ಮಂಡ್ಯ : ವಿಜ್ಞಾನ ಬೆಳೆದಂತೆ ಮೌಡ್ಯತೆಯು ಹೆಚ್ಚುತ್ತಿರುವುದು ಸೋಜಿಗವೇ ಸರಿ. ಇದು ಅಪಾಯಕಾರಿ ಬೆಳವಣಿಗೆ. ಜನರು ಮೌಡ್ಯತೆಯನ್ನು ಧಿಕ್ಕರಿಸಬೇಕು. ಜಗತ್ತಿಗೆ ಜ್ಞಾನದ ಸಂಕೇತ ನೀಡಿದ ಬುದ್ಧತತ್ವವನ್ನು ಪಾಲಿಸಬೇಕು ಎಂದು ಕೊಳ್ಳೇಗಾಲದ ಚನ್ನಲಿಂಗನಹಳ್ಳಿಯ ಚೇತವನ ಬುದ್ಧವಿಹಾರದ ಮನೋರಖ್ಖಿತ ಬಂತೇಜಿ ಕರೆ ನೀಡಿದರು.
ಇಂದು (ಮೇ.12) ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 2569 ನೇ ಭಗವಾನ್ ಬುದ್ಧ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದಿಂದ ಬುದ್ಧ ಜಯಂತಿಯನ್ನು ಆಚರಿಸಲು ನಿರ್ಧರಿಸಿರುವುದು ಸಂತಸ. ಅದಕ್ಕೆ ಸರ್ಕಾರಕ್ಕೆ ನಮ್ಮ ಕೃತಜ್ಞತೆಗಳು ಎಂದರು.
ಪಾಶ್ಚಿಮಾತ್ಯ ದೇಶಗಳಲ್ಲಿ ಜನರು ಬದ್ಧನ ತತ್ವ ಸಂದೇಶ ಮತ್ತು ಅವರ ವಿಚಾರಗಳ ಪ್ರಭಾವಕ್ಕೊಳಗಾಗಿ ಬದ್ಧ ಪಥವನ್ನು ಅನುಸರಿಸುತ್ತಿದ್ದಾರೆ, ಪ್ರಪಂಚದಲ್ಲಿ 300ಕ್ಕೂ ಹೆಚ್ಚು ಧರ್ಮಗಳಿವೆ, ಧರ್ಮವು ಮನುಷ್ಯ ಮತ್ತು ದೇವರ ನಡುವಿನ ಸಂಬಂಧದ ಕುರಿತು ಹೇಳುತ್ತದೆ, ಆದರೆ ಧಮ್ಮ ಮನುಷ್ಯ ಮತ್ತು ಅವನ ಮನಸ್ಸಿನ ನುಡುವಿನ ಸಂಬಂಧ ತಿಳಿಸುತ್ತದೆ, ಬುದ್ಧಿಸಂ ಧರ್ಮವಲ್ಲ ಎಂದು ತಿಳಿಸಿದರು.
ಮನುಷ್ಯ ಇಚ್ಚಾಶಕ್ತಿಗಿಂತ ಮಿಗಿಲಾದದ್ದು ಯಾವುದು ಇಲ್ಲ, ನಾವೆಲ್ಲರೂ ಗೌತಮ ಬುದ್ಧರ ಪಂಚಶೀಲ ತತ್ವಗಳನ್ನು ಪಾಲಿಸಿದರೆ ಅದರ ಅರಿವು, ಯಶಸ್ಸಿನ ಮಾರ್ಗಗಳನ್ನು ತಿಳಿಯಬಹುದು ಹಾಗಾಗಿ ಬುದ್ಧನ ತತ್ವಗಳನ್ನು ಪಾಲಿಸಿ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಅಧ್ಯಾಪಕರು ಮತ್ತು ಸಂಶೋಧನಾ ಸಹಾಯಕರಾದ ಡಾ. ಕಲಾವತಿ ಹೆಚ್. ಎಸ್ ಮಾತನಾಡಿ, ಬುದ್ಧನನ್ನು ಕೇವಲ ಸಮುದಾಯಗಳಿಗೆ ಸೀಮಿತ ಮಾಡಬೇಡಿ, ಬುದ್ಧನ ಪ್ರವಚನ ಕೇಳಲು ಬಡವರಿಂದ ಶ್ರೀಮಂತರವರೆಗೂ ಜನ ಸೇರುತ್ತಿದ್ದರು, ಅವರ ಧಮ್ಮಕ್ಕೆ ಅಷ್ಟು ಶಕ್ತಿ ಇತ್ತು, ಸಹಾಯ ಕರುಣೆ ಪ್ರೀತಿ ದಯೆ ಸಹನೆ ಮಾನವೀಯ ಮೌಲ್ಯಗಳನ್ನು ಗೌತಮ ಬುದ್ಧ ಹೊಂದಿದ್ದರು ಎಂದು ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಸಹ ನನ್ನ ಮೊದಲ ಗುರು ಗೌತಮ ಬುದ್ಧ ಎಂದು ಹೇಳಿದರು. ಸಹಸ್ರಾರು ವರ್ಷಗಳಿಂದ ಹಿಂದುಳಿದಿದ್ದ ಬುದ್ಧಿಸಂ ಅನ್ನು ಡಾ.ಬಿ. ಆರ್. ಅಂಬೇಡ್ಕರ್ ಅವರು ಭಾರತಾದ್ಯಂತ ಮತ್ತೆ ಪಸರಿಸಿದರು. ಬುದ್ಧ ಇಲ್ಲದೆ ಅಂಬೇಡ್ಕರ್ ಇಲ್ಲ ಅಂಬೇಡ್ಕರ್ ಇಲ್ಲದೆ ಬುದ್ಧ ಇಲ್ಲ ಎಂದು ಹೇಳಿದರು.
ಜನರು ಮೌಡ್ಯದ ಸುಳಿಯಲ್ಲಿ ಸಿಲುಕಿದಾಗ ಏಷ್ಯದ ಬೆಳಕಾದ ಗೌತಮ ಬುದ್ಧ ಯಾರು ಏನೇ ಹೇಳಿದರೂ ಸ್ವತಃ ನಾನೆ ಹೇಳಿದರು ಪ್ರಶ್ನಿಸದೇ ಯಾವುದನ್ನು ಒಪ್ಪಿಕೊಳ್ಳಬೇಡಿ, ಪ್ರಶ್ನಿಸುವುದನ್ನು ತಿಳಿಯಿರಿ ಎಂದವರು ಬುದ್ಧ, ಜ್ಞಾನ ಯಾರ ಮನೆಯ ಆಸ್ತಿಯಲ್ಲ ಅದನ್ನು ಅರಿತುಕೊಳ್ಳುವುದರ ಮೂಲಕ ನೀವು ಬುದ್ಧರಾಗಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್, ಬೌದ್ಧ ಮಹಾಸಭೆಯ ರಾಜ್ಯ ಉಪಾಧ್ಯಕ್ಷ ಶಿವರಾಜ್, ಬೌದ್ಧ ಮಹಾಸಭೆಯ ಜಿಲ್ಲಾಧ್ಯಕ್ಷ ಪ್ರೋ.ಎಂ. ವೆಂಕಟೇಶ್, ದಲಿತಪರ ಸಂಘಟನೆಯ ಮುಖಂಡ ವೆಂಕಟಗಿರಿಯ್ಯ, ಮಾಜಿ ನಗರಸಭೆಯ ಅಧ್ಯಕ್ಷೆ ವಿಜಯಲಕ್ಷ್ಮೀ, ಹಾಗೂ ಮುಖಂಡರುಗಳಾದ ಕುಮಾರಿ, ಅಮ್ಜದ್ ಪಾಷಾ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಮೆರವಣಿಗೆ
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಉದ್ಯಾನವನದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು, ನಂತರ ವರ್ಣರಂಜಿತ ರಥದ ಮೇಲೆ ಇರಿಸಲಾಗಿದ್ದ ಭಗವಾನ್ ಬುದ್ಧರ ಪುತ್ಥಳಿಗೆ ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಅವರು ಪುಷ್ಪಾರ್ಚನೆ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ಸಾಗಿತು.
ಯಾವುದೋ ಒಂದು ಹಕ್ಕು ಹೆಚ್ಚಿನ ಆದ್ಯತೆ ಹೊಂದಲು ಸಾಧ್ಯವೇ? ಕೆಲವು ಹಕ್ಕುಗಳು ಹೆಚ್ಚು ಮುಖ್ಯವಾಗುವವೇ? ಒಂದು ರೀತಿಯ ಹಕ್ಕಿನಿಂದ ಇನ್ನೊಂದು…
ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ…
ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…
ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…
ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…
ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…