ಮಂಡ್ಯ

ಬೇಬಿಬೆಟ್ಟಕ್ಕೂ ಮೈಸೂರು ಅರಸರಿಗೂ ಅವಿನಾಭಾವ ಸಂಬಂಧವಿದೆ : ಯದುವೀರ್‌ ಒಡೆಯರ್‌

ಪಾಂಡವಪುರ : ಮೈಸೂರು ಅರಸರಿಗೂ ಬೇಬಿಬೆಟ್ಟಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗೇಶ್ವರ ಮಠದ ವತಿಯಿಂದ ನಡೆದ ಲಿಂಗೈಕ್ಯ ಮರೀದೇವರು ಶ್ರೀಗಳ 15 ವರ್ಷದ ಪುಣ್ಯಸ್ಮರಣೆ, ಶ್ರೀ ಸದಾಶಿವಸ್ವಾಮೀಜಿಗಳ 5ನೇ ವರ್ಷದ ಪುಣ್ಯಸ್ಮರಣೆ, ಗದ್ದುಗೆ ಉದ್ಘಾಟನೆ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ ಅವರು, ನಮ್ಮ ಪೂರ್ವಿಕರು ದ್ವಾರಕದಿಂದ ಮೇಲುಕೋಟೆ ಹಾಗೂ ಬೇಬಿಬೆಟ್ಟಕ್ಕೆ ಬಂದಿದ್ದರು. ಬೇಬಿಬೆಟ್ಟದಲ್ಲಿ ನಡೆಯುವ ದನಗಳ ಜಾತ್ರೆ ವೇಳೆ ನಾನು ಸಹ ಕುಟುಂಬ ಸಮೇತವಾಗಿ ಆಗಮಿಸಿ ಪೂಜೆ ಸಲ್ಲಿಸಿದ್ದೇನೆ.

ನಮ್ಮ ಹಾಗೂ ಮಠದ ಸಂಬಂಧ, ಬಾಂಧವ್ಯ ಹೀಗೇ ಮುಂದುವರೆಯಲಿ ಎಂದರು. ಬೇಬಿಬೆಟ್ಟದಲ್ಲಿ ಅಮೃತ ಮಹಲ್‌ ಕಾವಲು ಪ್ರದೇಶದಲ್ಲಿ ಇರುವ ನಮ್ಮ ಸ್ವಲ್ಪ ಜಾಗವನ್ನು ಮಠದ ಅಭಿವೃದ್ಧಿಗೆ ನೀಡುವಂತೆ ಮನವಿ ಮಾಡಿದ್ದೀರಾ. ನಾನು ನಿಮ್ಮ ಮನವಿಯನ್ನು ನಮ್ಮ ತಾಯಿ ಅವರಿಗೆ ಸಲ್ಲಿಸುತ್ತೇನೆ. ಆ ಬಳಿಕ ತಾಯಿ ಅವರ ಸಲಹೆ, ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು. ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಬೇಬಿಬೆಟ್ಟಪುಣ್ಯ ಪುರುಷರು ತಪ್ಪಸ್ಸು ಮಾಡಿದ ಪವಿತ್ರ ಸ್ಥಳ. ಮೂರು ದೇವಾಲಯಗಳನ್ನು ಹೊಂದಿರುವ ಧಾರ್ಮಿಕ ಕ್ಷೇತ್ರಗಳ ಪೈಕಿ ಬೇಬಿಬೆಟ್ಟ ಕ್ಷೇತ್ರವೂ ಸಹ ಒಂದಾಗಿದೆ ಎಂದು ಹೇಳಿದರು.

ಮನುಷ್ಯರು ಮಠ, ಮಂದಿರಗಳ ಬಗ್ಗೆ ವಿಶ್ವಾಸ, ನಂಬಿಕೆಗಳನ್ನು ಬೆಳೆಸಿಕೊಳ್ಳಬೇಕು. ಕುಟುಂಬ, ಸಂಸಾರಗಳು ಮನುಷ್ಯನನ್ನು ಜಂಜಾಟದಲ್ಲಿ ಸಿಲುಕಿಸುತ್ತವೆ. ಅದೇ ಮಠ, ಮಂದಿರಗಳು ಮನುಷ್ಯ ಜಂಜಾಟವನ್ನು ಬಿಟ್ಟು ನೆಮ್ಮದಿಯಿಂದ ಜೀವನ ನಡೆಸಲು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತವೆ. ಹಾಗಾಗಿ ಪ್ರತಿಯೊಬ್ಬರು ಮಠಗಳ ಬಗ್ಗೆ ನಂಬಿಕೆ, ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಶ್ರೀರಾಮಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವಸ್ವಾಮೀಜಿ ಮಾತನಾಡಿ, ಬೇಬಿಬೆಟ್ಟ ಪವಿತ್ರವಾದ ತಪೋಭೂಮಿಯಾಗಿದೆ. ಬೇಬಿಬೆಟ್ಟದ ಮಠ 500 ವರ್ಷಗಳ ಇತಿಹಾಸ ಹೊಂದಿದ್ದು ಶ್ರೀಮರೀದೇವರು ಸ್ವಾಮೀಜಿಗಳು ಬರುವ ಮೊದಲು ಹಲವು ಸಿದ್ದಿಪುರುಷರು ಇಲ್ಲಿ ತಪ್ಪಸ್ಸು ಮಾಡಿ ಹೋಗಿದ್ದಾರೆ ಎಂದರು.

ಮೈಸೂರು ಸಂಸ್ಥಾನಕ್ಕೂ ಮಠಕ್ಕೂ ನಂಟಿದೆ. ಮಠದ ಆವರಣದಲ್ಲಿ ಮೊದಲ ಶಾಲೆಯೊಂದು ನಡೆಯುತ್ತಿತ್ತು. ಇದೀಗ ಅದನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲೊಂದು ಶಾಲೆ ತೆರೆಯಬೇಕೆಂದು ಆಲೋಚನೆ ಇದೆ. ಹಾಗಾಗಿ ಮೈಸೂರು ಅರಸುಗಳು ಮಠ ಹೊಂದಿರುವ ಜಾಗ ಹಾಗೂ ಶಾಲೆ ತೆರೆಯಲು ಅನುಕೂಲ ಮಾಡಿಕೊಂಡಬೇಕೆಂದು ಮಠದ ವತಿಯಿಂತಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಮನವಿ ಪತ್ರ ನೀಡಿದರು. ಇದಕ್ಕೂ ಮುನ್ನ ಮಠದ ಆವರಣದಲ್ಲಿ ನಿರ್ಮಿಸಲಾಗಿರುವ ಶ್ರೀಸದಾಶಿವಸ್ವಾಮೀಜಿಗಳ ಗದ್ದುಗೆಯನ್ನು ಶ್ರೀಸಿದ್ದಲಿಂಗಸ್ವಾಮೀಜಿ, ಸತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಉದ್ಘಾಟಿಸಿದರು.

ಸಮಾರಂಭದಲ್ಲಿ ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗಮಹಾಸ್ವಾಮಿ, ಕನಕಪುರದ ದೇಗುಲಮಠ ಮುಮ್ಮಡಿ ನಿರ್ವಾಣಮಹಾಸ್ವಾಮಿಜೀ ಕಲ್ಲುಮಠದ ಮಹಾಂತಸ್ವಾಮೀಜಿ, ಮಂಜುನಾಥ ಶಿವಾಚಾರ್ಯ ಸ್ವಾಮೀಜಿ, ಕರಡಿ ಗವಿಮಠದ ಶಿವಾಶಂಕರಸ್ವಾಮೀಜಿ, ಸದಾಶಿವಸ್ವಾಮೀಜಿ, ರೈತನಾಯಕಿ ಸುನೀತಪುಟ್ಟಣ್ಣಯ್ಯ, ಬಿಜೆಪಿ ಮುಖಂಡ ಡಾ.ಎನ್‌.ಎಸ್‌.ಇಂದ್ರೇಶ್‌, ಎ.ಎಲ್‌.ಕೆಂಪೂಗೌಡ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ, ತಾಲೂಕು ಅಧ್ಯಕ್ಷ ನಿರಂಜನ್‌ಬಾಬು, ಮಾಜಿ ಅಧ್ಯಕ್ಷ ಎಸ್‌.ಮಂಜುನಾಥ್‌, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯ ಸೇರಿದಂತೆ ವಿವಿಧ ಮಠಾಧೀಶರು, ಭಕ್ತರು, ಮುಖಂಡರು ಹಾಜರಿದ್ದರು.

lokesh

Recent Posts

ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾದ ಆದಿಚುಂಚನಗಿರಿ : ಬಿಗಿ ಪೊಲೀಸ್‌ ಭದ್ರತೆ

ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ…

6 hours ago

ಶಾಂತಿ ಒಪ್ಪಂದ ಜೀವಂತ | ಅಮೆರಿಕ-ಇರಾನ್ ಮಾತುಕತೆಗೆ ಸಿದ್ಧತೆ

ವಾಷಿಂಗ್ಟನ್ : ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು,…

7 hours ago

ಐವರು ಸಾಧಕರಿಗೆ ಅಂಬೇಡ್ಕರ್‌ ಪ್ರಶಸ್ತಿ ; ಪ್ರಶಸ್ತಿ ವಿತರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…

8 hours ago

ಹಾರ್ಮುಜ್ ಜಲಸಂಧಿ ದಾಟಿದ ಹಡಗುಗಳು ; ಅಮೆರಿಕದ ದಿಗ್ಬಂಧನಕ್ಕೆ ಇರಾನ್ ಸವಾಲು

ಟೆಹ್ರಾನ್‌ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…

8 hours ago

ಅಂಬೇಡ್ಕರ್‌ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಿ : ಶಾಸಕ ತನ್ವೀರ್‌ ಸೇಠ್‌

ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…

9 hours ago

ಚಾ.ನಗರ | ಹೊಸೂರು ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…

10 hours ago