ಮಂಡ್ಯ : ನಿರಂತರ ಗೈರು ಹಾಜರಿಯಿಂದ ವಜಾಗೊಂಡಿದ್ದ ಮೈಶುಗರ್ ಕಾರ್ಖಾನೆಯ ನೌಕರನೊಬ್ಬ ನಿವೃತ್ತಿ ಹಣ ನೀಡದಿದ್ದಕ್ಕೆ ಲೈವ್ ವಿಡಿಯೋ ಮಾಡಿ ವಿಷ ಕುಡಿದು ಆತ್ಮಹತ್ಯೆ ಯತ್ನಿಸಿರುವ ಘಟನೆ ತಾಲ್ಲೂಕಿನ ಹುಲಿವಾನ ಗ್ರಾಮದಲ್ಲಿ ನಡೆದಿದೆ.
ಹುಲಿವಾನ ಗ್ರಾಮದ ನಿವಾಸಿ ಎಚ್.ಎನ್.ಮಹದೇವಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ಮೈಶುಗರ್ ನಿವೃತ್ತ ನೌಕರ.
೧೦ ವರ್ಷಗಳ ಹಿಂದೆ ಮಹದೇವಸ್ವಾಮಿ ಅವರು ಸ್ವಯಂ ನಿವೃತ್ತಿ ಪಡೆದಿದ್ದರು. ಇದುವರೆಗೂ ನಿವೃತ್ತಿ ಹಣ ನೀಡಿಲ್ಲ. ಹಣ ನೀಡದೆ ಮೈಶುಗರ್ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಲೈವ್ ವಿಡಿಯೋ ಮಾಡಿದ್ದು, ಈ ಬಗ್ಗೆ ಅಧಿಕಾರಿಗಳು ಮತ್ತು ಮೈಶುಗರ್ ಅಧ್ಯಕ್ಷರಿಗೂ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಕಾನೂನು ಪ್ರಕ್ರಿಯೆ ಎಂದು ಪದೇ ಪದೇ ಸತಾಯಿಸಿದ್ದಾರೆ. ಹಣ ನೀಡದೆ ಹೋದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಈ ಹಿಂದೆಯೂ ವಿಡಿಯೋ ಮಾಡಿ ಹೇಳಿದ್ದೆ. ಆಗಲು ಹಣ ನೀಡಲಿಲ್ಲ ಎಂದು ಅಧ್ಯಕ್ಷರು ಮತ್ತು ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಮಹದೇವಸ್ವಾಮಿ ದೂರಿದ್ದಾರೆ.
ಸದ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮಹದೇವಸ್ವಾಮಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನ್ಯಾಯ ಕೊಡಿಸುವುದಾಗಿ ಅಧ್ಯಕ್ಷರ ಭರವಸೆ
ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೈಷುಗರ್ ನಿವೃತ್ತ ನೌಕರ ಮಹದೇವಸ್ವಾಮಿ ಹಾಗೂ ಪತ್ನಿ, ಪುತ್ರಿಯನ್ನು ಭೇಟಿ ಮಾಡಿದ ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ ಅವರು, ಸಮಾಧಾನ ಹೇಳಿ, ಕಾನೂನಾತ್ಮಕವಾಗಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.
ಮಿಮ್ಸ್‌ಗೆ ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ ಅವರು ಭೇಟಿ ನೀಡುತ್ತಿದ್ದಂತೆ ಮಹದೇವಸ್ವಾಮಿ ಅವರ ಪತ್ನಿ ಜ್ಯೋತಿ, ಪುತ್ರಿ ಯೋಗಿತಾ ಅವರು ಅಧ್ಯಕ್ಷರ ಕಾಲಿಗೆ ಬಿದ್ದು ಕಣ್ಣೀರು ಹಾಕಿದರು.
ಇದನ್ನು ಓದಿ : ವಾಹನ ಡಿಕ್ಕಿ : ರಸ್ತೆ ದಾಟುತಿದ್ದ ಚಿರತೆ ಸಾವು
ಇದಕ್ಕೆ ಸ್ಪಂದಿಸಿದ ಸಿ.ಡಿ.ಗಂಗಾಧರ ಅವರು, ಇಂತಹ ಘಟನೆ ನಡೆಯಬಾರದಿತ್ತು. ಕಾನೂನಾತ್ಮಕವಾಗಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.
ಕಾನೂನು ತೊಡಕಿನಿಂದ ಹಣ ನೀಡಲು ವಿಳಂಬ
ನೌಕರ ಮಹದೇವಸ್ವಾಮಿ ಅವರು ನಿರಂತರ ಗೈರು ಹಾಜರಿಯಿಂದ ವಜಾಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾನೂನಿನಡಿ ಬಗೆಹರಿಸಿಕೊಳ್ಳಬೇಕು ಇಲ್ಲವೇ ಕೇಸನ್ನು ವಾಪಸ್ ತೆಗೆದುಕೊಂಡ ನಂತರ ಹಣ ನೀಡುವುದಾಗಿ ಈ ಹಿಂದಿನ ಆಡಳಿತ ಮಂಡಳಿಯವರು ಭರವಸೆ ನಿಡಿದ್ದರು. ಅದರಂತೆ ಮಹದೇವಸ್ವಾಮಿ ಅವರು ಪ್ರಕರಣವನ್ನು ವಾಪಸ್ ಪಡೆದಿದ್ದರು. ಆದರೆ, ಪ್ರಕ್ರಿಯೆ ನಿಧಾನವಾಗಿ ಹಣ ನೀಡುವುದು ವಿಳಂಬವಾಗಿದೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ ತಿಳಿಸಿದರು.
ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹದೇವಸ್ವಾಮಿಯನ್ನು ಭೇಟಿಯಾದ ನಂತರ ಮಾಧ್ಯಮದವರೊಂದಿಗೆ ಮತನಾಡಿದ ಅವರು, ಕಳೆದ ೧೦ ವರ್ಷಗಳ ಹಿಂದೆ ಕೆಲಸದಿಂದ ವಜಾ ಮತ್ತು ಅಮಾನತ್ತಾದ ೧೩ ಜನರಿದ್ದಾರೆ. ಅವರೆಲ್ಲರೂ ಕಾನೂನಿನ ಮೊರೆ ಹೋಗಿ ಪ್ರಶ್ನೆ ಮಾಡಿದ್ದಾರೆ. ನ್ಯಾಯಾಲಯದಲ್ಲಿ ಸಮಸ್ಯೆ ಬಗೆಹರಿಸಿಕೊಂಡು ಬಂದರೆ ಹಣ ನೀಡಲಾಗುವುದು.
ಮಹದೇವಸ್ವಾಮಿ ಅವರು ಈ ಮಧ್ಯೆ ಎರಡು ಬಾರಿ ಮನವಿ ಮಾಡಿದ್ದರು. ನಾನೂ ಕೂಡ ಕಾನೂನಿನ ತಜ್ಞರೊಂದಿಗೆ ಮಾತನಾಡಲಾಗಿ, ಕೆಲ ಸಲಹೆ ಕೊಟ್ಟಿದ್ದರು. ಅದು ಚರ್ಚೆ ಹಂತದಲ್ಲಿರುವಾಗಲೇ ಈರೀತಿ ಅನಾಹುತವಾಗಿದೆ. ನಮ್ಮ ಕಂಪೆನಿಯಿಂದ ಮೂರ‍್ನಾಲ್ಕು ದಿನಗಳಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಾಗುವುದು. ಕಾನೂನು ತಜ್ಞರೊಂದಿಗೆ ಮಾತನಾಡಿ ನ್ಯಾಯ ಕೊಡಿಸುತ್ತೇವೆ ಎಂದರು.
ಮಹದೇವಸ್ವಾಮಿ ಚಿಕಿತ್ಸಾ ವೆಚ್ಚವನ್ನು ಕಂಪೆನಿ ಭರಿಸಲಿದೆ. ಎಲ್ಲದಕ್ಕೂ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ವೈದ್ಯರ ಜತೆ ಮಾತನಾಡಿದ್ದು, ವೈದ್ಯರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. ಮೈಷುಗರ್ ಸಂಸ್ಥೆಗೆ ನಾನು ಯಜಮಾನನಲ್ಲ, ಕಾವಲುಗಾರ. ನಿವೃತ್ತ ನೌಕರರಿಗೆ ಅನ್ಯಾಯ ಆಗಲು ಬಿಡಲ್ಲ. ಅವರ ಕುಟುಂಬಕ್ಕೆ ಅನುಕೂಲ ಮಾಡಿಕೊಡುತ್ತೇನೆ ಎಂದು ಗಂಗಾಧರ್ ಭರವಸೆ ನೀಡಿದರು.
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…