕರು…
ಬೆಳಗಾವಿ: ನಿಜಲಿಂಗಪ್ಪನವರು ಒಬ್ಬ ದಕ್ಷ, ಪ್ರಾಮಾಣಿಕ ವ್ಯಕ್ತಿ. ಕರ್ನಾಟಕ ಕಂಡ ಅಪರೂಪದ ರಾಜಕಾರಣಿಯಾಗಿದ್ದು ಕೊನೆಯವರೆಗೂ ಪ್ರಾಮಾಣಿಕವಾಗಿ ಇದ್ದವರು ಎಂದು ಮುಖ್ಯಮಂತ್ರಿ…
ಬೆಳಗಾವಿ: ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರೂ ಕೂಡ ಗ್ಯಾರಂಟಿ ಯೋಜನೆಗಳನ್ನು ವಿರೋಧ ಮಾಡಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.…
ಕೊಡಗು: ಆಸ್ತಿ ವಿಚಾರಕ್ಕೆ ಅಣ್ಣನ ಮಗನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕಾವಾಡಿಯಲ್ಲಿ ನಡೆದಿದೆ.…
ಬೆಳಗಾವಿ: ರಾಜ್ಯದಲ್ಲಿ ಶೀಘ್ರದಲ್ಲೇ ಅರ್ಹರಿಗೆ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಘೋಷಣೆ…